Post Office MIS Scheme: ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಕೋನದಿಂದ ಜನರು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಪೋಸ್ಟ್ ಆಫೀಸ್ ಕೂಡ ತನ್ನ ಗ್ರಾಹಕರಿಗಾಗಿ ಆಗಾಗ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇಂದು ನಾವು ನಿಮಗೆ ಅಂತಹುದೇ ಒಂದು ಪೋಸ್ಟ್ ಆಫೀಸ್ ಯೋಜನೆಯ ಕುರಿತು ಮಾಹಿತಿಯನ್ನು ಹೇಳಲಿದ್ದೇವೆ. ಈ ಯೋಜನೆಯಡಿ ನೀವು ಒಮ್ಮೆ ಮಾತ್ರ ಹಣವನ್ನು ಹೂಡಿಕೆ ಮಾಡಿ ನಂತರ ಪಿಂಚಣಿಯ ರೂಪದಲ್ಲಿ ಅದರ ಬಡ್ಡಿಯನ್ನು ಪಡೆಯಬಹುದು. ಯೋಜನೆಯ ಪರಿಪಕ್ವತೆಯ ಬಳಿಕ ನೀವು ಹೂಡಿಕೆ ಮಾಡಿರುವ ಎಲ್ಲಾ ಹಣ ನಿಮಗೆ ವಾಪಸ್ ಸಿಗಲಿದೆ. 


COMMERCIAL BREAK
SCROLL TO CONTINUE READING

ಯಾವುದು ಆ ಸ್ಕೀಮ್?
ಪೋಸ್ಟ್ ಆಫೀಸ್ ನ ಈ ಯೋಜನೆಯ ಹೆಸರು ಪೋಸ್ ಆಫೀಸ್ ಮಂಥಲಿ ಇನ್ಕಂ ಸ್ಕೀಮ್. ಈ ಯೋಜನೆಯಲ್ಲಿ ಕನಿಷ್ಠ ಅಂದರೆ ರೂ.1000 ಹಾಗೂ 100ರ ಗುಣಕದಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯ ಅಡಿ ನೀವು ಗರಿಷ್ಠ ಅಂದರೆ 4.5 ಲಕ್ಷ ರೂ. ಹೂಡಿಕೆಯನ್ನು ಮಾಡಬಹುದು. ಆದರೆ, ಈ ಮಿತಿ ಕೇವಲ ಸಿಂಗಲ್ ಅಕೌಂಟ್ ಗಾಗಿ ಮಾತ್ರ ಇದೆ. ಜಂಟಿ ಖಾತೆಯ ಗರಿಷ್ಠ ಮಿತಿ 9 ಲಕ್ಷ ರೂ.ಗಳಾಗಿದೆ. ಈ ಯೋಜನೆಯ ಅಡಿ ಗರಿಷ್ಟ ಅಂದರೆ 3 ಜನರು ಸೇರಿ ಜಂಟಿ ಖಾತೆಯನ್ನು ತೆರೆಯಬಹುದು. ಇದಲ್ಲದೆ ಅಪ್ರಾಪ್ತ ಬಾಲಕನ ಹೆಸರಿನಲ್ಲಿ ಪೋಷಕರು ಖಾತೆಯನ್ನು ತೆರೆಯಬಹುದಾಗಿದೆ. 10 ವರ್ಷದ ಮಗುವಿನ ಹೆಸರಿನಲ್ಲಿಯೂ ಕೂಡ ಅಂಚೆ ಕಚೇರಿಯಲ್ಲಿ ಎಂಐಎಸ್ ಖಾತೆಯನ್ನು ತೆರೆಯಬಹುದು. 

ಬಡ್ಡಿ ಎಷ್ಟು ಸಿಗುತ್ತದೆ?
ಈ ಯೋಜನೆಯ ಅಡಿ ಮಾಸಿಕ ಆಧಾರದ ಮೇಲೆ ಹಣ ಪಾವತಿಸಲಾಗುತ್ತದೆ. ಪ್ರಸ್ತುತ ಈ ಖಾತೆಯ ಮೇಲೆ ಶೇ.6.6ರಷ್ಟು ಬಡ್ಡಿಯನ್ನು ಪಾವತಿಸಲಾಗುತ್ತಿದೆ ಮತ್ತು ಇದು ಸರಳ ಬಡ್ಡಿಯಾಗಿದೆ. ಒಂದು ವೇಳೆ ಗ್ರಾಹಕರು ಮಾಸಿಕ ಆಧಾರದ ಮೇಲೆ ಈ ಬಡ್ಡಿಯನ್ನು ಪಡೆಯದೇ ಹೋದರೆ, ಆ ಹಣದ ಮೇಲೆ ಹೆಚ್ಚುವರಿ ಬಡ್ಡಿಯ ಲಾಭ ಸಿಗುವುದಿಲ್ಲ. 

