ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ : 8ನೇ ವೇತನ ಆಯೋಗ ಜಾರಿ ಮತ್ತು ಹೊಸ ಪ್ರಸ್ತಾಪದ ಸಂಪೂರ್ಣ ವಿವರ ಇಲ್ಲಿದೆ
8th Pay Commission : 2016ರಲ್ಲಿ ಕೊನೆಯದಾಗಿ ವೇತನ ಪರಿಷ್ಕರಣೆಯಾಗಿದ್ದು, ಶೀಘ್ರವೆ ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
8th Pay Commission : ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ.ಈ ಮಧ್ಯೆ ಎಂಟನೇ ವೇತನ ಆಯೋಗದ ಬೇಡಿಕೆಯೂ ಹೆಚ್ಚುತ್ತಿದೆ.ವೇತನ,ಭತ್ಯೆ,ಪಿಂಚಣಿ ಮರುಪರಿಶೀಲನೆ ಮಾಡಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.ನ್ಯಾಷನಲ್ ಕೌನ್ಸಿಲ್ ಕಾರ್ಯದರ್ಶಿ ಶಾವ್ ಗೋಪಾಲ್ ಮಿಶ್ರಾ,ಆದಷ್ಟು ಬೇಗ ಎಂಟನೇ ವೇತನ ಆಯೋಗವನ್ನು ರಚಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.2016ರಲ್ಲಿ ಕೊನೆಯದಾಗಿ ವೇತನ ಪರಿಷ್ಕರಣೆಯಾಗಿದ್ದು, ಶೀಘ್ರವೇ ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ವೇತನ ಆಯೋಗ ಎಂದರೇನು? :
ವೇತನ ಆಯೋಗವು ಸರ್ಕಾರದಿಂದ ನೇಮಿಸಲ್ಪಟ್ಟ ಒಂದು ಸಂಸ್ಥೆಯಾಗಿದೆ. ಇದು ಕೇಂದ್ರ ಸರ್ಕಾರಿ ನೌಕರರ ವೇತನ ರಚನೆ, ಭತ್ಯೆಗಳು ಮತ್ತು ಪ್ರಯೋಜನಗಳನ್ನು ಪರಿಶೀಲಿಸಿ ನಂತರ ಬದಲಾವಣೆಗಳನ್ನು ಶಿಫಾರಸು ಮಾಡುತ್ತದೆ.ಇದು ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಬದಲಾಗುತ್ತದೆ. ಇದು ಹಣದುಬ್ಬರದಂತಹ ಅಂಶಗಳನ್ನು ಪರಿಶೀಲಿಸುತ್ತದೆ. 28 ಫೆಬ್ರವರಿ 2014 ರಂದು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಏಳನೇ ವೇತನ ಆಯೋಗವನ್ನು ರಚಿಸಿದರು.ಆಯೋಗವು ತನ್ನ ವರದಿಯನ್ನು 19 ನವೆಂಬರ್ 2015 ರಂದು ಸಲ್ಲಿಸಿತು.ಅದರ ಶಿಫಾರಸುಗಳನ್ನು 1 ಜನವರಿ 2016 ರಂದು ಜಾರಿಗೆ ತರಲಾಯಿತು.
ಇದನ್ನೂ ಓದಿ : ಆಭರಣ ಪ್ರಿಯರಿಗೆ ಸಂತಸದ ಸುದ್ದಿ, ಇಂದು ಚಿನ್ನದ ದರದಲ್ಲಿ ಭಾರಿ ಕುಸಿತ..!
