Post Office: April ನಿಂದ ಬದಲಾಗುತ್ತಿವೆ ಈ ನಿಯಮಗಳು, ಗಮನಿಸದೆ ಹೋದರೆ ತೊಂದರೆ ತಪ್ಪಿದ್ದಲ್ಲ
Post Office New Rules - ನೀವೂ ಕೂಡ ಒಂದು ವೇಳೆ ಪೋಸ್ಟ್ ಆಫೀಸ್ (India Post) ನಲ್ಲಿ ಖಾತೆ ಹೊಂದಿದ್ದರೆ, ಈ ಸುದ್ದಿ ನಿಮಗಾಗಿ.. ಏಪ್ರಿಲ್ 1 ರಿಂದ ಅಂಚೆ ಕಚೇರಿ ನಿಯಮಗಳು ಬದಲಾಗುತ್ತಿವೆ. ಈ ನಿಯಮಗಳ ಬದಲಾವಣೆ, ಕೆಲವು ಅಂಚೆ ಕಚೇರಿ ಯೋಜನೆಗಳು (Postal Scheme) ಹಾಗೂ ಅಂಚೆ ಕಚೇರಿಯ ಸಾಮಾನ್ಯ ಖಾತೆಗಳ (Postal Accounts) ಮೇಲೆ ಪ್ರಭಾವ ಬೀರಲಿವೆ.
Post Office New Rules - ನೀವೂ ಕೂಡ ಒಂದು ವೇಳೆ ಪೋಸ್ಟ್ ಆಫೀಸ್ (India Post) ನಲ್ಲಿ ಖಾತೆ ಹೊಂದಿದ್ದರೆ, ಈ ಸುದ್ದಿ ನಿಮಗಾಗಿ.. ಏಪ್ರಿಲ್ 1 ರಿಂದ ಅಂಚೆ ಕಚೇರಿ ನಿಯಮಗಳು ಬದಲಾಗುತ್ತಿವೆ. ಈ ನಿಯಮಗಳ ಬದಲಾವಣೆ, ಕೆಲವು ಅಂಚೆ ಕಚೇರಿ ಯೋಜನೆಗಳು (Postal Scheme) ಹಾಗೂ ಅಂಚೆ ಕಚೇರಿಯ ಸಾಮಾನ್ಯ ಖಾತೆಗಳ (Postal Accounts) ಮೇಲೆ ಪ್ರಭಾವ ಬೀರಲಿವೆ. ಈ ಹೊಸ ನಿಯಮಗಳು (Post Office Rule Change) ಯಾವುವು ತಿಳಿದುಕೊಳ್ಳೋಣ ಬನ್ನಿ,
ಉಳಿತಾಯ ಖಾತೆ ಕಡ್ಡಾಯ
ಹೊಸ ನಿಯಮಗಳ ಪ್ರಕಾರ, ಗ್ರಾಹಕರು ಸಮಯ ಠೇವಣಿ ಖಾತೆ (Term Deposit), ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizen Savings Scheme) ಮತ್ತು ಮಾಸಿಕ ಆದಾಯ ಯೋಜನೆಗಳಲ್ಲಿ (Monthly Income Scheme) ಹೂಡಿಕೆ ಮಾಡಲು ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆಯನ್ನು ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ. ಏಕೆಂದರೆ, ಈ ಸಣ್ಣ ಉಳಿತಾಯ ಖಾತೆಗಳಿಂದ ಬರುವ ಬಡ್ಡಿದರವನ್ನು ನಿಮ್ಮ ಉಳಿತಾಯ ಖಾತೆಗೆ ಜಮೆ ಮಾಡಲಾಗುವುದು.
ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಹೋಳಿ ಉಡುಗೊರೆ! ವೇತನದಲ್ಲಿ ₹8,000 ಹೆಚ್ಚಳ
ಪೋಸ್ಟ್ ಆಫೀಸ್ ಯೋಜನೆಯೊಂದಿಗೆ ಖಾತೆಯನ್ನು ಲಿಂಕ್ ಮಾಡಿ
ಒಂದು ವೇಳೆ ನೀವು ಈಗಾಗಲೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಖಾತೆಯನ್ನು ಹೊಂದಿದ್ದರೆ, ಖಂಡಿತವಾಗಿಯೂ ಅದನ್ನು ಪೋಸ್ಟ್ ಆಫೀಸ್‌ನ ಸಣ್ಣ ಉಳಿತಾಯ ಖಾತೆಗೆ ಲಿಂಕ್ ಮಾಡಿ.
ಇದನ್ನೂ ಓದಿ-NPS ನಿಯಮಗಳಲ್ಲಿ ಭಾರೀ ಬದಲಾವಣೆ : ಈಗ ನಿಮಗೆ 75 ವರ್ಷಗಳವರೆಗೆ ಪಿಂಚಣಿ ಮತ್ತು ಹೆಚ್ಚಿನ ಪ್ರಯೋಜನಗಳು!
ವಾಪಸಾತಿ ಶುಲ್ಕ
ಭಾರತೀಯ ಅಂಚೆ ಕಚೇರಿಯ ಉಳಿತಾಯ ಮತ್ತು ಚಾಲ್ತಿ ಖಾತೆಗೆ ಒಂದು ತಿಂಗಳಲ್ಲಿ 25,000 ರೂ.ಗಳನ್ನು ಹಿಂಪಡೆಯಲು ಯಾವುದೇ ಶುಲ್ಕ ವಿಧಿಸುವುದಿಲ್ಲ. ಇದರ ನಂತರ, ಗ್ರಾಹಕರು ಹಣ ಹಿಂಪಡೆದರೆ, ಅವರಿಗೆ ಕನಿಷ್ಠ 25 ರೂ ಅಥವಾ ಒಟ್ಟು ಹಿಂಪಡೆಯುವ ಮೊತ್ತದ ಶೇ.0.5ರಷ್ಟು ಶುಲ್ಕ ಅನ್ವಯಿಸಲಿದೆ.
ಇದನ್ನೂ ಓದಿ-13-03-2022 Today Gold Price:ಆಭರಣ ಪ್ರಿಯರಿಗೆ ಶಾಕ್.. ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.