PM-SYM: ತಿಂಗಳಿಗೆ ಕೇವಲ 55 ರೂ. ಠೇವಣಿ ಮಾಡಿ, 36,000 ಪಿಂಚಣಿ ಪಡೆಯಿರಿ; ಸರ್ಕಾರದ ಈ ಯೋಜನೆಯ ಬಗ್ಗೆ ತಿಳಿಯಿರಿ
PM-SYM: ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾಂಧನ್ ಯೋಜನೆ (ಪಿಎಂ-ಎಸ್‌ವೈಎಂ) ಅನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ, ನೀವು ಪ್ರತಿ ತಿಂಗಳು 55 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ 36 ಸಾವಿರ ರೂಪಾಯಿಗಳ ಪಿಂಚಣಿಗೆ ಅರ್ಹರಾಗಬಹುದು.
ನವದೆಹಲಿ: ಪ್ರತಿಯೊಬ್ಬರೂ ತಮ್ಮ ಭವಿಷ್ಯವನ್ನು ಭದ್ರವಾಗಿಸುವ ಬಗ್ಗೆ ಚಿಂತಿತರಾಗುತ್ತಾರೆ. ಆದರೆ ಕೆಲವೊಮ್ಮೆ ನಾವು ನಮ್ಮ ಭವಿಷ್ಯವನ್ನು ಹೇಗೆ ಭದ್ರಪಡಿಸಿಕೊಳ್ಳುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗದ ಜನರು ತಮ್ಮ ವೃದ್ಧಾಪ್ಯಕ್ಕೆ ಹಣವನ್ನು ಸೇರಿಸುವುದು ತುಂಬಾ ಕಷ್ಟಕರ ಸಂಗತಿ. ಈ ಸಮಸ್ಯೆಯನ್ನು ಹೋಗಲಾಡಿಸಲು, ಕೇಂದ್ರ ಸರ್ಕಾರವು ಅನೇಕ ಪಿಂಚಣಿ ಯೋಜನೆಗಳನ್ನು ಪ್ರಾರಂಭಿಸಿದೆ, ಅದರ ಲಾಭವನ್ನು ಪಡೆದುಕೊಳ್ಳುವ ಮೂಲಕ ನಿಮ್ಮ ಭವಿಷ್ಯವನ್ನು ನೀವು ಭದ್ರಪಡಿಸಿಕೊಳ್ಳಬಹುದು.
36 ಸಾವಿರ ರೂಪಾಯಿ ಪಿಂಚಣಿ :
ಈ ಪಿಂಚಣಿ ಯೋಜನೆಗಳಲ್ಲಿ ಪ್ರಮುಖವಾದುದು ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾಂಧನ್ ಯೋಜನೆ (Pradhan Mantri Shram Yogi Maandhan Yojana). ಕೇಂದ್ರ ಸರ್ಕಾರದ ಈ ಪಿಂಚಣಿ ಯೋಜನೆ ಅಸಂಘಟಿತ ವಲಯದ ಜನರಿಗೆ 36 ಸಾವಿರ ರೂಪಾಯಿವರೆಗೆ ಪಿಂಚಣಿಯನ್ನು ಒದಗಿಸುತ್ತದೆ. 18 ರಿಂದ 40 ವರ್ಷದೊಳಗಿನ ಜನರು ಈ ಯೋಜನೆಗೆ ಸೇರಬಹುದು ಮತ್ತು ಯೋಜನೆಯಲ್ಲಿ ಪ್ರೀಮಿಯಂ ಮೊತ್ತವನ್ನು ಸಹ ವಯಸ್ಸಿನ ಆಧಾರದ ಮೇಲೆ ಭರಿಸಬೇಕಾಗುತ್ತದೆ. ಇದರಿಂದ 36,000 ರೂ.ಗಳ ವಾರ್ಷಿಕ ಪಿಂಚಣಿಯನ್ನು ಅಂದರೆ ತಿಂಗಳಿಗೆ 3000 ರೂ. ಪಿಂಚಣಿಯನ್ನು ಪಡೆಯಬಹುದು. ದೇಶಾದ್ಯಂತ ಇದಕ್ಕಾಗಿ 3.52 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಿವೆ.
