Post Office Saving Schemes: ಕೇವಲ 114 ತಿಂಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತೆ..!
Post Office Saving Schemes: ಟೈಮ್ ಡೆಪಾಸಿಟ್ ಯೋಜನೆಯಡಿ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿಯ ಪ್ರಯೋಜನವಿದೆ. ಇದರ ಖಾತೆ ತೆರೆಯುವಾಗ ನಾಮನಿರ್ದೇಶನ ಸೌಲಭ್ಯವೂ ಲಭ್ಯವಿದೆ. ಇದರ ಜೊತೆಗೆ ಅಕಾಲಿಕ ಹಿಂಪಡೆಯುವಿಕೆಗೆ ದಂಡ ವಿಧಿಸಲಾಗುತ್ತದೆ.
Post Office Saving Schemes: ನಿಮ್ಮ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ಅತ್ಯುತ್ತಮ ಆಯ್ಕೆ. ಅಂಚೆ ಕಚೇರಿಯಲ್ಲಿ ಹಲವಾರು ಸಣ್ಣ ಉಳಿತಾಯ ಯೋಜನೆಗಳು ಮತ್ತು FDಗಳಿದ್ದರೂ ಪೋಸ್ಟ್ ಆಫೀಸ್‍ನ ಟೈಮ್ ಡೆಪಾಸಿಟ್ ಸ್ಕೀಮ್ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ನೀವು ಈ ಉಳಿತಾಯ ಯೋಜನೆಯಲ್ಲಿ SBI ಬ್ಯಾಂಕ್‍ಗಿಂತಲೂ ಹೆಚ್ಚಿನ ಬಡ್ಡಿ ಪಡೆಯತ್ತೀರಿ. ಈ ಯೋಜನೆಯಡಿ ನೀವು 1, 2, 3 ಮತ್ತು 5 ವರ್ಷಗಳವರೆಗೆ ಹಣ ಠೇವಣಿ ಮಾಡಬಹುದು. ಇದರಿಂದ ನೀವು ಉತ್ತಮ ಬಡ್ಡಿ ಪ್ರಯೋಜನ ಪಡೆಯಬಹುದಾಗಿದೆ.
ಶೇ.7.5ರಷ್ಟು ಬಡ್ಡಿ
SBIನಲ್ಲಿ 5 ವರ್ಷಗಳ ಸ್ಥಿರ ಠೇವಣಿಯ ಮೇಲೆ ಶೇ.6.50ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಆದ್ರೆ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಯೋಜನೆಯಡಿ 5 ವರ್ಷಗಳ ಠೇವಣಿ ಮೇಲೆ ವಾರ್ಷಿಕ ಶೇ.7.5ರಷ್ಟು ಬಡ್ಡಿ ಪಡೆಯಬಹುದು. ನೀವು 1ರಿಂದ 3 ವರ್ಷಗಳ ಟಿಡಿ ಮಾಡಿದ್ರೆ ಶೇ.6.90ರ ದರದಲ್ಲಿ ಬಡ್ಡಿ ಪಡೆಯುತ್ತೀರಿ. ಇದಲ್ಲದೆ ನೀವು 5 ವರ್ಷಗಳವರೆಗಿನ ಠೇವಣಿಗಳ ಮೇಲೆ ಶೇ.7.5ರಷ್ಟು ಬಡ್ಡಿ ಪ್ರಯೋಜನ ಪಡೆಯುತ್ತೀರಿ.
ಇದನ್ನೂ ಓದಿ: 3D Printed Post Office: ಬೆಂಗಳೂರಿನಲ್ಲಿ ಭಾರತದ ಮೊದಲ 3D ಮುದ್ರಿತ ಅಂಚೆ ಕಚೇರಿ
114 ತಿಂಗಳಲ್ಲಿ ಹಣ ಡಬಲ್!: ನೀವು ಟೈಮ್ ಡೆಪಾಸಿಟ್ ಯೋಜನೆಯಡಿ ಹಣ ಹೂಡಿಕೆ ಮಾಡಿದ್ರೆ ಶೇ.7.5ರ ಬಡ್ಡಿಯೊಂದಿಗೆ ನಿಮ್ಮ ಹಣ ದ್ವಿಗುಣಗೊಳ್ಳಲು 9 ವರ್ಷ 6 ತಿಂಗಳು ಅಂದರೆ 114 ತಿಂಗಳು ಬೇಕಾಗುತ್ತದೆ.
ಠೇವಣಿ ಮಾಡಬೇಕಾದ ಮೊತ್ತ : 5 ಲಕ್ಷ ರೂ.
ಈ ಯೋಜನೆಯಡಿ ಸಿಗುವ ಬಡ್ಡಿ: ಶೇ.7.5ರಷ್ಟು
ಮೆಚ್ಯೂರಿಟಿ ಅವಧಿ: 5 ವರ್ಷಗಳು
ಮೆಚ್ಯೂರಿಟಿ ಮೊತ್ತ: 7,24,974 ರೂ.
ಬಡ್ಡಿ ಪ್ರಯೋಜನ: 2,24,974 ರೂ.
ಯಾರು ಖಾತೆ ತೆರೆಯಬಹುದು?: ಈ ಯೋಜನೆಯಡಿ ಪ್ರತಿಯೊಬ್ಬರೂ ಸಹ ಖಾತೆ ತೆರೆಯಬಹುದು. 3 ವಯಸ್ಕರು ಒಟ್ಟಾಗಿ ಜಂಟಿ ಖಾತೆ (ಟೈಮ್ ಡೆಪಾಸಿಟ್ ಜಂಟಿ ಖಾತೆ) ತೆರೆಯಬಹುದು. ಅದೇ ರೀತಿ ಪೋಷಕರು 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು.
ಟೈಮ್ ಡೆಪಾಸಿಟ್'ನ ಪ್ರಯೋಜನ: ಟೈಮ್ ಡೆಪಾಸಿಟ್ ಯೋಜನೆಯಡಿ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿಯ ಪ್ರಯೋಜನವಿದೆ. ಇದರ ಖಾತೆ ತೆರೆಯುವಾಗ ನಾಮನಿರ್ದೇಶನ ಸೌಲಭ್ಯವೂ ಲಭ್ಯವಿದೆ. ಇದರ ಜೊತೆಗೆ ಅಕಾಲಿಕ ಹಿಂಪಡೆಯುವಿಕೆಗೆ ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ: ಹಿರಿಯ ನಾಗರಿಕರಿಗೊಂದು ಭಾರಿ ಸಂತಸದ ಸುದ್ದಿ, ಈ 4 ಬ್ಯಾಂಕ್ ಗಳಲ್ಲಿ ನಿಮ್ಮ ಖಾತೆಯೂ ಇದೆಯಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.