PM Surya Ghar Yojana: ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನೆ ಸಮಯದಲ್ಲಿ ಪ್ರತಿ ಮನೆಯಲ್ಲಿ ಸೌರ ಫಲಕವನ್ನು ಅಳವಡಿಸಿ ವಿದ್ಯುತ್ ಕೊರತೆ ನಿವಾರಣೆಗೆ ಹೊಸದಾಗಿ ʼಪಿಎಂ ಸೂರ್ಯ ಘರ್ʼ ಯೋಜನೆಯನ್ನು ಆರಂಭಿಸುವುದಾಗಿ ಘೋಷಿಸಿದ್ದರು. ಇದಾದ ನಂತರ ಕ್ಯಾಬಿನೆಟ್‌ನಲ್ಲಿ ಅನುಮೋದನೆ ದೊರೆತಿತ್ತು. ಈಗ ಮತ್ತೊಮ್ಮೆ ಮೋದಿ ಪ್ರಧಾನ ಮಂತ್ರಿ ಆಗಿರುವ ಕಾರಣ ಈ ಯೋಜನೆಗೆ ಮತ್ತಷ್ಟು ಹೆಚ್ಚಿನ ಸಹಾಯಧನ ದೊರೆಯುತ್ತಿದೆ.


COMMERCIAL BREAK
SCROLL TO CONTINUE READING

300 ಯೂನಿಟ್ ಉಚಿತ ವಿದ್ಯುತ್ ನೀಡುವ ಗುರಿ


ʼಪಿಎಂ ಸೂರ್ಯ ಘರ್‌ʼ ಯೋಜನೆಯಲ್ಲಿ ಮೊದಲ ಹಂತದಲ್ಲಿ 1 ಕೋಟಿ ಮನೆಗಳಿಗೆ ಸೌರ ಮೇಲ್ಛಾವಣಿ ಅಳವಡಿಸಿ, ಇದರಿಂದ ಬರುವ ವಿದ್ಯುತ್‌ನಿಂದ ಬಡವರಿಗೆ ಉಚಿತ ವಿದ್ಯುತ್ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದರಿಂದ ಮಧ್ಯಮ ಮತ್ತು ಬಡ ವರ್ಗದ ಜನರಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಬಹುದು ಎಂಬ ಆಕಾಂಕ್ಷೆ ಇದೆ. 


ಇದನ್ನೂ ಓದಿ: Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ; ಬೆಳೆಗಾರರ ಮೊಗದಲ್ಲಿ ಮಂದಹಾಸ!


ಸೌರ ವಿದ್ಯುತ್ ಫಲಕಕ್ಕೆ ತಗುಲುವ ವೆಚ್ಚ ಹಾಗೂ ಸಬ್ಸಿಡಿ ಎಷ್ಟು?


ನೀವು ʼಪಿಎಂ ಸೂರ್ಯ ಘರ್ʼ ಯೋಜನೆಯಡಿ ವಿದ್ಯುತ್ ಪ್ಯಾನೆಲ್ ಅಳವಡಿಕೆ ಮಾಡಿದ್ರೆ 1 ಕಿಲೋ ವ್ಯಾಟ್ ಸೋಲಾರ್ ಫಲಕ್ಕೆ ಒಟ್ಟು 90,000 ರೂ. ಖರ್ಚು ಆಗುತ್ತದೆ. ಅದೇ ನೀವು 2 ಕಿಲೋ ವ್ಯಾಟ್ ಸೋಲಾರ್ ಫಲಕ್ಕೆ ಒಟ್ಟು 1,50,000 ರೂ. ಖರ್ಚು ಆಗುತ್ತದೆ. 3 ಕಿಲೋ ವ್ಯಾಟ್ ಸೋಲಾರ್ ಫಲಕ್ಕೆ ಒಟ್ಟು 2,00,000 ರೂ.ವರೆಗೆ ಖರ್ಚು ಆಗುತ್ತದೆ. ನೀವು ಎಷ್ಟು ಕಿಲೋ ವ್ಯಾಟ್ ಸೋಲಾರ್ ಫಲಕ ಅಳವಡಿಕೆ ಮಾಡುತ್ತೀರಿ ಎಂಬ ಆಧಾರದ ಮೇಲೆ ಕೇಂದ್ರ ಸರ್ಕಾರವು ಸಬ್ಸಿಡಿ ನೀಡುತ್ತದೆ. ಒಂದು ಕಿಲೋ ವ್ಯಾಟ್‌ಗೆ 18,000 ರೂ., 2 ಕಿಲೋ ವ್ಯಾಟ್‌ಗೆ 30,000 ರೂ. ಹಾಗೂ 3 ಕಿಲೋ ವ್ಯಾಟ್‌ಗೆ 78,000 ರೂ. ಮೊತ್ತವನ್ನು ಸಬ್ಸಿಡಿ ನೀಡಲಾಗುತ್ತದೆ. ಈ ಸಹಾಯಧನದ ಮೊತ್ತವನ್ನು ಕೇಂದ್ರವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ.


