ನವದೆಹಲಿ: Post Office Scheme- ಸಾಮಾನ್ಯವಾಗಿ ಯಾವುದೇ ಹೂಡಿಕೆಯು ಅದಕ್ಕೆ ಸಂಬಂಧಿಸಿದ ಅಪಾಯಕಾರಿ ಅಂಶಗಳನ್ನೂ ಸಹ ಒಳಗೊಂಡಿರುತ್ತದೆ. ಪ್ರತಿಯೊಬ್ಬರೂ ತಮ್ಮ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಕೆಲವು ಹೆಚ್ಚಿನ ಆದಾಯ ಗಳಿಸುವ ದೃಷ್ಟಿಯಿಂದ ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಇಲ್ಲಿ ಅಪಾಯವೂ ಹೆಚ್ಸಿರುತ್ತದೆ. ಆದರೆ ಎಲ್ಲರಿಗೂ ಅಪಾಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೀವು ಲಾಭವನ್ನು ಹೊಂದಿರುವ ಮತ್ತು ಯಾವುದೇ ಅಪಾಯವಿಲ್ಲದ ಹೂಡಿಕೆ ಬಯಸಿದರೆ, ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಯು ನಿಮಗೆ ಉತ್ತಮವಾಗಿದೆ. 


COMMERCIAL BREAK
SCROLL TO CONTINUE READING

ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸದ ಜನರಲ್ಲಿ ನೀವೂ ಒಬ್ಬರಾಗಿದ್ದರೆ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳು (Post Office Small Savings Scheme) ನಿಮಗೆ ಉತ್ತಮ ಆಯ್ಕೆಯಾಗಿರಬಹುದು.  ಅಂಚೆ ಕಚೇರಿಯಲ್ಲಿ ಹಲವು ಹೂಡಿಕೆ ಆಯ್ಕೆಗಳಿವೆ. ಅವುಗಳಲ್ಲಿ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಕೂಡ ಒಂದು.


ಪೋಸ್ಟ್ ಆಫೀಸ್ ಆರ್‌ಡಿ ನಲ್ಲಿ ಹೂಡಿಕೆ ಮಾಡುವುದು ಹೇಗೆ?
ಅಂಚೆ ಕಛೇರಿಯ ಆರ್‌ಡಿ (Post Office RD) ಠೇವಣಿ ಖಾತೆಯು ಸಣ್ಣ ಕಂತುಗಳನ್ನು ಠೇವಣಿ ಇಡುವ ಸರ್ಕಾರದ ಖಾತರಿಯ ಯೋಜನೆಯಾಗಿದ್ದು, ಇದರಲ್ಲಿ ನೀವು ಕೇವಲ 100 ರೂ.ಗಳ ಸಣ್ಣ ಮೊತ್ತದೊಂದಿಗೆ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಗರಿಷ್ಠ ಹೂಡಿಕೆಯ ಮಿತಿಯಿಲ್ಲ, ನಿಮಗೆ ಬೇಕಾದಷ್ಟು ಹಣವನ್ನು ನೀವು ಹೂಡಿಕೆ ಮಾಡಬಹುದು. 


ಇದನ್ನೂ ಓದಿ- Child Future: ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಬೆಸ್ಟ್ ಹೂಡಿಕೆ ಆಯ್ಕೆಗಳಿವು


ಈ ಯೋಜನೆಯ ಖಾತೆಯನ್ನು ಐದು ವರ್ಷಗಳವರೆಗೆ ತೆರೆಯಲಾಗುತ್ತದೆ. ಆದಾಗ್ಯೂ, ಬ್ಯಾಂಕುಗಳು ಆರು ತಿಂಗಳು, 1 ವರ್ಷ, 2 ವರ್ಷ, 3 ವರ್ಷಗಳವರೆಗೆ ಮರುಕಳಿಸುವ ಠೇವಣಿ (Recurring Deposit) ಖಾತೆಗಳ ಸೌಲಭ್ಯವನ್ನು ನೀಡುತ್ತವೆ. ಠೇವಣಿ ಮಾಡಿದ ಹಣದ ಮೇಲೆ ಪ್ರತಿ ತ್ರೈಮಾಸಿಕದಲ್ಲಿ (ವಾರ್ಷಿಕ ದರದಲ್ಲಿ) ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ ಮತ್ತು ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ನಿಮ್ಮ ಖಾತೆಗೆ (ಸಂಯುಕ್ತ ಬಡ್ಡಿ ಸೇರಿದಂತೆ) ಸೇರಿಸಲಾಗುತ್ತದೆ.


