ನವದೆಹಲಿ : ಉದ್ಯೋಗದಲ್ಲಿರುವ ಜನರಿಗೆ ಬಹಳ ಮುಖ್ಯವಾದ ಸುದ್ದಿ ಇದಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿಯ (EPF) ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಿದೆ. ಆರ್ಥಿಕ ವರ್ಷದಲ್ಲಿ ಇಪಿಎಫ್‌ಗೆ ವ್ಯಕ್ತಿಯ ಕೊಡುಗೆ 2.5 ಲಕ್ಷಕ್ಕಿಂತ ಹೆಚ್ಚಿದ್ದರೆ, ಈ ಹಣಕಾಸು ವರ್ಷ 2021-22 ರಿಂದ ಎರಡು ಪ್ರತ್ಯೇಕ ಪಿಎಫ್ ಖಾತೆಗಳನ್ನು ನಿರ್ವಹಿಸಬೇಕಾಗುತ್ತದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಕೂಡ ಈ ಕುರಿತು ಅಧಿಸೂಚನೆ ಹೊರಡಿಸಿದೆ.


COMMERCIAL BREAK
SCROLL TO CONTINUE READING

ಈಗ ನೀವು ಇಟ್ಟುಕೊಳ್ಳಬೇಕು ಪಿಎಫ್ ಖಾತೆ


ಅಧಿಸೂಚನೆಯ ಪ್ರಕಾರ, ಅಸ್ತಿತ್ವದಲ್ಲಿರುವ ಭವಿಷ್ಯ ನಿಧಿ ಖಾತೆಗಳನ್ನು (PF Accounts) ಎರಡು ಪ್ರತ್ಯೇಕ ಖಾತೆಗಳಾಗಿ ವಿಂಗಡಿಸಲಾಗಿದೆ. ಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ ಗಳಿಸಿದ ಬಡ್ಡಿಯ ಮೇಲಿನ ತೆರಿಗೆಯನ್ನು ಲೆಕ್ಕಾಚಾರ ಮಾಡಲು ಪ್ರತ್ಯೇಕ ಪಿಎಫ್ ಖಾತೆಯನ್ನು ತೆರೆಯಲಾಗುತ್ತದೆ. ಸಿಬಿಡಿಟಿಯ ಅಧಿಸೂಚನೆಯ ಪ್ರಕಾರ, ಮಾರ್ಚ್ 31, 2021 ರವರೆಗೆ ಯಾವುದೇ ಕೊಡುಗೆಯ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಲಾಗುವುದಿಲ್ಲ, ಆದರೆ 2020-21ರ ಆರ್ಥಿಕ ವರ್ಷದ ನಂತರ ಪಿಎಫ್ ಖಾತೆಗಳ ಮೇಲೆ ಪಡೆದ ಬಡ್ಡಿಯನ್ನು ತೆರಿಗೆಗೆ ಒಳಪಡಿಸಲಾಗುತ್ತದೆ, ಇದನ್ನು ಪ್ರತ್ಯೇಕವಾಗಿ ಲೆಕ್ಕಹಾಕಲಾಗುತ್ತದೆ.


ಇದನ್ನೂ ಓದಿ : EPFO ​​ನಿಂದ ಈ ಪ್ರಯೋಜನಗಳನ್ನು ಪಡೆಯಲು ಮೊದಲು ಸಲ್ಲಿಸಿ ಇ-ನಾಮಿನೇಷನ್ : ಹೇಗೆ ಇಲ್ಲಿದೆ ನೋಡಿ


ನಿಯಮಗಳು 1 ಏಪ್ರಿಲ್ 2022 ರಿಂದ ಅನ್ವಯ


CBDT(Central Board of Direct Taxes) ಪ್ರಕಾರ, ಈ ನಿಯಮಗಳು ಏಪ್ರಿಲ್ 1, 2022 ರಿಂದ ಜಾರಿಗೆ ಬರಲಿವೆ. 2021-22ರ ಆರ್ಥಿಕ ವರ್ಷದಲ್ಲಿ, ನಿಮ್ಮ ಪಿಎಫ್ ಖಾತೆಯಲ್ಲಿ ರೂ 2.5 ಲಕ್ಷಕ್ಕಿಂತ ಹೆಚ್ಚು ಠೇವಣಿ ಇಟ್ಟಿದ್ದರೆ, ಆ ಹೆಚ್ಚುವರಿ ಮೊತ್ತದ ಮೇಲೆ ಪಡೆದ ಬಡ್ಡಿಯ ಮೇಲೆ ನೀವು ತೆರಿಗೆ ಪಾವತಿಸಬೇಕಾಗುತ್ತದೆ. ಮುಂದಿನ ವರ್ಷದ ಆದಾಯ ತೆರಿಗೆ ರಿಟರ್ನ್ ಫೈಲಿಂಗ್‌ನಲ್ಲಿ ನೀವು ಈ ಮಾಹಿತಿಯನ್ನು ಸಹ ಹೇಳಬೇಕಾಗುತ್ತದೆ. ವ್ಯಕ್ತಿಯ ಖಾತೆಯಲ್ಲಿ ಉದ್ಯೋಗದಾತ ಕೊಡುಗೆ ಇಲ್ಲದಿದ್ದರೆ, ಈ ಮಿತಿಯು 5 ಲಕ್ಷ ರೂ. ವರೆಗೆ ಇಡಬಹುದು.


ಖಾಸಗಿ-ಸರ್ಕಾರಿ ನೌಕರರಿಗೆ ಪ್ರತ್ಯೇಕ ಮಿತಿ


ನೆನಪಿಡುವ ಒಂದು ಮುಖ್ಯ ವಿಷಯವೆಂದರೆ ಈ ಮಿತಿಯು ವರ್ಷಕ್ಕೆ 2.5 ಲಕ್ಷ ರೂ.ಗಳು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ(Employees) ಮಾತ್ರವೇ ಹೊರತು ಸರ್ಕಾರಿ ನೌಕರರಿಗೆ ಅಲ್ಲ. ನೀವು ಸರ್ಕಾರಿ ಉದ್ಯೋಗಿಯಾಗಿದ್ದರೆ, ಇಪಿಎಫ್ ಮತ್ತು ವಿಪಿಎಫ್‌ಗೆ 2.5 ಲಕ್ಷದ ಬದಲು 5 ಲಕ್ಷ ರೂ. ಅರ್ಥಾತ್ ಸರ್ಕಾರಿ ನೌಕರನ ಇಪಿಎಫ್ ಮತ್ತು ವಿಪಿಎಫ್ ಖಾತೆಯಲ್ಲಿ ವಾರ್ಷಿಕವಾಗಿ ಐದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಜಮಾ ಮಾಡಿದರೆ, ಅವರು ಆ ಹೆಚ್ಚುವರಿ ಮೊತ್ತದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ : Gold-Silver Price : ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ₹ 1,000 ಇಳಿಕೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.