ನವದೆಹಲಿ : PNB Home Loan Offer : ನೀವು ಗೃಹ ಸಾಲ ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ, ಕೈಗೆಟುಕುವ ದರದಲ್ಲಿ ಸಾಲ ಪಡೆಯಲು ನಿಮಗೆ ಉತ್ತಮ ಅವಕಾಶವಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಇಂಡಿಪೆಂಡೆನ್ಸ್  ಡೇ ಹೋಮ್ ಲೋನ್ ಆಫರ್ ಅಡಿಯಲ್ಲಿ ಈ ಕೊಡುಗೆಗಳನ್ನು ನೀಡುತ್ತಿದೆ. ಸೆಪ್ಟೆಂಬರ್ 30 ರವರೆಗೆ ಈ ಆಫರ್ ಇರಲಿದೆ.  


COMMERCIAL BREAK
SCROLL TO CONTINUE READING

PNBಯ ಗೃಹ ಸಾಲದ ಮೇಲಿನ ಕೊಡುಗೆಗಳು :
PNB ಇಂಡಿಪೆಂಡೆನ್ಸ್  ಡೇ ಹೋಮ್ ಲೋನ್ ಆಫರ್  ಅಡಿಯಲ್ಲಿ, ಗ್ರಾಹಕರಿಂದ ಯಾವುದೇ ಪ್ರೊಸೆಸಿಂಗ್ ಶುಲ್ಕವನ್ನು ಸ್ವೀಕರಿಸುವುದಿಲ್ಲ. ಅಂದರೆ, ಯಾವುದೇ ಪ್ರೊಸೆಸಿಂಗ್ ಶುಲ್ಕ ಮತ್ತು ಡಾಕ್ಯುಮೆಂಟೇಶನ್ ಶುಲ್ಕವಿಲ್ಲದೆ ಹೋಮ್ ಲೋನ್ ಸಿಗುತ್ತದೆ. PNB ಗ್ರಾಹಕರಿಗೆ ಶೇಕಡಾ 6.80 ರಷ್ಟು ಬಡ್ಡಿ ದರದ ಮೇಲೆ ಗೃಹ ಸಾಲವನ್ನು ನೀಡುತ್ತಿದೆ. ಅಂದರೆ, PNB ಯಿಂದ ಗೃಹ ಸಾಲ ಪಡೆಯುವವರು ಕಡಿಮೆ ದರದಲ್ಲಿ ಗೃಹ ಸಾಲ (Home loan) ಪಡೆಯುತ್ತಾರೆ.  


ಇದನ್ನೂ ಓದಿ : Bank Holidays In August: ಇಂದಿನಿಂದ 5 ದಿನಗಳವರೆಗೆ ಹಲವು ಬ್ಯಾಂಕ್ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ!


PNB ಗೋಲ್ಡ್ ಮಾನಿಟೈಸೇಶನ್ ಮೇಲೆ ಆಫರ್ :
ಪಿಎನ್‌ಬಿ ಗೋಲ್ಡ್ ಮಾನಿಟೈಸೇಶನ್ ಗೂ ಅವಕಾಶವನ್ನು ನೀಡುತ್ತಿದೆ. ಗೋಲ್ಡ್ ಮಾನಿಟೈಸೇಶನ್ ಯೋಜನೆಯಡಿ ಕನಿಷ್ಠ 10 ಗ್ರಾಂ ಚಿನ್ನವನ್ನು ಜಮಾ ಮಾಡಬಹುದು. ಬ್ಯಾಂಕ್ ಠೇವಣಿಗಾಗಿ ಮೂರು ಆಯ್ಕೆಗಳನ್ನು ನೀಡುತ್ತಿದೆ. ಅಲ್ಪಾವಧಿಯ ಠೇವಣಿ 1-3 ವರ್ಷಗಳು. ಮಧ್ಯಮಾವಧಿ ಠೇವಣಿಗಳು 5-7 ವರ್ಷಗಳು ಮತ್ತು ದೀರ್ಘಾವಧಿಯ ಠೇವಣಿಗಳು 12-15 ವರ್ಷಗಳು. ಅಲ್ಪಾವಧಿ ಠೇವಣಿಗಳ ಅಡಿಯಲ್ಲಿ, 1 ವರ್ಷಕ್ಕೆ 0.50 ಶೇಕಡಾ ಬಡ್ಡಿ, 1-2 ವರ್ಷಗಳಿಗೆ 0.60 ಶೇಕಡಾ ಮತ್ತು 2-3 ವರ್ಷಗಳವರೆಗೆ 0.75 ಶೇಕಡಾ ಬಡ್ಡಿ ಲಭ್ಯವಿರುತ್ತದೆ. ಮಧ್ಯಮ ಅವಧಿಯ ಠೇವಣಿಗಳಿಗೆ ಬಡ್ಡಿ ದರ  (Interest rate) 2.25%, ದೀರ್ಘಾವಧಿಯ ಠೇವಣಿಗಳಿಗೆ ಈ ಬಡ್ಡಿ ದರ 2.50 ಶೇಕಡಾದಷ್ಟಿರುತ್ತದೆ. .