8ನೇ ವೇತನ ಆಯೋಗ ಜಾರಿ ಯಾವಾಗ? :
ಈಗ ಎಲ್ಲರ ಕಣ್ಣು 8ನೇ ವೇತನ ಆಯೋಗದತ್ತ ನೆಟ್ಟಿದೆ.ಇದು 1 ಜನವರಿ 2026 ರೊಳಗೆ ರಚನೆಯಾಗುತ್ತದೆ ಎಂದು ಅಂದಾಜಿಸಲಾಗಿದೆ.ಆದರೆ,ಕೇಂದ್ರದಿಂದ ಇನ್ನೂ ಅಧಿಕೃತ ಘೋಷಣೆ ಹೊರ ಬಿದ್ದಿಲ್ಲ. ಆದರೆ, 2024ರ ಲೋಕಸಭೆ ಚುನಾವಣೆಯ ನಂತರ ಮೂರನೇ ಬಾರಿಗೆ ಮೋದಿ ಸರಕಾರ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಒಂದು ಕೋಟಿಗೂ ಹೆಚ್ಚು ಕೇಂದ್ರ ನೌಕರರು ಎಂಟನೇ ವೇತನ ಆಯೋಗದ ಬಗ್ಗೆ ಕುತೂಹಲದಿಂದ ಇದ್ದಾರೆ.
ಹೊಸ ಪ್ರಸ್ತಾವನೆ ಏನು? :
ವರದಿಯ ಪ್ರಕಾರ,ಶಿವ ಗೋಪಾಲ್ ಮಿಶ್ರಾ ಅವರು ಕ್ಯಾಬಿನೆಟ್ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಹೊಸ ವೇತನ ಆಯೋಗದ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ ಎನ್ನಲಾಗಿದೆ. 2015ರ ನಂತರ ಸರಕಾರದ ಆದಾಯ ದುಪ್ಪಟ್ಟಾಗಿದೆ ಎಂದು ಅವರು ಹೇಳಿದ್ದಾರೆ. ತೆರಿಗೆ ಸಂಗ್ರಹವೂ ಸಾಕಷ್ಟು ಹೆಚ್ಚಾಗಿದೆ. ಆದರೆ ಕೇಂದ್ರ ಸರ್ಕಾರಿ ನೌಕರರ ವೇತನ ಹಣದುಬ್ಬರಕ್ಕೆ ಅನುಗುಣವಾಗಿ ಏರಿಕೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಹೊಸ ಕ್ಯಾಂಪಸ್‌ಗೆ ಸ್ಥಳಾಂತರಗೊಳ್ಳಲು ಸಿಬ್ಬಂದಿಗೆ ₹ 8 ಲಕ್ಷದವರೆಗೆ ಪ್ರೋತ್ಸಾಹ ಧನ ನೀಡಲು ಮುಂದಾದ ಇನ್ಫೋಸಿಸ್
ಬಜೆಟ್ ಅಂಕಿಅಂಶಗಳ ಪ್ರಕಾರ 2015ರಿಂದ 2023 ರವರೆಗೆ ಕೇಂದ್ರ ಸರ್ಕಾರದ ಆದಾಯ ದ್ವಿಗುಣಗೊಂಡಿದೆ ಎಂದು ಮಿಶ್ರಾ ಹೇಳಿದರು.ಆದಾಯ ಸಂಗ್ರಹದಲ್ಲಿ ಸಾಕಷ್ಟು ಹೆಚ್ಚಳವಾಗಿರುವುದನ್ನು ನಾವು ಕಾಣಬಹುದು.ಕೇಂದ್ರ ಸರ್ಕಾರದ ಈ ನೈಜ ಆದಾಯ ಶೇ.100ಕ್ಕಿಂತ ಹೆಚ್ಚಿದೆ.ಹೀಗಾಗಿ 2016ನೇ ಸಾಲಿಗೆ ಹೋಲಿಸಿದರೆ ಕೇಂದ್ರ ಸರ್ಕಾರ ಹೆಚ್ಚು ಹಣ ಪಾವತಿಸುವ ಸಾಮರ್ಥ್ಯ ಹೊಂದಿದೆ.2023ರ ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹವು 1.87 ಲಕ್ಷ ಕೋಟಿಗೆ ಏರಿಕೆಯಾಗಿದೆ.2022-23ನೇ ಸಾಲಿನಲ್ಲಿ ಆದಾಯ ತೆರಿಗೆ ಸಂಗ್ರಹವೂ ಅತ್ಯಧಿಕವಾಗಿದೆ.FY 2022-23ರಲ್ಲಿ ಒಟ್ಟು ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ (ಎಸ್‌ಟಿಟಿ ಸೇರಿದಂತೆ) 9,60,764 ಕೋಟಿ ರೂ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 24.23 ಶೇಕಡಾ ಹೆಚ್ಚಳವನ್ನು ತೋರಿಸುತ್ತದೆ.