ಇದನ್ನೂ ಓದಿ- Child plan : ಒಂದು ಲಕ್ಷಕ್ಕೆ ಬದಲು ಸಿಕ್ಕಿತು 8 ಲಕ್ಷ ; ಮಕ್ಕಳಿಗಾಗಿ ಬೆಸ್ಟ್ ಚೈಲ್ಡ್ ಮ್ಯುಚ್ಯವಲ್ ಫಂಡ್
ಯೋಜನೆಯ ಲಾಭವನ್ನು ಹೇಗೆ ಪಡೆಯುವುದು?
ಈ ಯೋಜನೆಯ ಲಾಭ ಪಡೆಯಲು, ನೀವು ಯಾವುದೇ ಸಾರ್ವಜನಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನಿಮ್ಮ ಪಿಎಂ-ಎಸ್‌ವೈಎಂ (PM-SYM) ಖಾತೆಯನ್ನು ತೆರೆಯಬಹುದು. ಯೋಜನೆಗೆ ಅರ್ಜಿ ಸಲ್ಲಿಸಲು, ನೀವು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್‌ನಂತಹ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಪಿಎಂ ಶ್ರಮ್ ಯೋಗಿ ಮಾಂಧನ್ ಯೋಜನೆ ಅಡಿಯಲ್ಲಿ ಖಾತೆ ತೆರೆದ ನಂತರ ಅರ್ಜಿದಾರರಿಗೆ ಶ್ರಮ ಯೋಗಿ ಕಾರ್ಡ್ ಸಹ ನೀಡಲಾಗುತ್ತದೆ.
ಇದನ್ನೂ ಓದಿ- PM-SYM ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಸಿಗಲಿದೆ 3,000 ರೂ., ಹೀಗೆ ನೋಂದಾಯಿಸಿ
ಯೋಜನೆಯಲ್ಲಿ ಹೂಡಿಕೆ ಮಾಡುವ ಪ್ರಕ್ರಿಯೆ ಏನು?
ಈ ಯೋಜನೆಯಡಿ ನೀವು 55 ರಿಂದ 200 ರೂ.ವರೆಗೆ ಹೂಡಿಕೆ ಮಾಡಬಹುದು. 18 ವರ್ಷದ ಅರ್ಜಿದಾರರು ಈ ಯೋಜನೆಯಲ್ಲಿ ಪ್ರತಿ ತಿಂಗಳು 55 ರೂ. ಭರಿಸಬೇಕಾಗುತ್ತದೆ. 30 ವರ್ಷದ ಅರ್ಜಿದಾರರು ಈ ಯೋಜನೆಯಲ್ಲಿ ಪ್ರತಿ ತಿಂಗಳು 100 ರೂ. ಹೂಡಿಕೆ ಮಾದಬೇಕಾಗುತ್ತದೆ. ಇದಲ್ಲದೆ, 40 ವರ್ಷ ವಯಸ್ಸಿನ ಅರ್ಜಿದಾರರು ಈ ಯೋಜನೆಯಲ್ಲಿ ಪ್ರತಿ ತಿಂಗಳು 200 ರೂ. ಹೂಡಿಕೆ ಮಾಡಬೇಕಾಗುತ್ತದೆ.
18 ನೇ ವಯಸ್ಸಿನಿಂದ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುವ ಅರ್ಜಿದಾರರು ಈ ಯೋಜನೆಯಲ್ಲಿ 42 ವರ್ಷ ವಯಸ್ಸಿನವರೆಗೆ ಹೂಡಿಕೆ ಮಾಡಬೇಕು. ಅರ್ಜಿದಾರರು ಪಿಎಂ ಶ್ರಮ ಯೋಗಿ ಮಾಂಧನ್ ಯೋಜನೆಯಲ್ಲಿ 60 ವರ್ಷ ವಯಸ್ಸಿನವರೆಗೆ 27,720 ರೂ. ಹೂಡಿಕೆ ಮಾಡುತ್ತಾರೆ. ಈ ಯೋಜನೆಯ ಫಲಾನುಭವಿಗಳಿಗೆ 60 ವರ್ಷದ ನಂತರ ಪ್ರತಿ ತಿಂಗಳು 3,000 ರೂಪಾಯಿ ಪಿಂಚಣಿ ನೀಡಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.