Post Office Scheme: ಸಾಮಾನ್ಯವಾಗಿ ಅಂಚೆ ಕಛೇರಿಯಲ್ಲಿ ಮಾಡಲಾಗುವ ಹೂಡಿಕೆಯು ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಎಂದು ಹೇಳಲಾಗುತ್ತದೆ. ನೀವು ಕೂಡ ನಿಮ್ಮ ಹೂಡಿಕೆಯ ಮೇಲೆ ಉತ್ತಮ ಲಾಭವನ್ನು ಬಯಸುತ್ತಿದ್ದರೆ, ನೀವು ಅಂಚೆ ಕಚೇರಿಯ ಸ್ಥಿರ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅಂಚೆ ಕಛೇರಿಯಲ್ಲಿ FD (ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್) ಮಾಡುವ ಮೂಲಕ, ನೀವು ಇತರ ಹಲವು ಸೌಲಭ್ಯಗಳನ್ನು ಸಹ ಪಡೆಯಬಹುದು.


COMMERCIAL BREAK
SCROLL TO CONTINUE READING

ಇದರಲ್ಲಿ ನಿಮಗೆ ಉತ್ತಮ ಲಾಭದ ಜೊತೆಗೆ ಸರ್ಕಾರದ ಗ್ಯಾರಂಟಿ ಸಿಗುತ್ತದೆ. ಇದರಲ್ಲಿ, ನೀವು ತ್ರೈಮಾಸಿಕ ಆಧಾರದ ಮೇಲೆ ಈ ಯೋಜನೆಯಲ್ಲಿ ಬಡ್ಡಿ ಲಾಭವನ್ನು (ಪೋಸ್ಟ್ ಆಫೀಸ್ FD ಬಡ್ಡಿ ದರ 2022) ಪಡೆಯುವಿರಿ. 


ಪೋಸ್ಟ್ ಆಫೀಸ್‌ನಲ್ಲಿ ಎಫ್‌ಡಿ ಪಡೆಯುವುದು ಸುಲಭ
ಅಂಚೆ ಕಚೇರಿಯಲ್ಲಿ ಎಫ್‌ಡಿ ಖಾತೆಯನ್ನು ತೆರೆಯುವುದು ತುಂಬಾ ಸುಲಭವಾಗಿದೆ. ಇಂಡಿಯಾ ಪೋಸ್ಟ್ ತನ್ನ ವೆಬ್‌ಸೈಟ್‌ನಲ್ಲಿ ಈ ಕುರಿತು ಮಾಹಿತಿಯನ್ನು ನೀಡಿದೆ. ಈ ಮಾಹಿತಿಯ ಪ್ರಕಾರ, ನೀವು 1,2, 3, 5 ವಿವಿಧ ವರ್ಷಗಳ ಕಾಲ ಪೋಸ್ಟ್ ಆಫೀಸ್‌ನಲ್ಲಿ ಎಫ್‌ಡಿ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಬಹುದು. ಈ ಯೋಜನೆಯಲ್ಲಿ ಲಭ್ಯವಿರುವ ಪ್ರಯೋಜನಗಳೇನು ಎಂಬುದನ್ನು ಒಮ್ಮೆ ತಿಳಿದುಕೊಳ್ಳೋಣ ಬನ್ನಿ.


1. ಅಂಚೆ ಕಛೇರಿಯ FD ಖಾತೆಯಲ್ಲಿ ನೀವು ಹೂಡಿಕೆ ಮಾಡಿದರೆ, ಭಾರತ ಸರ್ಕಾರವು ನಿಮಗೆ ಗ್ಯಾರಂಟಿ ನೀಡುತ್ತದೆ.
2. ಇದರಲ್ಲಿ ಹೂಡಿಕೆದಾರರ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ.
3. ಇದರಲ್ಲಿ FD ಅನ್ನು ಆಫ್‌ಲೈನ್ (ನಗದು, ಚೆಕ್) ಅಥವಾ ಆನ್‌ಲೈನ್ (ನೆಟ್ ಬ್ಯಾಂಕಿಂಗ್ / ಮೊಬೈಲ್ ಬ್ಯಾಂಕಿಂಗ್) ಮೂಲಕ ಮಾಡಬಹುದು.
4. ಇದರಲ್ಲಿ ನೀವು 1 ಕ್ಕಿಂತ ಹೆಚ್ಚು FD ಮಾಡಬಹುದು.
5. ಇದರ ಹೊರತಾಗಿ, FD ಖಾತೆಯನ್ನು ಜಂಟಿ ಖಾತೆಯನ್ನಾಗಿ ಕೂಡ ನೀವೂ ಪರಿವರ್ತಿಸಬಹುದು.
6. ಇದರಲ್ಲಿ, 5 ವರ್ಷಗಳ ಕಾಲ ನಿಶ್ಚಿತ ಠೇವಣಿ ಮಾಡುವ ಮೂಲಕ, ನೀವು ITR ಅನ್ನು ಸಲ್ಲಿಸುವ ಸಮಯದಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.
7. ನೀವು ಸುಲಭವಾಗಿ ಒಂದು ಪೋಸ್ಟ್ ಆಫೀಸ್‌ನಿಂದ ಮತ್ತೊಂದು ಪೋಸ್ಟ್ ಆಫೀಸ್‌ಗೆ ನಿಮ್ಮ FD ಅಥವಾ FD ಕ್ಯಾತೆಯನ್ನು ವರ್ಗಾಯಿಸಬಹುದು.


