ನವದೆಹಲಿ: PPF Account Inactive: ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ದೀರ್ಘಾವಧಿಯ ಹೂಡಿಕೆ ಆಯ್ಕೆಯಾಗಿದ್ದು, ಇದರಲ್ಲಿ ಅಪಾಯ ಕಡಿಮೆ ಮತ್ತು ವಿಶ್ವಾಸ ಹೆಚ್ಚು. ಪಿಪಿಎಫ್‌ನ (PPF) ಮುಕ್ತಾಯ ಅವಧಿ 15 ವರ್ಷಗಳು. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ಖಾತರಿಯ ಲಾಭವನ್ನು ನೀಡುತ್ತದೆ. ಆದರೆ ಈ ಪಿಪಿಎಫ್ ಖಾತೆದಾರರು ಕೆಲವು ವಿಷಯಗಳ ಬಗ್ಗೆ ಗಮನಹರಿಸುವುದು ಬಹಳ ಮುಖ್ಯ.


COMMERCIAL BREAK
SCROLL TO CONTINUE READING

ಈ ತಪ್ಪು ಮಾಡಿದರೆ ಬಂದ್ ಆಗಲಿದೆ ನಿಮ್ಮ ಪಿಪಿಎಫ್ ಖಾತೆ : 
ನೀವೂ ಸಹ ಪಿಪಿಎಫ್‌ನಲ್ಲಿ (PPF) ಹೂಡಿಕೆ ಮಾಡಿದ್ದರೆ, ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ನಿಮ್ಮ ಪಿಪಿಎಫ್ ಖಾತೆಯೂ ಮುಚ್ಚಲ್ಪಡಬಹುದು. ಪಿಪಿಎಫ್ ಖಾತೆಯನ್ನು ಚಾಲನೆಯಲ್ಲಿಡಲು ನೀವು ಹಣಕಾಸಿನ ವರ್ಷದಲ್ಲಿ ಕನಿಷ್ಠ 500 ರೂ. ಠೇವಣಿ ಮಾಡಲೇ ಬೇಕು. ಒಂದೊಮ್ಮೆ ನೀವು ಇದನ್ನು ಮಾಡದಿದ್ದರೆ ನಿಮ್ಮ ಪಿಪಿಎಫ್ ಖಾತೆ ನಿಷ್ಕ್ರಿಯವಾಗುತ್ತದೆ. ಪ್ರತಿ ತ್ರೈಮಾಸಿಕದ ಆರಂಭದಲ್ಲಿ ಪಿಪಿಎಫ್ ಮೇಲಿನ ಬಡ್ಡಿದರವನ್ನು ಸರ್ಕಾರ ನಿಗದಿಪಡಿಸುತ್ತದೆ. ಇದೀಗ ಈ ದರ ಶೇಕಡಾ 7.10 ಆಗಿದೆ. ಪ್ರತಿ ವರ್ಷ ಮಾರ್ಚ್ 31 ರಂದು ಬಡ್ಡಿಯನ್ನು ಪಾವತಿಸಲಾಗುತ್ತದೆ.


ನಿಷ್ಕ್ರಿಯ ಪಿಪಿಎಫ್ ಖಾತೆಯನ್ನು ಹೇಗೆ ಪ್ರಾರಂಭಿಸುವುದು?
ನೀವು ಪಿಪಿಎಫ್ ಖಾತೆಯನ್ನು (PPF Account) ತೆರೆದಿದ್ದರೆ ಆರ್ಥಿಕ ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ. ವರೆಗೆ ಹಣವನ್ನು ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. ನೀವು ಈಗ ನಿಮ್ಮ ಪಿಪಿಎಫ್ ಖಾತೆಯು ಸಾರ್ವಕಾಲಿಕವಾಗಿ ಸಕ್ರಿಯವಾಗಿರಬೇಕೆಂದು ಬಯಸಿದರೆ, ನೀವು ಪ್ರತಿ ಹಣಕಾಸು ವರ್ಷದಲ್ಲಿ ಮಿನಿಮಂ 500 ರೂ. ಹೂಡಿಕೆ ಮಾಡಬೇಕು. ಆದಾಗ್ಯೂ, ಪಿಪಿಎಫ್ ಖಾತೆ ನಿಷ್ಕ್ರಿಯವಾಗಿದ್ದರೂ ಸಹ, ಅದನ್ನು ಮರುಪ್ರಾರಂಭಿಸಬಹುದು.


ಇದನ್ನೂ ಓದಿ - PPF, Sukanya Samridhi, NSC ಮೇಲಿನ ಬಡ್ಡಿಯಲ್ಲಿ ಕಡಿತ ; ಜುಲೈ ಒಂದರಿಂದ ಜಾರಿಯಾಗಲಿದೆ ಹೊಸದರ


ಇದಕ್ಕಾಗಿ, ಖಾತೆದಾರನು ಖಾತೆಯನ್ನು ತೆರೆದಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿ (Post Office) ಶಾಖೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಖಾತೆ ತೆರೆಯುವ 15 ವರ್ಷಗಳ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಿದ ನಂತರ, ನಿಮ್ಮ ಬ್ಯಾಂಕ್ ಅಥವಾ ಅಂಚೆ ಕಚೇರಿ 15 ವರ್ಷಗಳು ಕಳೆದಿದೆಯೇ ಎಂದು ಪರಿಶೀಲಿಸುತ್ತದೆ. ಪರಿಶೀಲನೆ ಸರಿಯಾಗಿದ್ದರೆ, ನಿಮ್ಮ ಪಿಪಿಎಫ್ ಖಾತೆಯನ್ನು ಮರುಪ್ರಾರಂಭಿಸಲಾಗುತ್ತದೆ. ಆದಾಗ್ಯೂ, 15 ವರ್ಷಗಳ ಅವಧಿ ಮುಗಿದಿದ್ದರೆ, ಖಾತೆಯನ್ನು ಪುನರುಜ್ಜೀವನಗೊಳಿಸಲಾಗುವುದಿಲ್ಲ.


