Pradhanamantri mudra Yojana : ಕೇಂದ್ರ ಸರ್ಕಾರದ ಇಂತಹ ಹಲವು ಯೋಜನೆಗಗಳಿಂದ ಜನಸಾಮಾನ್ಯರ ಭವಿಷ್ಯ ಬದಲಾಗಿದೆ. ಅಂತಹ ಒಂದು ಯೋಜನೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY).ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಕೈಗೆಟಕುವ ಬಡ್ಡಿದರದಲ್ಲಿ ಸಾಲ ನೀಡಲಾಗುವುದು.  ಸಣ್ಣ ವ್ಯಾಪಾರ ಆರಂಭಿಸಲು 10 ಲಕ್ಷ ರೂ.ವರೆಗೆ ಸಾಲವನ್ನು ನೀಡಲಾಗುತ್ತದೆ. 


COMMERCIAL BREAK
SCROLL TO CONTINUE READING

ಮುದ್ರಾ ಯೋಜನೆಯ ವಿವರಗಳು :
ಕೇಂದ್ರದ ನರೇಂದ್ರ ಮೋದಿ ಸರ್ಕಾರವು ತನ್ನ ಮೊದಲ ಅವಧಿಯಲ್ಲಿ ಕೈಗೆಟುಕುವ ಬಡ್ಡಿದರದಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, ಸಣ್ಣ ವ್ಯಾಪಾರ ಆರಂಭಿಸಲು 10 ಲಕ್ಷ ರೂ.ವರೆಗೆ ಸಾಲವನ್ನು ನೀಡಲಾಗುತ್ತದೆ. 


ಇದನ್ನೂ ಓದಿ :Union Budget 2024: ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ, ದ್ವಿಗುಣವಾಗಲಿದೆ ಈ ಸರ್ಕಾರಿ ಯೋಜನೆಯ ಮಿತಿ!


ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು (SCBs), ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRBs), ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFCs) ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI ಗಳು)  ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಸಾಲ ನೀಡುತ್ತದೆ. 


ಸಾಲದ ಮೂರು ವಿಭಾಗಗಳು :
ಈ ಸಾಲವನ್ನು ಮೂರು ವಿಭಾಗಗಲ್ಲಿ ನೀಡಲಾಗುತ್ತದೆ. ಅವುಗಳೆಂದರೆ ಶಿಶು, ಕಿಶೋರ ಮತ್ತು ತರುಣ. ಸಾಲದ ಮೊತ್ತವು ಎಲ್ಲಾ ಮೂರು ವಿಭಾಗಗಳಲ್ಲಿ ಬದಲಾಗುತ್ತದೆ.
ಶಿಶು ವಿಭಾಗ : 50,000 ರೂ.ವರೆಗೆ ಸಾಲ.
ಕಿಶೋರ :   50,000 ಕ್ಕಿಂತ ಹೆಚ್ಚು ಮತ್ತು  5 ಲಕ್ಷಕ್ಕಿಂತ ಕಡಿಮೆ ಸಾಲ
ತರುಣ್: 5 ಲಕ್ಷದಿಂದ 10 ಲಕ್ಷ ರೂ.ವರೆಗಿನ ಸಾಲ  


ಇದನ್ನೂ ಓದಿ : Budget 2024 : ಮಹಿಳೆಯರ ಪಾಲಿಗೆ ವಿಶೇಷವಾಗಿರಲಿದೆ ಈ ಬಜೆಟ್ !ಈಡೇರಬಹುದು ಈ ನಿರೀಕ್ಷೆಗಳು


ಅಂಕಿಅಂಶಗಳು ಏನು ಹೇಳುತ್ತವೆ? :
ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಳೆದ ಐದು ಹಣಕಾಸು ವರ್ಷಗಳಲ್ಲಿ ಈ ಯೋಜನೆಯಡಿಯಲ್ಲಿ 17.77 ಲಕ್ಷ ಕೋಟಿ ರೂಪಾಯಿಗಳ ಮಂಜೂರಾದ ಮೊತ್ತದೊಂದಿಗೆ 28.89 ಕೋಟಿಗೂ ಹೆಚ್ಚು ಸಾಲಗಳನ್ನು ನೀಡಲಾಗಿದೆ.ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಭಾಗವತ್ ಕಿಸನರಾವ್ ಕರಾಡ್ ಕೂಡ ಸದನಕ್ಕೆ ಈ ಮಾಹಿತಿ ನೀಡಿದ್ದಾರೆ. 7.93 ಲಕ್ಷ ಕೋಟಿ ಮೊತ್ತ ಅಂದರೆ 19.22 ಕೋಟಿಗೂ ಹೆಚ್ಚು ಸಾಲವನ್ನು ಮಹಿಲಯುಯರಿಗೆ ನೀಡಲಾಗಿದೆ. ಅಂದರೆ ಈ ಯೋಜನೆಯಡಿ ಮಂಜೂರಾದ ಒಟ್ಟು ಸಾಲದ ಶೇಕಡಾ 67 ರಷ್ಟು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.