ಆಧಾರ್ ಕಾರ್ಡ್ನಲ್ಲಿರುವ ಫೋಟೋವನ್ನು ಸುಲಭವಾಗಿ ಹೀಗೆ ಬದಲಾಯಿಸಿ.!
Aadhar Card Updation:ಆಧಾರ್ ಕಾರ್ಡ್ ನಲ್ಲಿರುವ್ ಫೋಟೋ ವನ್ನು ಬದಲಿಸುವುದು ಬಹಳ ಸುಲಭ. ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು.
Aadhar Card Updation : ಸರ್ಕಾರಿ ದಾಖಲೆಗಳಾದ ಆಧಾರ್ ಕಾರ್ಡ್, ವೋಟರ್ ಐಡಿಗಳಲ್ಲಿರುವ ಫೋಟೋ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಅದನ್ನು ಬದಲಿಸುವುದು ಹೇಗೆ ಎನ್ನುವ ಮಾಹಿತಿ ಇಲ್ಲದೆ ಅದನ್ನು ಹಾಗೆಯೇ ಬಿಟ್ಟಿರುತ್ತಾರೆ. ಆದರೆ, ಆಧಾರ್ ಕಾರ್ಡ್ ನಲ್ಲಿರುವ ಫೋಟೋ ವನ್ನು ಬದಲಿಸುವುದು ಬಹಳ ಸುಲಭ. ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಫಾರ್ಮ್ ಭರ್ತಿ ಮಾಡುವ ಮೂಲಕ, ಆಧಾರ್ ಕಾರ್ಡ್ ನ ಫೋಟೋ, ಹೆಸರು ಅಥವಾ ವಿಳಾಸವನ್ನು ಬದಲಾಯಿಸುವ ಕೆಲಸವನ್ನು ಮಾಡಬಹುದು.
ಯಾವ ದಾಖಲೆಗಳು ಅಗತ್ಯವಿದೆ ? :
ಆಧಾರ್ ಕಾರ್ಡ್ ನಮ್ಮ ಗುರುತಿನ ಚೀಟಿಯಾಗಿದೆ. ಅದನ್ನು ನವೀಕರಿಸಲು ಕೆಲವು ದಾಖಲೆಗಳು ಬೇಕಾಗುತ್ತದೆ. ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಪಾಸ್‌ಪೋರ್ಟ್, ಪಾನ್ ಕಾರ್ಡ್, ವೋಟರ್ ಕಾರ್ಡ್‌ನಂತಹ ಗುರುತಿನ ಚೀಟಿಯನ್ನು ನೀಡಬೇಕಾಗುತ್ತದೆ. ಫೋಟೋದ ಜೊತೆಗೆ ಹೆಸರು ಅಥವಾ ವಿಳಾಸವನ್ನು ಬದಲಾಯಿಸಬೇಕಾದರೆ, ಅದಕ್ಕೆ ಅಗತ್ಯವಾಗಿರುವ ದಾಖಲೆಯನ್ನು ಕೂಡಾ ಒದಗಿಸಬೇಕಾಗುತ್ತದೆ.
ಇದನ್ನೂ ಓದಿ : Traffic Rules: ನಿಮ್ಮ ವಾಹನದ ಕೀ ತೆಗೆಯುವ ಅಧಿಕಾರ ಟ್ರಾಫಿಕ್ ಪೊಲೀಸರಿಗಿದೆಯೇ? ಈ 5 ನಿಯಮಗಳು ನಿಮಗೂ ತಿಳಿದಿರಲಿ
ಅದನ್ನು ಹೇಗೆ ನವೀಕರಿಸಲಾಗುತ್ತದೆ ? :
ಆಧಾರ್ ಸೇವಾ ಕೇಂದ್ರದಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಕಣ್ಣು ಮತ್ತು ಕೈ ಬೆರಳಚ್ಚುಗಳನ್ನು ತೆಗೆದುಕೊಳ್ಳಲಾಗುತ್ತದೆ. ಜೊತೆಗೆ ಹೊಸದಾಗಿ ನವೀಕರಿಸಿದ ಆಧಾರ್ ಕಾರ್ಡ್‌ನಲ್ಲಿ ಹಾಕಬೇಕಾದ ಹೊಸ ಫೋಟೋವನ್ನು ತೆಗೆದುಕೊಳ್ಳಲಾಗುತ್ತದೆ. ವೆರಿಫಿಕೇಶನ್ ಪೂರ್ಣಗೊಂಡ ನಂತರ ಯಾವ್ ಬದಲಾವಣೆಗೆ ವಿನಂತಿ ಮಾಡಲಾಗಿತ್ತೋ ಆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಕೆಲಸಕ್ಕೆ ಪ್ರತ್ಯೇಕ ಜಿಎಸ್‌ಟಿ ಶುಲ್ಕ 100 ರೂ ಪಾವತಿಸಬೇಕಾಗುತ್ತದೆ.
ಬದಲಾವಣೆ ಯಾವಾಗ ನಡೆಯುತ್ತದೆ? :
ಆಧಾರ್ ಕಾರ್ಡ್ ನವೀಕರಣದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ 24 ರಿಂದ 72 ಗಂಟೆಗಳ ಒಳಗೆ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ನವೀಕರಿಸಲಾಗುತ್ತದೆ. 2 ವಾರಗಳ ನಂತರ ಆಧಾರ್ ಕಾರ್ಡ್‌ನ ಫೋಟೋ ಮತ್ತು ಇತರ ವಿಷಯಗಳನ್ನು ಬದಲಾಯಿಸುವ ಮೂಲಕ ಹೊಸ ಆಧಾರ್ ಕಾರ್ಡ್ ನಿಮ್ಮ ವಿಳಾಸವನ್ನು ತಲುಪುತ್ತದೆ. ಆಧಾರ್ ಕಾರ್ಡ್‌ನ ಅಪ್ಡೇಟ್ ಅನ್ನು UIDAI ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.
ಇದನ್ನೂ ಓದಿ : ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಸಿಗುವುದು 9 ಸಾವಿರ ರೂಪಾಯಿ ಪಿಂಚಣಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.