ಎಸ್‌ಬಿಐ ಆಟೋ ಲೋನ್ : 
ಎಸ್‌ಬಿಐ (SBI)ಈ ಹಿಂದೆ ರಿಟೇಲ್ ಗ್ರಾಹಕರಿಗಾಗಿ ಅನೇಕ ರೀತಿಯ ಕೊಡುಗೆಗಳನ್ನು ಪರಿಚಯಿಸಿತ್ತು.  ಎಸ್‌ಬಿಐ  ಆಟೋ ಲೋನ್ ಗೆ ಪ್ರೊಸೆಸಿಂಗ್ ಚಾರ್ಜ್ ವಿಧಿಸುವುದಿಲ್ಲ ಎಂದು ಈ ಹಿಂದೆ ಹೇಳಿತ್ತು. ಇನ್ನು ಕಾರ್ ಲೋನ್ (Car loan) ಮಾಡುವುದಾದರೆ   ಆನ್‌-ರೋಡ್‌ ಬೆಲೆಯ ಮೇಲೆ 90 ಶೇ. ದಷ್ಟು ಗೆ ಹಣಕಾಸು ಒದಗಿಸುವುದಾಗಿ ಹೇಳಿತ್ತು. ಇದಷ್ಟೇ ಅಲ್ಲದೆ , ಬ್ಯಾಂಕಿನ ಯೋನೊ ಆಪ್ (YONO app) ಮೂಲಕ ಕಾರ್ ಲೋನ್‌ಗೆ ಅರ್ಜಿ ಸಲ್ಲಿಸುವ ಗ್ರಾಹಕರು ಬಡ್ಡಿ ದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳ (0.25%) ವಿಶೇಷ ರಿಯಾಯಿತಿಯನ್ನು ಕೂಡಾ ಪಡೆಯುತ್ತಾರೆ. ಯೋನೊ ಬಳಕೆದಾರರಿಗೆ ವರ್ಷಕ್ಕೆ 7.5% ಬಡ್ಡಿದರದಲ್ಲಿ ಕಾರು ಸಾಲಗಳನ್ನು ಒದಗಿಸಲಾಗುವುದು ಎಂದು SBI ಹೇಳುತ್ತದೆ.


ಇದನ್ನೂ ಓದಿ : Petrol-Diesel Prices : ವಾಹನ ಸವಾರರೆ ಗಮನಿಸಿ : ಡೀಸೆಲ್ 20 ಪೈಸೆ ಅಗ್ಗ ; ನಿಮ್ಮ ನಗರದಲ್ಲಿ ಇಂಧನ ಬೆಲೆ ಎಷ್ಟಿದೆ?


ಎಸ್‌ಬಿಐ ಗೋಲ್ಡ್ ಲೋನ್ ಆಫರ್:
ಇದಲ್ಲದೇ, ಚಿನ್ನದ ಸಾಲವನ್ನು (SBI Gold loan) ಪಡೆಯಲು ಬಯಸುವ ಗ್ರಾಹಕರು 7.5% ಬಡ್ಡಿದರದಲ್ಲಿ 75 ಬೇಸಿಸ್ ಪಾಯಿಂಟ್‌ಗಳ (0.75%) ರಿಯಾಯಿತಿಯನ್ನು ಪಡೆಯುತ್ತಾರೆ. ಗ್ರಾಹಕರು ಯೋನೊ ಆಪ್ ಮೂಲಕ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ಅವರ ಪ್ರೊಸೆಸಿಂಗ್ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