ಕಳೆದ ದಶಕದಲ್ಲಿ ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ ಸುಮಾರು 10 ಲಕ್ಷದಷ್ಟು ಕಡಿಮೆಯಾಗಿದೆ.ಇದರಿಂದ ಈಗಿರುವ ನೌಕರರಿಗೆ ಕೆಲಸದ ಹೊರೆ ಹೆಚ್ಚಿದೆ.ಪತ್ರದಲ್ಲಿ ಪೇ ಮ್ಯಾಟ್ರಿಕ್ಸ್‌ನ ಆವರ್ತಕ ಪರಿಶೀಲನೆಗೆ ಸಹ ಒತ್ತು ನೀಡಲಾಗಿದೆ. ಅದರಲ್ಲಿ ಪೂರ್ಣ 10 ವರ್ಷ ಕಾಯಬಾರದು ಎಂದು ಹೇಳಲಾಗಿದೆ.ಶಿಫಾರಸು ಅಕ್ರಾಯ್ಡ್ ಸೂತ್ರವನ್ನು ಮಾನದಂಡವಾಗಿ ಪ್ರಸ್ತಾಪಿಸುತ್ತದೆ.ಈ ಸೂತ್ರವು ಅಗತ್ಯ ವಸ್ತುಗಳ ಬದಲಾಗುತ್ತಿರುವ ಬೆಲೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.ಇದು ವೇತನ ಹೊಂದಾಣಿಕೆಗೆ ಹೆಚ್ಚು ಕ್ರಿಯಾತ್ಮಕ ವಿಧಾನವನ್ನು ಒದಗಿಸುತ್ತದೆ.
ಇದನ್ನೂ ಓದಿ : ಮೋದಿ ಅವಧಿಯಲ್ಲೇ ಅತಿ ಹೆಚ್ವು ತೈಲ ಬೆಲೆ ಏರಿಕೆ: ಸಚಿವ ಎಂ ಬಿ ಪಾಟೀಲ
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಡಿಎ ಈಗಾಗಲೇ ಜನವರಿ 1, 2024 ರಿಂದ ಶೇಕಡಾ 50 ಕ್ಕೆ ತಲುಪಿದೆ.ಹಣದುಬ್ಬರ ಮತ್ತು ಮೌಲ್ಯವರ್ಧನೆಯನ್ನು ಗಮನಿಸಿದರೆ,ಡಿಎ ಅಂಶವು 50 ಪ್ರತಿಶತವನ್ನು ದಾಟುತ್ತದೆ.20 ಲಕ್ಷಕ್ಕೂ ಹೆಚ್ಚು ಮಿಲಿಟರಿಯೇತರ ಕೇಂದ್ರ ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ಬರುತ್ತಾರೆ ಎಂಬುದು ಉಲ್ಲೇಖನೀಯ.ಕೇಂದ್ರ ಸರ್ಕಾರಿ ನೌಕರ ತನ್ನ ಮೂಲ ವೇತನದ 10 ಪ್ರತಿಶತ ಮತ್ತು ಡಿಎಯನ್ನು ಪ್ರತಿ ತಿಂಗಳು ಎನ್‌ಪಿಎಸ್‌ಗೆ ನೀಡಬೇಕಾಗುತ್ತದೆ.ಇದರಿಂದಾಗಿ ಕೈಗೆ ಬರುವ ವೇತನ ಕಡಿಮೆಯಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.