ಸೌರಫಲಕ ಅಳವಡಿಕೆ ಮಾಡುವುದರ ಉಪಯೋಗವೇನು? 


ವಿದ್ಯುತ್ ಬಿಲ್ ಪಾವತಿಸುವ ಅವಶ್ಯಕತೆಯಿಲ್ಲ: ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಅಗತ್ಯ ಇಲ್ಲ. ಬಡವರಿಗೆ ಈ ಹಣವು ಉಳಿತಾಯ ಆಗುವುದರಲ್ಲಿ ಸಂಶಯವಿಲ್ಲ.


ವಿದ್ಯುತ್ ಮಾರಾಟ ಮಾಡಿ ಹಣ ಗಳಿಕೆ: ಸೌರ ಫಲಕ ಅಳವಡಿಕೆ ಮಾಡಿಸಿಕೊಂಡರೆ ನಿಮ್ಮ ಮನೆಯಲ್ಲಿ ಬಳಕೆ ಆಗದೆ ಉಳಿಯುವ ವಿದ್ಯುತ್ ಅನ್ನು ಬೇರೆಯವರಿಗೆ ಮಾರಾಟ ಮಾಡುವ ಮೂಲಕ ಹಣ ಗಳಿಸಲು ಸಾಧ್ಯವಿದೆ.


ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜ್ ಹಾಕಲು: ಸೌರ ಫಲಕ ಅಳವಡಿಕೆ ಮಾಡಿದರೆ ಯಾವುದೇ ಹೆಚ್ಚಿನ ಖರ್ಚು ಇಲ್ಲದೆಯೇ ಎಲೆಕ್ಟಿಕ್ ವಾಹನಗಳು ಹಾಗೂ ಎಲೆಕ್ಟ್ರಿಕ್ ಬ್ಯಾಟರಿ ಹಾಗೂ ಮೊಬೈಲ್‌ಗಳಿಗೆ ಚಾರ್ಜ್ ಹಾಕಲು ಸಹಾಯವಾಗುತ್ತದೆ.


ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ


* ಕಡ್ಡಾಯವಾಗಿ ಭಾರತೀಯ ಪ್ರಜೆ ಆಗಿರಬೇಕು


* 18 ವರ್ಷ ಮೇಲ್ಪಟ್ಟ ಯುವಕ-ಯುವತಿಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು


* ಹಿಂದುಳಿದ ಅಥವಾ ಮಾಧ್ಯಮ ವರ್ಗದವರಿಗೆ ಹೆಚ್ಚು ಆದ್ಯತೆ ಇದೆ


* ಕುಟುಂಬದ ವಾರ್ಷಿಕ ಆದಾಯ 1,50,000 ರೂ.ಗಿಂತ ಜಾಸ್ತಿ ಇರಬಾರದು


* ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಹುದ್ದೆಯಲ್ಲಿ ಇರಬಾರದು


ಇದನ್ನೂ ಓದಿDA Hike: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ... ಶೇ. 4 ರಷ್ಟು ಹೆಚ್ಚಳವಾಯ್ತು ಡಿಎ ಮತ್ತು ಡಿಆರ್! ಈ ದಿನದಿಂದ ನಿಮ್ಮ ಕೈಸೇರಲಿದೆ ಭರ್ಜರಿ ವೇತನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