DA Arrears for govt employees : ಜುಲೈ 2015 ರಿಂದ ಡಿಸೆಂಬರ್ 31, 2015 ರವರೆಗೆ ಬಾಕಿ ಉಳಿಸಿಕೊಂಡಿದ್ದ 6 ಪ್ರತಿಶತದಷ್ಟು ತುಟ್ಟಿಭತ್ಯೆಯನ್ನು ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಇದೀಗ ಪಂಜಾಬ್ ರಾಜ್ಯ ಸರ್ಕಾರವು ನೌಕರರಿಗೆ ತುಟ್ಟಿಭತ್ಯೆ ಸಂಬಂಧಿಸಿದಂತೆ  ಸಿಹಿಸುದ್ದಿ ನೀಡಿದೆ. ಹಿಂದಿನ ಶಿರೋಮಣಿ ಅಕಾಲಿದಳ-ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಕಿ ಇರಿಸಿಕೊಂಡಿದ್ದ   6 ಪ್ರತಿಶತ ತುಟ್ಟಿಭತ್ಯೆಯ ಬಾಕಿ ಹಣವನ್ನು ಮೂರು ಕಂತುಗಳಲ್ಲಿ ಬಿಡುಗಡೆ ಮಾಡುವುದಾಗಿ ಸಿಎಂ ಭಗವಂತ್ ಮಾನ್ ಘೋಷಿಸಿದ್ದಾರೆ. 


COMMERCIAL BREAK
SCROLL TO CONTINUE READING

ಬೊಕ್ಕಸಕ್ಕೆ 356 ಕೋಟಿ ಹೊರೆ ಬೀಳಲಿದೆ :
ಜುಲೈ 2015 ರಿಂದ ಡಿಸೆಂಬರ್ 31, 2015 ರವರೆಗೆ ಬಾಕಿ ಉಳಿಸಿಕೊಂಡಿದ್ದ 6 ಪ್ರತಿಶತದಷ್ಟು ತುಟ್ಟಿಭತ್ಯೆಯನ್ನು ಜಾರಿಗೊಳಿಸುವುದಾಗಿ ಪಂಜಾಬ್ ಸರ್ಕಾರ ಘೋಷಿಸಿದೆ. ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 356 ಕೋಟಿ ರೂಪಾಯಿ ಆರ್ಥಿಕ ಹೊರೆ ಬೀಳಲಿದೆ ಎಂದು ಸಿಎಂ ಕಚೇರಿಯ ವಕ್ತಾರರು ತಿಳಿಸಿದ್ದಾರೆ. ಆದರೆ, ರಾಜ್ಯದ ನೌಕರರು ರಾಜ್ಯ ಆಡಳಿತದ ಪ್ರಮುಖ ಭಾಗವಾಗಿದ್ದು, ಅವರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಿಎಂ ಭಗವಂತ್ ಮಾನ್ ಹೇಳಿದ್ದಾರೆ. 


ಇದನ್ನೂ ಓದಿ : Stock Market Today: ಷೇರು ಮಾರುಕಟ್ಟೆಯಲ್ಲಿ ಮತ್ತೆ ಕುಸಿತ, ಕೈಸುಟ್ಟುಕೊಂಡ ಹೂಡಿಕೆದಾರ!


ಉದ್ಯೋಗಿಗಳಿಗೆ ದೊಡ್ಡ ಕೊಡುಗೆ : 
ಸರ್ಕಾರಿ ನೌಕರರ ಬಾಕಿ ಇರುವ ತುಟ್ಟಿಭತ್ಯೆಯ ಒಂದು ಕಂತನ್ನು ಇಂದು ಬಿಡುಗಡೆ ಮಾಡಲಾಗಿದೆ. ತುಟ್ಟಿಭತ್ಯೆ ಬಾಕಿಯು ಶೇ.6 ರಷ್ಟಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. 2015 ಜುಲೈ 1ರಿಂದ  ಡಿಸೆಂಬರ್ 31 2015 ರವರೆಗಿನ ಬಾಕಿ ತುಟ್ಟಿಭತ್ಯೆಯನ್ನು ಸರ್ಕಾರಿ ನೌಕರರ ಖಾತೆಗೆ ಬಿಡುಗಡೆ ಮಾಡುವ ನಿರ್ಧಾರಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 356 ಕೋಟಿ ರೂ.ನಷ್ಟವಾಗಲಿದೆ. 


ಬಾಕಿ ಹಣ ಪಾವತಿಸುವಂತೆ ಸೂಚನೆ  :
ಡಿಎ ಬಾಕಿಯನ್ನು ಪಾವತಿಸುವಂತೆ ಸರ್ಕಾರಿ ನೌಕರರು ಬಹುದಿನಗಳಿಂದ ಒತ್ತಾಯಿಸುತ್ತಿದ್ದರು. ಇದೀಗ ಸರ್ಕಾರಿ ನೌಕರರ ಬೇಡಿಕೆಗೆ ಪಂಜಾಬ್ ಸರ್ಕಾರ ಅಸ್ತು ಎಂದಿದೆ. ಇತ್ತೀಚೆಗಷ್ಟೇ ಹೈಕೋರ್ಟ್ ನೌಕರರ ಬಾಕಿಯನ್ನು ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆ  ಸಿಎಂ ಮುಂದೆ ಕಡತವನ್ನು ಇಟ್ಟಿತ್ತು. ಈ ಕಡತಕ್ಕೆ ಇದೀಗ ಸಿಎಂ ಹಸಿರು ನಿಶಾನೆ ತೋರಿದ್ದಾರೆ. ಸರ್ಕಾರದ ಈ ಘೋಷಣೆಯಿಂದಾಗಿ ಸರ್ಕಾರಿ ನೌಕರರು ಸಂತಸದ ಅಲೆಯಲ್ಲಿ ತೇಲಾಡಿದ್ದಾರೆ. 


ಇದನ್ನೂ ಓದಿ 212 ಕಿಲೋಮೀಟರ್ ಶ್ರೇಣಿಯ ವಿದ್ಯುತ್ ಸ್ಕೂಟರ್ ಪರಿಚಯಿಸಿದ Simple ONE 


ಪ್ರತಿ ಆರು ತಿಂಗಳಿಗೊಮ್ಮೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗುತ್ತದೆ. ಕಳೆದ ಮಾರ್ಚ್‌ನಲ್ಲಿ ಸರ್ಕಾರ ತುಟ್ಟಿಭತ್ಯೆ ಹೆಚ್ಚಿಸಿದ್ದು, ಈ ಹೆಚ್ಚಳ ಜನವರಿ 1 ರಿಂದ ಜಾರಿಗೆ ಬಂದಿದೆ. ಕೇಂದ್ರ ಉದ್ಯೋಗಿಗಳಿಗೆ ಮುಂದಿನ ಡಿಎ ಸೆಪ್ಟೆಂಬರ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆಯಿದೆ. ಈ ಹೆಚ್ಚಳ ಜುಲೈ 1 ರಿಂದ ಜಾರಿಗೆ ಬರಲಿದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