Small Saving Scheme Interest Rate : ನೀವು PPF,ಸುಕನ್ಯಾ ಸಮೃದ್ಧಿ ಯೋಜನೆ ಮತ್ತು NSC ಇತ್ಯಾದಿಗಳಲ್ಲಿ ಹೂಡಿಕೆ ಮಾಡಿದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.ಮೋದಿ 3.0 ಸರ್ಕಾರವು ಹಣಕಾಸು ವರ್ಷದ ಎರಡನೇ ತ್ರೈಮಾಸಿಕಕ್ಕೆ (ಜುಲೈ-ಸೆಪ್ಟೆಂಬರ್)ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಬಹುದು.ಜೂನ್ 30ರೊಳಗೆ ಹಣಕಾಸು ಸಚಿವಾಲಯವು ಬಡ್ಡಿ ದರವನ್ನು ಪರಿಶೀಲಿಸುತ್ತದೆ.ಈ ಹಿಂದೆ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕ ಅವಧಿಯಲ್ಲಿ ಬಡ್ಡಿ ದರವನ್ನು ಅದೇ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿತ್ತು.ಆದರೆ, ಈ ಬಾರಿ ಸಣ್ಣ ಹೂಡಿಕೆದಾರರಿಗೆ ಸರ್ಕಾರ ಪರಿಹಾರ ನೀಡಬಹುದು ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ದೀರ್ಘಕಾಲದವರೆಗೆ 7.1 ಶೇಕಡಾ PPF ಬಡ್ಡಿ ದರ :  
ಆರ್‌ಡಿ, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ,ಮಹಿಳಾ ಸಮೃದ್ಧಿ ಉಳಿತಾಯ ಪ್ರಮಾಣಪತ್ರ,ಕಿಸಾನ್ ವಿಕಾಸ್ ಪತ್ರ,ಎನ್‌ಎಸ್‌ಸಿ ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಮುಂತಾದ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಪ್ರತಿ ತ್ರೈಮಾಸಿಕ ಆಧಾರದ ಮೇಲೆ ಸರ್ಕಾರ ಪರಿಶೀಲಿಸುತ್ತದೆ.ಈ ಬಾರಿ ಜುಲೈ 22ರಂದು ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದೆ.ಹಣಕಾಸು ಸಚಿವಾಲಯವು ಬಡ್ಡಿದರ ಹೆಚ್ಚಿಸಿದರೆ ಮಧ್ಯಮ ವರ್ಗದವರಿಗೆ ಬಜೆಟ್‌ಗೂ ಮುನ್ನವೇ ದೊಡ್ಡ ಕೊಡುಗೆಯಾಗಲಿದೆ.ಪಿಪಿಎಫ್‌ನ ಬಡ್ಡಿ ದರವು ದೀರ್ಘಕಾಲದಿಂದ ವರ್ಷಕ್ಕೆ 7.1 ಪ್ರತಿಶತದಷ್ಟೇ ಇದೆ. 


ಇದನ್ನೂ ಓದಿ : Arecanut Price Today: ಶಿವಮೊಗ್ಗ & ಸಿದ್ದಾಪುರದಲ್ಲಿ ಇಂದಿನ ಅಡಿಕೆ ಧಾರಣೆ


ಬಡ್ಡಿದರದ ಹೆಚ್ಚಳವಾದರೆ ಉಳಿತಾಯಕ್ಕೆ ಉತ್ತೇಜನ : 
ಬಡ್ಡಿದರದ ಹೆಚ್ಚಳವಾದರೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಉಳಿತಾಯ ಮಾಡಲು ಮುಂದೆ ಬರುವಂತಾಗುತ್ತದೆ.ಕಳೆದ ಕೆಲವು ವರ್ಷಗಳಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ಸ್ಥಿರವಾಗಿದೆ.ಆದರೆ, ಸರ್ಕಾರ ಈಗ ನೀಡುತ್ತಿರುವುದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಸರಕಾರ ಭರಿಸಬಹುದೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. .