ಈ ಯೋಜನೆಯ ಗರಿಷ್ಠ ಅವಧಿ ಐದು ವರ್ಷಗಳದ್ದಾಗಿದೆ
ಪೋಸ್ಟ್ ಆಫೀಸ್ ನ ಈ ಯೋಜನೆಯ ಪರಿಪಕ್ವತೆಯ ಅವಧಿ 5 ವರ್ಷಗಳದ್ದಾಗಿದೆ. ಖಾತೆ ತೆರೆದ ಒಂದು ವರ್ಷದವರೆಗೆ ನೀವು ಇದರಿಂದ ಯಾವುದೇ ಹಣವನ್ನು ಹಿಂಪಡೆಯುವ ಹಾಗಿಲ್ಲ. 1 ರಿಂದ 3 ವರ್ಷಗಳಲ್ಲಿ ಒಂದು ವೇಳೆ ನೀವು ಈ ಖಾತೆಯನ್ನು ಮೊಟಕುಗೊಳಿಸಿದರೆ, ಮೂಲ ಮೊತ್ತ ದಿಂದ ಶೇ.2 ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ. ಇನ್ನೊಂದೆಡೆ 3-5 ವರ್ಷದ ಒಳಗೆ ನೀವು ಹಣವನ್ನು ಹಿಂಪಡೆಯಲು ಬಯಸಿದರೆ, ನಿಮ್ಮ ಒಟ್ಟು ಹಣದಿಂದ ಶೇ. 1 ರಷ್ಟು ಕಡಿತಗೊಳಿಸಲಾಗುತ್ತದೆ.  


ಇದನ್ನೂ ಓದಿ-Indian Railways: ರೈಲ್ವೆಯಿಂದ ಹೊಸ ಸೇವೆ, ಈಗ ಶೀಘ್ರವೇ ಸಿಗಲಿದೆ ದೃಢೀಕೃತ ಸೀಟು


4.5 ಲಕ್ಷ ರೂ. ಠೇವಣಿ ಇರಿಸಿದರೆ ತಿಂಗಳಿಗೆ 2475 ಪಡೆಯಬಹುದು
ಎಂಐಎಸ್ ಕ್ಯಾಲ್ಕ್ಯೂಲೆಟರ್ ಪ್ರಕಾರ, ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಏಕಕಾಲಕ್ಕೆ ರೂ 50 ಸಾವಿರ ಠೇವಣಿ ಇರಿಸಿದರೆ, ತಿಂಗಳಿಗೆ ರೂ.275 ರಂತೆ ವಾರ್ಷಿಕವಾಗಿ 3300 ರೂ.ಗಳನ್ನು ಐದು ವರ್ಷಗಳವರೆಗೆ ಪಡೆಯಬಹುದು. ಅಂದರೆ, ಐದು ವರ್ಷಗಳಲ್ಲಿ ನೀವು ಒಟ್ಟು 16,500 ರೂ. ಪಡೆಯಬಹುದು. ಇದೆ ರೀತಿ ನೀವು ಈ ಯೋಜನೆಯ ಅಡಿ ಗರಿಷ್ಟ 4.5 ಲಕ್ಷ ರೂ.ಠೇವಣಿ ಇರಿಸಿದರೆ, ವಾರ್ಷಿಕವಾಗಿ ನೀವು 29,700 ರೂ.ರಂತೆ ಐದು ವರ್ಷಗಳಲ್ಲಿ ಬಡ್ಡಿ ರೂಪದಲ್ಲಿ ಒಟ್ಟು 148500 ರೂ. ಪಡೆಯಬಹುದು.


ಇದನ್ನೂ ಓದಿ-ಜುಲೈ 1ರಿಂದ ಹೊಸ ಕಾರ್ಮಿಕ ಕಾನೂನು! ಕೆಲಸದ ಸಮಯ, ಪಿಎಫ್ ಮತ್ತು ಇನ್-ಹ್ಯಾಂಡ್ ಸಂಬಳದಲ್ಲಿ ಬದಲಾವಣೆ


ಈ ಯೋಜನೆಯ ಮ್ಯಾಚ್ಯೂರಿಟಿ ಅವಧಿಯಲ್ಲಿ ಒಂದು ವೇಳೆ ಖಾತೆದಾರರ ಮೃತ್ಯು ಸಂಭವಿಸಿದ ಸಂದರ್ಭದಲ್ಲಿ ಅವರ ನಾಮನಿರ್ದೇಶಿತ ವ್ಯಕ್ತಿಗೆ ಒಟ್ಟು ಮೂಲ ಹಣವನ್ನು ಹಿಂದಿರುಗಿಸಲಾಗುತ್ತದೆ. ಈ ಯೋಜನೆಯಲ್ಲಿ ಇರಿಸಲಾಗಿರುವ ಠೇವಣಿಗೆ 80ಸಿ ಅಡಿ ಡಿಡಕ್ಶನ್ ಲಾಭ ಕೂಡ ಸಿಗುತ್ತದೆ. ಅಂಚೆ ಕಚೇರಿಯಿಂದ ಹಣವನ್ನು ಹಿಂಪಡೆದ ಬಳಿಕ ಟಿಡಿಎಸ್ ಅನ್ನು ಕೂಡ ಕಡಿತಗೊಳಿಸಲಾಗುವುದಿಲ್ಲ. ಆದರೆ, ಇದರ ಬಡ್ಡಿಯಿಂದ ಸಿಗುವ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.