ನವದೆಹಲಿ: PPF Investment- ಸಣ್ಣ ಉಳಿತಾಯ ಯೋಜನೆಗಳು ಒಂದು ರೀತಿಯ ದೀರ್ಘಾವಧಿಯ ಯೋಜನೆ ಆಗಿದೆ. ಇವುಗಳಲ್ಲಿ ಒಂದು ಪಿಪಿಎಫ್‌ನಲ್ಲಿ ಹೂಡಿಕೆ (PPF Investment). ಪಿಪಿಎಫ್‌ನಲ್ಲಿ ಸರ್ಕಾರದ ಗ್ಯಾರಂಟಿ ಇದೆ. ಇದರಲ್ಲಿ ಉತ್ತಮ ಬಡ್ಡಿ, ತೆರಿಗೆ ವಿನಾಯಿತಿ ಮುಂತಾದ ಅನೇಕ ಪ್ರಯೋಜನಗಳು ಲಭ್ಯವಿದೆ. ಆದರೆ, ನಮ್ಮ ಹಣವನ್ನು ಹಿಂಪಡೆಯಲು ನಾವು ಲಾಕ್-ಇನ್ ಅವಧಿವರೆಗೆ ಕಾಯಬೇಕಾಗುತ್ತದೆ. ಇದಕ್ಕೂ ಮೊದಲು ನೀವು ಪಿಪಿಎಫ್ ಖಾತೆಯಿಂದ ಹಣವನ್ನು ಹಿಂತೆಗೆದುಕೊಂಡರೆ, ನಂತರ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ಆದರೆ, ನೀವು ಯಾವಾಗ ಬೇಕಾದರೂ ಇಪಿಎಫ್‌ನಲ್ಲಿ (EPF) ಹಣವನ್ನು ಹಿಂಪಡೆಯಬಹುದು. ಇದರಲ್ಲಿ ಯಾವುದೇ ಲಾಕ್-ಇನ್ ಅವಧಿ ಇಲ್ಲ. ಅದೇ ಸಮಯದಲ್ಲಿ, ಪಿಪಿಎಫ್‌ಗೆ ಹೋಲಿಸಿದರೆ ಇಪಿಎಫ್‌ನಲ್ಲಿನ ಬಡ್ಡಿಯೂ ಹೆಚ್ಚಾಗಿದೆ. ಆದರೆ, ಇಪಿಎಫ್ ಸೌಲಭ್ಯ ಸಂಬಳ ಪಡೆಯುವವರಿಗೆ ಮಾತ್ರ ಲಭ್ಯವಿದೆ. ಆದರೆ ಸಾರ್ವಜನಿಕರು ಪಿಪಿಎಫ್ ಸೌಲಭ್ಯವನ್ನು ಪಡೆಯುತ್ತಾರೆ. ಎರಡೂ ಪ್ರಾವಿಡೆಂಟ್ ಫಂಡ್‌ನ ಒಂದೇ ವರ್ಗಕ್ಕೆ ಸೇರುತ್ತವೆ, ಆದರೆ ಇವುಗಳಲ್ಲಿ ವ್ಯತ್ಯಾಸವಿದೆ. ಈ ಅಂತರವನ್ನು ಕಡಿಮೆ ಮಾಡಲು, ಎಸ್‌ಬಿಐ ಇಕೋವ್ರಾಪ್‌ನಲ್ಲಿ (SBI Ecowrap) ಕೆಲವು ಶಿಫಾರಸುಗಳನ್ನು ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಸಣ್ಣ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದಂತೆ ಎಸ್‌ಬಿಐ (SBI) ಅರ್ಥಶಾಸ್ತ್ರಜ್ಞರು ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಇದರಿಂದ ಎಲ್ಲರಿಗೂ ಲಾಭವಾಗಲಿದೆ ಎಂದು ಎಸ್‌ಬಿಐ ವರದಿಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಆ ಸಲಹೆಗಳು ಯಾವುವು ಎಂದು ತಿಳಿಯೋಣ.


ಇದನ್ನೂ ಓದಿ-  UIDAI: ಆಧಾರ್ ನವೀಕರಣ ಪೂರ್ಣಗೊಳ್ಳಲು ಎಷ್ಟು ದಿನ ಕಾಯಬೇಕು? ನಿಯಮ ಏನು ಹೇಳುತ್ತೆ?


