ನೀವು ವೃದ್ಧಾಪ್ಯದಲ್ಲಿ ಆರ್ಥಿಕ ಸಹಾಯ ಪಡೆಯಲು ಹೂಡಿಕೆ ಮಾಡಲು ಭಯಸುತ್ತಿದ್ದೀರಾ? ಹಾಗಿದ್ರೆ ನಿಮಗೆ ಅಂಚೆ ಇಲಾಖೆಯ ಗ್ರಾಮ ಸುರಕ್ಷಾ ಅಥವಾ ಸಂಪೂರ್ಣ ಜೀವ ವಿಮಾ ಎಂದು ಕರೆಯಲ್ಪಡುವ ಈ ಯೋಜನೆ ತುಂಬಾ ಉಪಯುಕ್ತವಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದು ಸರ್ಕಾರಿ ಯೋಜನೆ ಆಗಿದ್ದು ಮತ್ತು ತುಂಬಾ ಸುರಕ್ಷಿತವಾಗಿದೆ.


COMMERCIAL BREAK
SCROLL TO CONTINUE READING

ಅಂಚೆ ಕಚೇರಿ ಗ್ರಾಮ ಸುರಕ್ಷಾ ಯೋಜನೆಯ ಬಗ್ಗೆ ತಿಳಿಯಬೇಕಾದ ಅಂಶಗಳು 


- ಈ ಯೋಜನೆ(Gram Suraksha)ಯಲ್ಲಿ ಹೂಡಿಕೆ ಮಾಡಲು ಕನಿಷ್ಠ ವಯಸ್ಸು 19 ವರ್ಷಗಳು ಮತ್ತು ಗರಿಷ್ಠ 55 ವರ್ಷಗಳು ಆಗಿರಬೇಕು.


ಇದನ್ನೂ ಓದಿ : Electricity Bill Payment: 2025 ರ ವೇಳೆಗೆ ದೇಶಾದ್ಯಂತ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ


- ಕನಿಷ್ಠ ವಿಮಾ ಮೊತ್ತ 10,000 ರೂ. ಮತ್ತು ಗರಿಷ್ಠ ವಿಮಾ ಮೊತ್ತ 10 ಲಕ್ಷ ರೂ. ಆಗಿರುತ್ತದೆ.


- 4 ವರ್ಷಗಳ ಹೂಡಿಕೆ(Investing)ಯ ನಂತರ ಸಾಲ ಸೌಲಭ್ಯ ಲಭ್ಯವಿದೆ.


-5 ವರ್ಷಗಳ ಸ್ಕೀಮ್ ಅನ್ನು ಮುಕ್ತಾಯವಾದರೆ ಬೋನಸ್‌ನ ಲಾಭ ಸಿಗಲಿದೆ.


ಇದನ್ನೂ ಓದಿ : Today Gold-Silver Price : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ₹ 370 ಇಳಿಕೆ


- ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿಗೆ ಪ್ರೀಮಿಯಂ ಪಾವತಿ ಆಯ್ಕೆಗಳಿವೆ - 55 ವರ್ಷಗಳು, 58 ವರ್ಷಗಳು ಮತ್ತು 60 ವರ್ಷಗಳು.


ಪ್ರಸ್ತುತ, ಅಂಚೆ ಕಚೇರಿ(Post Office) 60 ಸಾವಿರ ರೂ. ಬೋನಸ್ ನೀಡುತ್ತದೆ.


ಒಬ್ಬ ವ್ಯಕ್ತಿಯು 19 ನೇ ವಯಸ್ಸಿನಲ್ಲಿ 10 ಲಕ್ಷ ಮೊತ್ತದ ಗ್ರಾಮ ಸುರಕ್ಷಾ ಪಾಲಿಸಿ(Gram Suraksha policy)ಯನ್ನು ಖರೀದಿಸಿದರೆ, 55 ವರ್ಷಗಳ ಮಾಸಿಕ ಪ್ರೀಮಿಯಂ 1515 ರೂ., 58 ವರ್ಷಗಳಿಗೆ 1463 ರೂ. ಮತ್ತು 60 ವರ್ಷಗಳಿಗೆ 1411 ರೂ. 31.60 ಲಕ್ಷಗಳು, 58 ವರ್ಷಗಳವರೆಗೆ ಮೆಚ್ಯೂರಿಟಿ ಲಾಭವು  33.40 ಲಕ್ಷ ರೂ.ಗಳು ಮತ್ತು 60 ವರ್ಷಗಳವರೆಗೆ ಮೆಚ್ಯೂರಿಟಿ ಪ್ರಯೋಜನವು 34.60 ಲಕ್ಷ ರೂ. ಆಗಿರುತ್ತದೆ.


ಇದನ್ನೂ ಓದಿ : Today Petrol-Diesel Price : ಸತತ ಎರಡನೇ ದಿನವೂ ಇಳಿಕೆ ಕಂಡ ಡೀಸೆಲ್ ಬೆಲೆ ; ಹಾಗಿದ್ರೆ ಪೆಟ್ರೋಲ್ ದರ ಏನಾಗಿದೆ?


ಈ ಪಾಲಿಸಿಯು ನಾಮಿನಿ ಸೌಲಭ್ಯವನ್ನೂ ನೀಡುತ್ತದೆ. ಗ್ರಾಹಕರು ತಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ(Mobile Number)ಯನ್ನು ಅಪ್‌ಡೇಟ್ ಮಾಡಲು ಬಯಸಿದರೆ, ಅವರು ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು. ಪೋಸ್ಟಲ್ ಇನ್ಶೂರೆನ್ಸ್ ಬಗ್ಗೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ನೀವು ಟೋಲ್-ಫ್ರೀ ಸಂಖ್ಯೆ 1800 180 5232/155232 ಗೆ ಕರೆ ಮಾಡಬಹುದು. ಇದರ ಹೊರತಾಗಿ, http://www.postallifeinsurance.gov.in/ ನಿರ್ದಿಷ್ಟ ಮಾಹಿತಿಗಾಗಿ ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