Post Office Saving Schemes: ಕೇವಲ 10 ರೂ.ನಿಂದ ಉಳಿತಾಯ ಆರಂಭಿಸಿ ಬ್ಯಾಂಕ್ಗಳಿಗಿಂತ ಹೆಚ್ಚು ಬಡ್ಡಿ ಗಳಿಸಲು ಸುವರ್ಣಾವಕಾಶ!
Post Office Saving Schemes: ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಬ್ಯಾಂಕ್‌ಗಳಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಗಳಿಸಬಹುದು. ಇದಕ್ಕಾಗಿ ನೀವು ಹೆಚ್ಚು ಖರ್ಚು ಮಾಡಬೇಕಿಲ್ಲ, ಕೇವಲ 10 ರೂ. ನಿಂದ ನಿಮ್ಮ ಸೇವಿಂಗ್ಸ್ ಆರಂಭಿಸಬಹುದು.
Post Office Saving Schemes: ಹನಿ-ಹನಿ ಸೇರಿದರೆ ಹಳ್ಳ ಎಂಬಂತೆ ಪೈಸೆ ಪೈಸೆ ಕೂಡಿಟ್ಟರೆ ಒಂದು ದೊಡ್ಡ ಮೊತ್ತವನ್ನು ಕಲೆ ಹಾಕಬಹುದು. ಇದಕ್ಕಾಗಿ ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳು ತುಂಬಾ ಲಾಭದಾಯಕವಾಗಿದೆ. ಇನ್ನೂ ವಿಶೇಷವೆಂದರೆ ಈ ಯೋಜನೆಗಳಲ್ಲಿ ಬ್ಯಾಂಕ್‌ಗಳಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.
ಹೌದು, ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿಯಲ್ಲಿ ಮಾಸಿಕ ಕೇವಲ 10 ರೂಪಾಯಿಯೊಂದಿಗೆ ಹೂಡಿಕೆ ಆರಂಭಿಸಬಹುದು. ಹೂಡಿಕೆಗಾಗಿ ಗರಿಷ್ಠ ಮಿತಿಯಿಲ್ಲ.
ಇದನ್ನೂ ಓದಿ- SCAM ALERT: SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ಯಾ! ನಿಮ್ಮ ಫೋನ್ ಗೆ ಈ ರೀತಿ ಮೆಸೇಜ್ ಬಂದ್ರೆ, ಎಚ್ಚರ!
ಬ್ಯಾಂಕ್ ಆರ್‌ಡಿಗಿಂತ ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ಹೆಚ್ಚಿನ ಬಡ್ಡಿಯನ್ನು ಪಾವತಿಸಲಾಗುತ್ತದೆ. ಈ ಯೋಜನೆಯಲ್ಲಿ 5 ವರ್ಷದವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಪ್ರಸ್ತುತ, ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ವಾರ್ಷಿಯ 6.9% ಬಡ್ಡಿಯನ್ನು ಪಾವತಿಸಲಾಗುತ್ತಿದೆ.
ಇದನ್ನೂ ಓದಿ- ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ವೇತನದಲ್ಲಿ ಶೇ.186ರಷ್ಟು ಹೆಚ್ಚಳ
ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿಯಲ್ಲಿ ನಗದು/ಚೆಕ್ ಮೂಲಕ ಖಾತೆ ತೆರೆಯಬಹುದು. ಇದರಲ್ಲಿ ನಾಮನಿರ್ದೇಶನ ಸೌಲಭ್ಯವನ್ನೂ ಸಹ ಒದಗಿಸಲಾಗುತ್ತದೆ. ಅಗತ್ಯವಿದ್ದರೆ, ನಿಮ್ಮ ಖಾತೆಯನ್ನು ಒಂದು ಬ್ರಾಂಚ್ ನಿಂದ ಮತ್ತೊಂದು ಬ್ರಾಂಚ್ ಗೆ ವರ್ಗಾಯಿಸಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.