2023-24ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಎರಡು ಯೋಜನೆಗಳ ಬಡ್ಡಿದರಗಳಲ್ಲಿ ಹೆಚ್ಚಳ ಮಾಡಲಾಗಿತ್ತು. SSYಯ ಬಡ್ಡಿ ದರವನ್ನು 8.20 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ.ಆಗ ಸುಕನ್ಯಾ ಸಮೃದ್ಧಿ ಯೋಜನೆಯ (ಎಸ್‌ಎಸ್‌ವೈ) ಬಡ್ಡಿದರವನ್ನು ಶೇಕಡಾ 8 ರಿಂದ ಶೇಕಡಾ 8.20ಕ್ಕೆ ಹೆಚ್ಚಿಸಲಾಯಿತು.ಸರ್ಕಾರವು ಮೂರು ವರ್ಷಗಳ ಎಫ್‌ಡಿ ಮೇಲಿನ ಬಡ್ಡಿ ದರವನ್ನು ಶೇಕಡಾ 7.1 ಕ್ಕೆ ಹೆಚ್ಚಿಸಿದೆ.ಆದರೆ ಪಿಪಿಎಫ್‌ನ ಬಡ್ಡಿ ದರಗಳು ಕಳೆದ ನಾಲ್ಕು ವರ್ಷಗಳಿಂದ ಒಂದೇ ಮಟ್ಟದಲ್ಲಿದೆ. PPF ನ ಬಡ್ಡಿ ದರವನ್ನು ಕೊನೆಯದಾಗಿ ಏಪ್ರಿಲ್-ಜೂನ್ 2020 ರಲ್ಲಿ ಬದಲಾಯಿಸಲಾಗಿದೆ.


ಇದನ್ನೂ ಓದಿ : ಅನಂತ್ ಅಂಬಾನಿ - ರಾಧಿಕಾ ಮದುವೆ ಆಮಂತ್ರಣದ ಜೊತೆಗೆ ಅತಿಥಿಗಳಿಗೆ ಇಷ್ಟೊಂದು ಬೆಲೆಬಾಳುವ ಬೆಳ್ಳಿಯ ಗಿಫ್ಟ್‌.! ವಿಡಿಯೋ ನೋಡಿ


ಸಣ್ಣ ಉಳಿತಾಯ ಯೋಜನೆಗಳು ಮತ್ತು ಅವುಗಳ ಮೇಲಿನ ಬಡ್ಡಿ :
> ಪ್ರಸ್ತುತ PPF ಮೇಲಿನ ಬಡ್ಡಿ ದರವು ವಾರ್ಷಿಕ 7.1% ಆಗಿದೆ.
> SCSS - ಹಿರಿಯ ನಾಗರಿಕರ ಉಳಿತಾಯ ಯೋಜನೆಯು 8.2% ಬಡ್ಡಿದರವನ್ನು ನೀಡುತ್ತದೆ.
> ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ 8.2% ಬಡ್ಡಿ ಲಭ್ಯವಿದೆ.
> ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಮೇಲೆ 7.7% ಬಡ್ಡಿಯನ್ನು ನೀಡಲಾಗುತ್ತಿದೆ.
> ಪ್ರಸ್ತುತ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಬಡ್ಡಿ ದರವು 7.4% ಆಗಿದೆ.
> ಕಿಸಾನ್ ವಿಕಾಸ್ ಪತ್ರದಲ್ಲಿ (KVP) 7.5% ಬಡ್ಡಿ ದರ ಲಭ್ಯವಿದೆ.
> 1 ವರ್ಷದ ಠೇವಣಿ ಮೇಲಿನ ಬಡ್ಡಿ ದರ 6.9%.
> 2 ವರ್ಷದ ಠೇವಣಿ ಮೇಲಿನ ಬಡ್ಡಿ ದರ 7.0%.
>3 ವರ್ಷದ ಠೇವಣಿ ಮೇಲಿನ ಬಡ್ಡಿ ದರ 7.1%.
> 5 ವರ್ಷದ ಠೇವಣಿ ಮೇಲಿನ ಬಡ್ಡಿ ದರ 7.5%.
> 5 ವರ್ಷದ RD 6.7% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.