1. 'ಪಿಪಿಎಫ್‌ಗೆ 15 ವರ್ಷಗಳ ಲಾಕ್-ಇನ್ ಅವಧಿ ಇರಬಾರದು' :
ಸಾರ್ವಜನಿಕ ಭವಿಷ್ಯ ನಿಧಿ (Public Provident Fund) ಕುರಿತ ಎಸ್‌ಬಿಐ ವರದಿಯು ಸರ್ಕಾರವು ಪಿಪಿಎಫ್‌ನಲ್ಲಿ 15 ವರ್ಷಗಳ ಲಾಕ್-ಇನ್ ಅವಧಿಯನ್ನು ಇಳಿಸಬೇಕು ಎಂದು ಸೂಚಿಸಿದೆ. ನಿಗದಿತ ಅವಧಿಯ ನಂತರ ಹೂಡಿಕೆದಾರರಿಗೆ ಹಣವನ್ನು ಹಿಂಪಡೆಯಲು ಅವಕಾಶ ನೀಡಬೇಕು. ಇದಕ್ಕಾಗಿ, ಹೂಡಿಕೆದಾರರ ಇನ್ಸೇನ್ಟೀವ್ ಕಡಿಮೆ ಮಾಡುವ ಆಯ್ಕೆಯನ್ನು ಚರ್ಚಿಸಬಹುದು. ಪಿಪಿಎಫ್‌ನಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. 


2. ಬಡ್ಡಿ ಇಪಿಎಫ್‌ಗೆ ಸಮನಾಗಿರಬೇಕು:
ಎಸ್‌ಬಿಐ ಸಂಶೋಧನಾ ವರದಿಯಲ್ಲಿ, ನೌಕರರ ಭವಿಷ್ಯ ನಿಧಿ (EPF) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (PPF) ನ ಬಡ್ಡಿದರಗಳನ್ನು ಸಮನಾಗಿಸಲು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಇಪಿಎಫ್ ಮತ್ತು ಪಿಪಿಎಫ್‌ನ ಬಡ್ಡಿದರಗಳು ಸಮನಾಗಿರಬೇಕು, ಇದರಿಂದ ಜನರು ಹೆಚ್ಚು ಹೆಚ್ಚು ಉಳಿತಾಯ ಮಾಡಲು ಪ್ರೋತ್ಸಾಹಿಸಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ- PPF, KVP, SSY, NSC: ಸಣ್ಣ ಉಳಿತಾಯ ಯೋಜನೆಯ ಹೂಡಿಕೆದಾರರಿಗೆ ಸಂತಸದ ಸುದ್ದಿ


3. ಹಿರಿಯ ನಾಗರಿಕ ಉಳಿತಾಯ ಯೋಜನೆಯ ಮೇಲೆ ಸಂಪೂರ್ಣ ತೆರಿಗೆ ವಿನಾಯಿತಿ :
ಹಿರಿಯ ನಾಗರಿಕ ಉಳಿತಾಯ ಯೋಜನೆಯ (Senior Citizen Savings Scheme) ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ನೀಡುವ ಕುರಿತು ಸಲಹೆ ನೀಡಲಾಗಿದೆ. ವರದಿಯ ಪ್ರಕಾರ, ಹಿರಿಯ ನಾಗರಿಕ ಉಳಿತಾಯ ಯೋಜನೆಯ ಬಡ್ಡಿಗೆ ಸಂಪೂರ್ಣ ತೆರಿಗೆ ವಿಧಿಸಲಾಗುತ್ತದೆ. ಎಸ್‌ಬಿಐ ಇಕೋವ್ರಾಪ್ ವರದಿಯು 2020 ರ ಫೆಬ್ರವರಿ ವೇಳೆಗೆ ಈ ಯೋಜನೆಗಳ ಅಡಿಯಲ್ಲಿ ಬಾಕಿ ಇರುವ ಮೊತ್ತ 73,725 ಕೋಟಿ ರೂ. ಇದರ ಮೇಲೆ ಪೂರ್ಣ ತೆರಿಗೆ ವಿನಾಯಿತಿ ನೀಡಿದರೆ, ಸರ್ಕಾರವು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಹಿರಿಯ ನಾಗರಿಕ ಉಳಿತಾಯ ಯೋಜನೆಯಡಿ ಹಿರಿಯ ನಾಗರಿಕರು 15 ಲಕ್ಷ ರೂ.ವರೆಗೆ ಠೇವಣಿ ಇಡಬಹುದು, ಇದು ವಾರ್ಷಿಕ 7.4% ಬಡ್ಡಿ ಗಳಿಸುತ್ತದೆ ಎಂದು ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.