ಇದನ್ನೂ ಓದಿ-7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಪುನಃ ಸಿಗಲಿದೆ ಹಳೆ ಪೆನ್ಷನ್ ಲಾಭ, ಸರ್ಕಾರದ ಅದ್ಭುತ ಪ್ಲಾನ್ ಇಲ್ಲಿದೆ


ಈ ರೀತಿ FD ತೆರೆಯಿರಿ
ಪೋಸ್ಟ್ ಆಫೀಸ್‌ನಲ್ಲಿ ಎಫ್‌ಡಿ ಖಾತೆ ತೆರೆಯಲು ಬಯಸುವವರು, ಚೆಕ್ ಅಥವಾ ನಗದು ಪಾವತಿಸುವ ಮೂಲಕ ಖಾತೆಯನ್ನು ತೆರೆಯಬಹುದು. ಇದರಲ್ಲಿ ಕನಿಷ್ಠ 1000 ರೂ.ಗಳೊಂದಿಗೆ ಖಾತೆಗಳನ್ನು ತೆರೆಯಬಹುದು ಮತ್ತು ಗರಿಷ್ಠ ಮೊತ್ತವನ್ನು ಠೇವಣಿ ಮಾಡಲು ಯಾವುದೇ ಮಿತಿಯಿಲ್ಲ.


ಇದನ್ನೂ ಓದಿ-7th Pay Commission: ಜೂನ್ ತಿಂಗಳಲ್ಲಿ ಸರ್ಕಾರಿ ನೌಕರರಿಗೆ ತೆರೆದುಕೊಳ್ಳಲಿದೆಯಾ ಸರ್ಕಾರಿ ಖಜಾನೆ! ವೇತನದಲ್ಲಿ ₹40000 ವೃದ್ಧಿಯ ಸಾಧ್ಯತೆ


FD ಮೇಲೆ ಹೆಚ್ಚಿನ ಬಡ್ಡಿಯನ್ನು ಪಡೆಯಿರಿ
ಇದರ ಅಡಿಯಲ್ಲಿ, 7 ದಿನಗಳಿಂದ ಒಂದು ವರ್ಷದ ಎಫ್‌ಡಿಗೆ ಶೇಕಡಾ 5.50 ಬಡ್ಡಿ ಲಭ್ಯವಿದೆ. ಇದೇ ಬಡ್ಡಿ ದರವು 1 ವರ್ಷ 1 ದಿನದಿಂದ 2 ವರ್ಷಗಳ FD ಗಳಲ್ಲಿಯೂ ಲಭ್ಯವಿದೆ. 2 ರಿಂದ 3 ವರ್ಷಗಳ ಎಫ್.ಡಿ ಮೇಲೆಯೂ ಕೂಡ ಇದೆ ಬಡ್ಡಿದರ ಇರಲಿದೆ. . 3 ವರ್ಷಗಳಿಂದ ಒಂದು ದಿನದಿಂದ 5 ವರ್ಷಗಳವರೆಗೆ FD ಗಳ ಮೇಲೆ ಶೇ. 6.70 ರಷ್ಟು ಬಡ್ಡಿ ಸಿಗುತ್ತದೆ. ಅಂದರೆ, ಇಲ್ಲಿ ನೀವು ಎಫ್‌ಡಿಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.