ಬೆಂಗಳೂರು : ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ 12ನೇ ಕಂತಿಗೆ ಸಂಬಂಧಿಸಿದ ಮಾಹಿತಿ ಮುನ್ನೆಲೆಗೆ ಬಂದಿದೆ. ದೀಪಾವಳಿಗೂ ಮುನ್ನ ರೈತರ ಖಾತೆಗೆ 12ನೇ ಕಂತಿನ ಹಣ ವರ್ಗಾವಣೆಯಾಗಲಿದೆ. ಅಕ್ಟೋಬರ್ 17 ರಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಪುಸಾದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಖಾತೆಗೆ 12ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ.


COMMERCIAL BREAK
SCROLL TO CONTINUE READING

ಮೇ 31 ರಂದು ಬಿಡುಗಡೆಯಾಗಿತ್ತು 11 ನೇ ಕಂತು : 
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಪ್ರಕಾರ, ಅಕ್ಟೋಬರ್ 17 ಮತ್ತು 18 ರಂದು ಆಯೋಜಿಸಲಾಗುವ ಅಗ್ರಿ-ಸ್ಟಾರ್ಟ್ಅಪ್ ಕಾನ್ಕ್ಲೇವ್ ಮತ್ತು ಕಿಸಾನ್ ಸಮ್ಮೇಳನ 2022 ರ ಸಂದರ್ಭದಲ್ಲಿ ಪ್ರಧಾನಿ ಮೋದಿ, ಕೆಲವು ರೈತರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಪಿಎಂ ಕಿಸಾನ್ ನಿಧಿಯ 11 ನೇ ಕಂತನ್ನು ಸರ್ಕಾರವು ಮೇ 31 ರಂದು ಬಿಡುಗಡೆ ಮಾಡಿತ್ತು. ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಆರಂಭಿಸಿರುವ ಯೋಜನೆಗಳ ಪೈಕಿ ಇದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. 


ಇದನ್ನೂ ಓದಿ : Gold Price Today : ಭಾರೀ ಅಗ್ಗವಾಯಿತು ಚಿನ್ನ ಮತ್ತು ಬೆಳ್ಳಿ, ಖರೀದಿಗೆ ಉತ್ತಮ ಸಮಯ


 ಈ ರೈತರ ಖಾತೆಗೆ ಬೀಳುವುದು 4000 ರೂ. :
ಇ-ಕೆವೈಸಿ ಮಾಡಿಸದ ರೈತರ ಖಾತೆಗೆ ಈ ಬಾರಿ 12ನೇ ಕಂತಿನ ಹಣ ವರ್ಗ ವಾಗುವುದಿಲ್ಲ ಎಂದು ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ. ಹಾಗಾಗಿ ಇ-ಕೆವೈಸಿಯನ್ನು ಇನ್ನೂ ಪೂರ್ಣಗೊಳಿಸದಿದ್ದರೆ, ಸಾಧ್ಯವಾದಷ್ಟು ಬೇಗ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಇನ್ನು, ಮೇ 31 ರಂದು ಸರ್ಕಾರ ಬಿಡುಗಡೆ ಮಾಡಿರುವ 11 ನೇ ಕಂತು ಸ್ವೀಕರಿಸದ ರೈತರು ಈ ಬಾರಿ ಅಕ್ಟೋಬರ್ 17 ರಂದು  4000 ರೂಪಾಯಿ ಸ್ವೀಕರಿಸಲಿದ್ದಾರೆ. 


ಇ-ಕೆವೈಸಿ ಮತ್ತು ಭೌತಿಕ ಪರಿಶೀಲನೆ : 
ಕಳೆದ ಕೆಲವು ತಿಂಗಳುಗಳಿಂದ ಕೆಲವು ಜನರು ಯೋಜನೆಯ ಲಾಭವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳನ್ನು ಸರ್ಕಾರ ಸ್ವೀಕರಿಸಿವೆ. ಇದಾದ ನಂತರ ಇ-ಕೆವೈಸಿ ಮತ್ತು ಭೌತಿಕ ಪರಿಶೀಲನೆಯನ್ನು ಸರ್ಕಾರ  ಕಡ್ಡಾಯಗೊಳಿಸಿದೆ. ಈ ಮೂಲಕ ಪರಿಶೀಲನೆಯ ವೇಳೆ ಅರ್ಹರೆಂದು ಕಂಡುಬಂದ ಫಲಾನುಭವಿಗಳಿಗೆ ಮಾತ್ರ 2000 ರೂ.ಗಳ ಕಂತು  ವರ್ಗಾಯಿಸಲಾಗುವುದು. 


ಇದನ್ನೂ ಓದಿ : 7th Pay Commission: DA ಹೆಚ್ಚಳದ ಬಳಿಕ ಸರ್ಕಾರಿ ನೌಕರರಿಗೆ ದೀಪಾವಳಿಗೂ ಮುನ್ನ ಮತ್ತೊಂದು ಗಿಫ್ಟ್ ನೀಡಿದ ಸರ್ಕಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.