ನವದೆಹಲಿ : PM Vaya Vandana Yojana: ಹಿರಿಯ ನಾಗರಿಕರಿಗೊಂದು ಸಂತಸದ ಸುದ್ದಿ. ಈಗ ಸರ್ಕಾರ 60 ವರ್ಷ ಮೇಲ್ಪಟ್ಟವರಿಗಾಗಿ 'ಪ್ರಧಾನಿ ವಯ ವಂದನಾ ಯೋಜನೆ' (PM Vaya Vandana Yojana) ಆರಂಭಿಸಿದೆ. ಇದರ ಅಡಿಯಲ್ಲಿ, ವಾರ್ಷಿಕವಾಗಿ 1,11,000 ರೂ.ವರೆಗೆ ಪಿಂಚಣಿ ಪಡೆಯಬಹುದು (Senior Citizens Savings Scheme) .


COMMERCIAL BREAK
SCROLL TO CONTINUE READING

ಅವಧಿ ಎಷ್ಟು ?
ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯು (PM Vaya Vandana Yojana) ವೃದ್ಧರನ್ನು ಅವರ ಜೀವನದ ನಿರ್ಣಾಯಕ ಹಂತದಲ್ಲಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ (Senior Citizens Savings Scheme). ಮೊದಲು ಇದರ ಅವಧಿಯು ಮಾರ್ಚ್ 31, 2020 ರವರೆಗೆ ಇತ್ತು. ಆದರೆ ಈಗ ಅದನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗಿದೆ.


ಇದನ್ನೂ  ಓದಿ : Air India ನೂತನ CEO ಆಗಿ Ilker Ayci ನೇಮಕ, ಇಲ್ಲಿದೆ ವಿವರ


ಯಾರು ಪ್ರಯೋಜನ ಪಡೆಯುತ್ತಾರೆ ?
ಈ ಯೋಜನೆಗೆ ಸೇರಲು ಕನಿಷ್ಠ 60 ವರ್ಷ ವಯಸ್ಸಾಗಿರಬೇಕು. ಅಂದರೆ, 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾದ ನಾಗರಿಕರು ಅದರಲ್ಲಿ ಹೂಡಿಕೆ (investment) ಮಾಡಬಹುದು. ಇದರ ಅಡಿಯಲ್ಲಿ ಗರಿಷ್ಠ ವಯಸ್ಸಿನ ಮಿತಿ ಇಲ್ಲ.


ಜವಾಬ್ದಾರಿ ವಹಿಸಿಕೊಂಡಿರುವ ಎಲ್‌ಐಸಿ  :
ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 15 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಜೀವ ವಿಮಾ ನಿಗಮಕ್ಕೆ (LIC) ವಹಿಸಲಾಗಿದೆ. ಈ ಯೋಜನೆಯಲ್ಲಿ ಪಿಂಚಣಿಗಾಗಿ, ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬೇಕು. ತದನಂತರ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿಯನ್ನು ಆರಿಸಿಕೊಳ್ಳಬಹುದು.


ವಾರ್ಷಿಕ ಪಿಂಚಣಿ ಎಷ್ಟು ಇರುತ್ತದೆ ?
ಈ ಯೋಜನೆಯಡಿಯಲ್ಲಿ, ತಿಂಗಳಿಗೆ 1000 ರೂ  ಪಿಂಚಣಿ ಪಡೆಯಲು 1,62,162 ರೂ.ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯಡಿ, ಗರಿಷ್ಠ ಮಾಸಿಕ ಪಿಂಚಣಿ  9,250 ರೂ.,  ತ್ರೈಮಾಸಿಕ  27,750 ರೂ., ಅರ್ಧ ವಾರ್ಷಿಕ ಪಿಂಚಣಿ  55,500 ರೂ., ಮತ್ತು ವಾರ್ಷಿಕ ಪಿಂಚಣಿ  1,11,000 ರೂ. ಪಡೆಯಬಹುದು.


ಇದನ್ನೂ  ಓದಿ : LIC ಪಾಲಿಸಿದಾರರಿಗೆ ಬಿಗ್ ನ್ಯೂಸ್ : ನಿಮಗೆ ‘ಲಾಭ’ ನೀಡಲು ಸರ್ಕಾರ ಮಾಡಿದೆ ಬಿಗ್ ಪ್ಲಾನ್ !


ಹೂಡಿಕೆ ಮಾಡುವುದು ಹೇಗೆ ?
PMVVY ಯೋಜನೆಯ ಬಗ್ಗೆ ವಿವರವಾದ ಮಾಹಿತಿಗಾಗಿ 022-67819281 ಅಥವಾ 022-67819290 ಅನ್ನು ಡಯಲ್ ಮಾಡಬಹುದು. ಇದಲ್ಲದೆ, ಟೋಲ್-ಫ್ರೀ ಸಂಖ್ಯೆ 1800-227-717 ಮೂಲಕವೂ ಮಾಹಿತಿ ಪಡೆಯಬಹುದು.  


ಸೇವಾ ತೆರಿಗೆ ವಿನಾಯಿತಿ :
ಈ ಯೋಜನೆಯು ಸೇವಾ ತೆರಿಗೆ ಮತ್ತು GST ಯಿಂದ ವಿನಾಯಿತಿ ಪಡೆದಿದೆ. ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಯಾವುದೇ ಗಂಭೀರ ಕಾಯಿಲೆ ಅಥವಾ ಸಂಗಾತಿಯ ಚಿಕಿತ್ಸೆಗಾಗಿ  ಈ ಹಣವನ್ನು ಮುಂಚಿತವಾಗಿ ಹಿಂಪಡೆಯಬಹುದು.


ಅಗತ್ಯ ದಾಖಲೆಗಳು :
ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯಲ್ಲಿ ಹೂಡಿಕೆ ಮಾಡಲು, ಪ್ಯಾನ್ ಕಾರ್ಡ್‌ನ ಪ್ರತಿ, ವಿಳಾಸ ಪುರಾವೆಯ ಪ್ರತಿ ಮತ್ತು ಬ್ಯಾಂಕ್ ಪಾಸ್‌ಬುಕ್‌  ಹೊಂದಿರುವುದು ಕಡ್ಡಾಯವಾಗಿದೆ.


ಇದನ್ನೂ  ಓದಿ : EPFO update : 24 ಕೋಟಿ PF ಖಾತೆದಾರರಿಗೆ ಶೀಘ್ರದಲ್ಲಿ ಸಿಗಲಿದೆ ಗುಡ್ ನ್ಯೂಸ್!


ಸಾಲ ಸೌಲಭ್ಯವೂ ಲಭ್ಯವಿದೆ :
ಈ ಯೋಜನೆಯಲ್ಲಿ ಸಾಲ ಸೌಲಭ್ಯವೂ ಇದೆ. ಇದರಲ್ಲಿ, ಪಾಲಿಸಿಯ 3 ವರ್ಷಗಳ ನಂತರ PMVVY ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು. ಗರಿಷ್ಠ ಸಾಲದ ಮೊತ್ತವು ಖರೀದಿ ಬೆಲೆಯ 75% ಮೀರಬಾರದು. ಈ ಯೋಜನೆಯು ಸರ್ಕಾರದ ಇತರ ಪಿಂಚಣಿ ಯೋಜನೆಗಳಂತೆ ತೆರಿಗೆ ಪ್ರಯೋಜನಗಳನ್ನು ಒದಗಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.