ನೀವು ಎಷ್ಟು ಬಡ್ಡಿ ಪಡೆಯುತ್ತೀರಿ?
ಪ್ರಸ್ತುತ, ಮರುಕಳಿಸುವ ಠೇವಣಿ ಯೋಜನೆಯಲ್ಲಿ 5.8% ಬಡ್ಡಿ ಲಭ್ಯವಿದೆ. ಈ ಹೊಸ ದರವು 1 ನೇ ಏಪ್ರಿಲ್ 2020 ರಿಂದ ಅನ್ವಯವಾಗುತ್ತದೆ. ಭಾರತ ಸರ್ಕಾರವು ತನ್ನ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ (Small Saving Schemes)  ಬಡ್ಡಿದರಗಳನ್ನು ಪ್ರತಿ ತ್ರೈಮಾಸಿಕದಲ್ಲಿ ನಿಗದಿಪಡಿಸುತ್ತದೆ. 


ನೀವು ಪ್ರತಿ ತಿಂಗಳು 10 ಸಾವಿರ ಹೂಡಿಕೆ ಮಾಡಿದರೆ, ನಿಮಗೆ 16 ಲಕ್ಷ ಸಿಗುತ್ತದೆ:
ನೀವು ಅಂಚೆ ಕಚೇರಿಯ ಮರುಕಳಿಸುವ ಠೇವಣಿ ಯೋಜನೆಯಲ್ಲಿ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು  10 ವರ್ಷಗಳವರೆಗೆ ಹೂಡಿಕೆ ಮಾಡಿದರೆ, 10 ವರ್ಷಗಳ ನಂತರ ನೀವು 5.8% ಬಡ್ಡಿ ದರದಲ್ಲಿ 16 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನದನ್ನು ಪಡೆಯುತ್ತೀರಿ. 


* ಪ್ರತಿ ತಿಂಗಳ ಹೂಡಿಕೆ - 10,000 ರೂ.
* ಬಡ್ಡಿ ದರ - 5.8%
* ಮುಕ್ತಾಯ ಅವಧಿ - 10 ವರ್ಷಗಳು
*10 ವರ್ಷಗಳ ನಂತರ ಮೆಚ್ಯೂರಿಟಿ ಮೊತ್ತ  = 16,28,963 ರೂ.


ಇದನ್ನೂ ಓದಿ- PM Kisan: ಪಿಎಂ ಕಿಸಾನ್ ಅಡಿಯಲ್ಲಿ 4000 ರೂಗಳನ್ನು ಪಡೆಯಲು ಕೊನೆಯ ಅವಕಾಶ! ಈಗಲೇ ನೋಂದಣಿ ಮಾಡಿ


ಆರ್‌ಡಿ ಖಾತೆಯ ಪ್ರಮುಖ ವಿಷಯಗಳು :
ನೀವು ಖಾತೆಯಲ್ಲಿ ನಿಯಮಿತವಾಗಿ ಹಣವನ್ನು ಜಮೆ ಮಾಡಬೇಕಾಗುತ್ತದೆ, ನೀವು ಹಣವನ್ನು ಜಮಾ ಮಾಡದಿದ್ದರೆ ಪ್ರತಿ ತಿಂಗಳು ಒಂದು ಶೇಕಡಾ ದಂಡವನ್ನು ಪಾವತಿಸಬೇಕಾಗುತ್ತದೆ. 4 ಕಂತುಗಳು ತಪ್ಪಿದ ನಂತರ ನಿಮ್ಮ ಖಾತೆಯನ್ನು ಮುಚ್ಚಲಾಗುತ್ತದೆ. 


ಪೋಸ್ಟ್ ಆಫೀಸ್ ಆರ್‌ಡಿ ಮೇಲೆ ತೆರಿಗೆ:
ಮರುಕಳಿಸುವ ಠೇವಣಿಗಳಲ್ಲಿನ ಹೂಡಿಕೆಯ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ, ಠೇವಣಿ 40,000 ರೂ. ಮೀರಿದರೆ ನಂತರ ವಾರ್ಷಿಕ 10% ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಆರ್‌ಡಿ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಸಂಪೂರ್ಣ ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ. ಯಾವುದೇ ತೆರಿಗೆಯ ಆದಾಯವನ್ನು ಹೊಂದಿರದ ಹೂಡಿಕೆದಾರರು ಎಫ್‌ಡಿಗಳಂತೆಯೇ ಫಾರ್ಮ್ 15 ಜಿ ಸಲ್ಲಿಸುವ ಮೂಲಕ ಟಿಡಿಎಸ್ ವಿನಾಯಿತಿ ಪಡೆಯಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.