ದಂಡವನ್ನು ಸಹ ಪಾವತಿಸಬೇಕಾಗುತ್ತದೆ:
ನಿಮ್ಮ ಪಿಪಿಎಫ್ ಖಾತೆ ನಿಷ್ಕ್ರಿಯವಾಗಿದ್ದರೆ, ನೀವು ಪ್ರತಿ ಹಣಕಾಸು ವರ್ಷಕ್ಕೆ ಕನಿಷ್ಠ 500 ರೂ. ಠೇವಣಿ ಇಡಬೇಕಾಗುತ್ತದೆ. ಜೊತೆಗೆ ಪ್ರತಿ ಹಣಕಾಸು ವರ್ಷಕ್ಕೆ 50 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಇದನ್ನು ಚೆಕ್ ಮೂಲಕ ಠೇವಣಿ ಮಾಡಬಹುದು. ಈ ಚೆಕ್ ಅನ್ನು ಬ್ಯಾಂಕಿನ ಶಾಖೆಯಲ್ಲಿ ಜಮಾ ಮಾಡಬೇಕಾಗುತ್ತದೆ.


ಪಿಪಿಎಫ್‌ನ ಮುಕ್ತಾಯ ಅವಧಿಯು 15 ವರ್ಷಗಳು, ಆದರೆ ಖಾತೆದಾರನು ಕೆಲವು ಸಂದರ್ಭಗಳಲ್ಲಿ ಮುಕ್ತಾಯಗೊಳ್ಳುವ ಮೊದಲೇ ಅದನ್ನು ಮುಚ್ಚಬಹುದು. ಯಾವ ಸಂದರ್ಭಗಳಲ್ಲಿ ಅವಧಿಗೂ ಮೊದಲೇ ಖಾತೆಯನ್ನು ಮುಚ್ಚಬಹುದು ಎಂದು ತಿಳಿಯಿರಿ...


ಇದನ್ನೂ ಓದಿ -  Mutual Funds Vs PPF: 10,000 ರೂಪಾಯಿಗಳನ್ನು 2 ಕೋಟಿ ಮಾಡುವುದು ಹೇಗೆ! PPF-ಮ್ಯೂಚುಯಲ್ ಫಂಡ್‌ಗಳಲ್ಲಿ ಯಾವುದು ಉತ್ತಮ


ಪಿಪಿಎಫ್ ಖಾತೆಯನ್ನು ಈ ಸಂದರ್ಭಗಳಲ್ಲಿ ಅವಧಿಗೂ ಮೊದಲೇ  ಮುಚ್ಚಬಹುದು:
1. ಖಾತೆದಾರನ ಹೆಂಡತಿ/ಪತಿ ಅಥವಾ ಮಗುವಿಗೆ ಯಾವುದೇ ಮಾರಣಾಂತಿಕ ಕಾಯಿಲೆ ಇದ್ದರೆ, ನಂತರ ಪಿಪಿಎಫ್ ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು ಮತ್ತು ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು
2. ಖಾತೆದಾರನು ಉನ್ನತ ವ್ಯಾಸಂಗಕ್ಕೆ ಹಣವನ್ನು ಬಯಸಿದರೆ ಪಿಪಿಎಫ್ ಖಾತೆಯನ್ನು ಮುಚ್ಚಬಹುದು
3. ಖಾತೆದಾರನು ಅನಿವಾಸಿ ಭಾರತೀಯನಾಗಿದ್ದರೆ ಅಂತಹ ಸಂದರ್ಭದಲ್ಲಿ ಪಿಪಿಎಫ್ ಖಾತೆಯನ್ನು ಮುಚ್ಚಬಹುದು
4.ಪಿಪಿಎಫ್ ಖಾತೆಯನ್ನು 5 ವರ್ಷಗಳ ಪ್ರಾರಂಭದ ನಂತರ ಮುಚ್ಚಬಹುದು. ಹಾಗೆ ಮಾಡುವಾಗ ಖಾತೆ ತೆರೆಯುವ / ವಿಸ್ತರಣೆಯ ದಿನಾಂಕದಿಂದ ಖಾತೆಯನ್ನು ಮುಚ್ಚುವ ದಿನಾಂಕದವರೆಗೆ 1% ಬಡ್ಡಿಯನ್ನು ಕಡಿತಗೊಳಿಸಲಾಗುತ್ತದೆ.
5. ಖಾತೆದಾರನು ಸತ್ತರೆ, ಕುಟುಂಬ ಸದಸ್ಯರು ಖಾತೆಯನ್ನು ಮುಚ್ಚಬಹುದು. ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿ ಪಿಪಿಎಫ್ ಖಾತೆಯೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ.
6. ಖಾತೆದಾರನು ಮುಕ್ತಾಯಗೊಳ್ಳುವ ಮೊದಲು ಸತ್ತರೆ, ನಾಮಿನಿಯು ಪಿಪಿಎಫ್ ಖಾತೆಯಿಂದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಪಿಪಿಎಫ್ ಖಾತೆಯನ್ನು ತೆರೆದು  5 ವರ್ಷ ಪೂರ್ಣಗೊಳ್ಳದಿದ್ದರೂ ನಾಮಿನಿ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.