ಬೆಂಗಳೂರು :  ಸಾಮಾನ್ಯ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ಹಣದುಬ್ಬರದ ಮಧ್ಯೆ ಇದೀಗ ದಿನ ಬಳಕೆಯ ವಸ್ತುಗಳಾದ ಸಾಬೂನು, ಶಾಂಪೂ ಮತ್ತು ಟೂತ್‌ಪೇಸ್ಟ್‌ ದುಬಾರಿಯಾಗಲಿವೆ. ಇದರೊಂದಿಗೆ ರಿನ್, ಲಕ್ಸ್, ಲೈಫ್ ಬಾಯ್, ಫೇರ್ ಅಂಡ್ ಲವ್ಲಿ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. ದೇಶದ ಪ್ರಮುಖ ಎಫ್‌ಎಂಸಿಜಿ ಕಂಪನಿ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಶೀಘ್ರದಲ್ಲೇ ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಬಹುದು. 


COMMERCIAL BREAK
SCROLL TO CONTINUE READING

ಹೆಚ್ಚಾಗಿದೆ ರಾಯಲ್ಟಿ  ಶುಲ್ಕ : 
ಕಂಪನಿಯಿಂದ ಪಡೆದ ಮಾಹಿತಿಯ ಪ್ರಕಾರ, ಹಿಂದೂಸ್ತಾನ್ ಯೂನಿಲಿವರ್ ರಾಯಲ್ಟಿ  ಶುಲ್ಕದಲ್ಲಿ 80  ಬೇಸ್ ಪಾಯಿಂಟ್ ಗಳಷ್ಟು ಹೆಚ್ಚಳ ಕಂಡಿದೆ. 10 ವರ್ಷಗಳಲ್ಲಿ ಮೊದಲ ಬಾರಿಗೆ, HUL ರಾಯಲ್ಟಿ ಶುಲ್ಕವನ್ನು ಹೆಚ್ಚಿಸಿದೆ. ಇದಕ್ಕೂ ಮೊದಲು 2013ರಲ್ಲಿ ಕೊನೆಯ ಬಾರಿಗೆ ಈ ಶುಲ್ಕವನ್ನು ಏರಿಸಲಾಗಿತ್ತು. 


ಇದನ್ನೂ ಓದಿ : ನೀವೂ ವಿವಾಹಿತರಾಗಿದ್ದಲ್ಲಿ ಮಾಸಿಕ ರೂ. 18,500 ಪಡೆಯಲು ಮಾರ್ಚ್ 31ರೊಳಗೆ ಈ ಕೆಲಸ ಮಾಡಿ


ಈ ಬಗ್ಗೆ ಮಾಹಿತಿ ನೀಡಿದ HUL, ಹೊಸ ಒಪ್ಪಂದದ ಪ್ರಕಾರ ರಾಯಲ್ಟಿ ಶುಲ್ಕವನ್ನು ಶೇಕಡಾ 3.45 ಕ್ಕೆ ಹೆಚ್ಚಿಸಬಹುದು. ರಾಯಲ್ಟಿ ಮತ್ತು ಕೇಂದ್ರ ಸೇವೆಗಳ ಶುಲ್ಕವನ್ನು ಶೇಕಡಾ 3.45 ಕ್ಕೆ ಹೆಚ್ಚಿಸಬಹುದು ಎಂದು ಹೇಳಿದೆ. ಕಳೆದ ಹಣಕಾಸು ವರ್ಷದಲ್ಲಿ ಇದು ಶೇ.2.65ರಷ್ಟಿತ್ತು. ರಾಯಲ್ಟಿ ಶುಲ್ಕದಲ್ಲಿ 80 ಬೇಸ್ ಪಾಯಿಂಟ್ ಹೆಚ್ಚಳವನ್ನು 3 ಹಂತಗಳಲ್ಲಿ ಜಾರಿಗೊಳಿಸಬಹುದು. 


ಬೆಲೆಯಲ್ಲಿ ಏರಿಕೆಯಾಗಬಹುದು : 
ಈ ಮೂಲಕ ಹಣದುಬ್ಬರದ ಹೊಡೆತವನ್ನು ಎದುರಿಸುತ್ತಿರುವ ಸಾಮಾನ್ಯ ಜನರ ಜೇಬಿಗೆ ಮತ್ತೆ ಕತ್ತರಿ ಬಿದ್ದಂತಾಗುತ್ತದೆ. ಯಾಕೆಂದರೆ ಪ್ರಸ್ತುತ, ಕಂಪನಿಯು ದೈನಂದಿನ ವಸ್ತುಗಳ ಬೆಲೆಗಳನ್ನು ಹೆಚ್ಚಿಸಬಹುದು ಎನ್ನಲಾಗಿದೆ. 


ಕಂಪನಿಯು ಯಾವ ಉತ್ಪನ್ನಗಳನ್ನು ತಯಾರಿಸುತ್ತದೆ? :
ಈ ಕಂಪನಿಯು ಪ್ರಸ್ತುತ ಆಹಾರ, ಹೋಂ ಕೇರ್, ವಾಟರ್ ಪ್ಯುರಿಫೈಯರ್ ನಂಥಹ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದಲ್ಲದೆ, ಉಪ್ಪು, ಮೈದಾ, ಕಾಫಿ, ಟೀ, ಕೆಚಪ್, ಜ್ಯೂಸ್, ಐಸ್ ಕ್ರೀಮ್, ವ್ಹಿಲ್   ರಿನ್,  ಸರ್ಫ್, ಶೇವಿಂಗ್ ಕ್ರೀಮ್ ಸೇರಿದಂತೆ ಎಲ್ಲಾ ಉತ್ಪನ್ನಗಳನ್ನು ಒಳಗೊಂಡಿದೆ. 


ಇದನ್ನೂ ಓದಿ : ಅಬ್ಬಬ್ಬಾ ಎಷ್ಟು ದುಬಾರಿ.! 58,000 ರೂಪಾಯಿಗೆ ತಲುಪಿದ ಚಿನ್ನದ ಬೆಲೆ !


ಆದಾಯ ಎಷ್ಟಿತ್ತು? :
ಕಂಪನಿಯ ಆದಾಯದ ಬಗ್ಗೆ ಮಾತನಾಡುವುದಾದರೆ, ಕಳೆದ ಹಣಕಾಸು ವರ್ಷದಲ್ಲಿ ಇದು 51,193 ಕೋಟಿ ರೂ.ಗಳಷ್ಟಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು 11.3 ಪ್ರತಿಶತದಷ್ಟು ಹೆಚ್ಚು. ಅದರಲ್ಲಿ ಕಂಪನಿಯು ತನ್ನ ಮಾತೃ ಕಂಪನಿಗೆ 2.65 ಪ್ರತಿಶತದಷ್ಟು ರಾಯಲ್ಟಿ  ಪಾವತಿಸಿದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.