Post Office Monthly Income Scheme: ಸಾರ್ವಜನಿಕರಿಗೆ ಉತ್ತಮ ಆದಾಯ ಗಳಿಸಲು ಭಾರತೀಯ ಅಂಚೆ ಇಲಾಖೆ ಹಲವು ರೀತಿಯ ಸಣ್ಣ ಉಳಿತಾಯ ಯೋಜನೆಗಳನ್ನು ನಿರ್ವಹಿಸುತ್ತದೆ. ಅದರಲ್ಲಿ ಒಂದು ಆಕರ್ಷಕ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ಪ್ರತಿ ತಿಂಗಳು ಸುಮಾರು 10,000 ರೂ.ವರೆಗೆ ಆದಾಯವನ್ನು ಗಳಿಸಬಹುದು. ಅದುವೇ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ(POMIS). 


COMMERCIAL BREAK
SCROLL TO CONTINUE READING

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ಪ್ರತಿ ತಿಂಗಳು ನಿಯಮಿತ ಆದಾಯವನ್ನು ಗಳಿಸಬಹುದು. ಈ ಯೋಜನೆಯಲ್ಲಿ ಮಿನಿಮಂ 5 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅಂಚೆ ಕಚೇರಿ ಯೋಜನೆಗಳ ಬಡ್ಡಿದರವನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸಲಾಗುತ್ತದೆ. ಪ್ರಸ್ತುತ, ಪೋಸ್ಟ್ ಆಫೀಸ್ ಯೋಜನೆಗಳಲ್ಲಿ 7.4% ಬಡ್ಡಿಯನ್ನು ನೀಡಲಾಗುತ್ತಿದೆ. 


ಇದನ್ನೂ ಓದಿ- ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಈಗ ಟ್ರೈನ್ ಟಿಕೆಟ್'ಗಾಗಿ ಸರತಿಯಲ್ಲಿ ನಿಲ್ಲುವ ಅಗತ್ಯವಿಲ್ಲ!


ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಒಂದು ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂ. ಠೇವಣಿ ಮಾಡಬಹುದು. ನೀವು ಜಂಟಿ ಖಾತೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಈ ಸಂದರ್ಭದಲ್ಲಿ 15 ಲಕ್ಷ ರೂ.ಗಳನ್ನು ಹೂಡಿ,ಎ ಮಾಡಬಹುದು. 


ಇದನ್ನೂ ಓದಿ- ಈ ಸರ್ಕಾರಿ ಯೋಜನೆಯಲ್ಲಿ ಕೇವಲ 7 ರೂ. ಉಳಿಸಿ, ತಿಂಗಳಿಗೆ 5000 ರೂ. ಪಡೆಯಿರಿ...!


ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಬಡ್ಡಿ ಲೆಕ್ಕಾಚಾರ: 
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಜಂಟಿ ಖಾತೆಯಲ್ಲಿ 15 ಲಕ್ಷ ರೂ.ಗಳನ್ನು ಒಮ್ಮೆ ಠೇವಣಿ ಇಟ್ಟರೆ ಇದರಲ್ಲಿ ಪ್ರತಿ ತಿಂಗಳು ₹ 9,250 ಹಣವನ್ನು ಬಡ್ಡಿಯಾಗಿ ಸ್ವೀಕರಿಸಬಹುದು. ಈ ಯೋಜನೆಯಲ್ಲಿ 5 ವರ್ಷಗಳವರೆಗೆ ಸ್ಥಿರ ಆದಾಯ ಲಭ್ಯವಿರುತ್ತದೆ. 


ಗಮನಾರ್ಹವಾಗಿ, ಅಂಚೆ ಕಚೇರಿ ಯೋಜನೆಗಳು ಸರ್ಕಾರಿ ಯೋಜನೆಗಳಾಗಿರುವುದರಿಂದ ಇದರಲ್ಲಿ ಹೂಡಿಕೆಯ ಮೇಲೆ ಖಚಿತ ಆದಾಯದ ಜೊತೆಗೆ ಹಣ ಮುಳುಗುವ ಅಪಾಯವೂ ಇರುವುದಿಲ್ಲ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.