Punjab National Bank : ಈ ವರ್ಷ ಮನೆ ಖರೀದಿಸುವ ಯೋಚನೆಯಲ್ಲಿದ್ದರೆ ದೇಶದ ಸರ್ಕಾರಿ ಬ್ಯಾಂಕ್ PNB ನಿಮಗೆ ಈ ಅವಕಾಶವನ್ನು ನೀಡುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಅಗ್ಗದ ದರದಲ್ಲಿ ಮನೆ ಖರೀದಿಸುವುದು ಸಾಧ್ಯವಾಗುತ್ತದೆ. PNB ವಸತಿ ಆಸ್ತಿ, ವಾಣಿಜ್ಯ ಆಸ್ತಿ, ಕೈಗಾರಿಕಾ ಆಸ್ತಿ ಮತ್ತು ಕೃಷಿ ಆಸ್ತಿಯನ್ನು ಮಾರಾಟ ಮಾಡುತ್ತಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ PNB : 
PNB ಮೆಗಾ ಇ-ಹರಾಜು ಮೂಲಕ ನಿಮ್ಮ ಕನಸಿನ ಆಸ್ತಿಯನ್ನು  ಖರೀಸುವ ಅವಕಾಶವಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕೃತ ಟ್ವೀಟ್‌ನಲ್ಲಿ ಬರೆದಿದೆ. ಇಂದು ಅಂದರೆ ಜುಲೈ 20 ರಂದು ಅಗ್ಗದ ದರದಲ್ಲಿ ಮನೆ ಖರೀದಿಸಲು ಬಿಡ್ ಮಾಡಬಹುದಾಗಿದೆ. 


ಇದನ್ನೂ ಓದಿ : ಜುಲೈ ತಿಂಗಳಲ್ಲಿ ಕರ್ನಾಟಕದ ಎರಡು ಬ್ಯಾಂಕ್ ಗಳ ಲೈಸನ್ಸ್ ರದ್ದುಗೊಳಿಸಿದ ಆರ್‌ಬಿಐ : ಎಲ್ಲಾ ರೀತಿಯ ವಹಿವಾಟು ಸ್ಥಗಿತ


12,022 ಮನೆಗಳಿಗೆ ಬಿಡ್ ಮಾಡಬಹುದು : 
12022 ಮನೆಗಳು, 2313 ಅಂಗಡಿಗಳು, 1171 ಕೈಗಾರಿಕಾ ಆಸ್ತಿಗಳು ಮತ್ತು 103 ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿದೆ ಎಂದು ಪಿಎನ್ ಬಿ ಹೇಳಿದೆ. ಈ ಹರಾಜಿನ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಅಧಿಕೃತ ಲಿಂಕ್ https://ibapi.in/ ಗೆ ಭೇಟಿ ನೀಡಬಹುದು


ಯಾವ ರೀತಿಯ ಆಸ್ತಿಯನ್ನು ಹರಾಜು ಮಾಡಲಾಗುತ್ತದೆ? : 
ಅನೇಕ ಜನರು ಬ್ಯಾಂಕ್‌ನಿಂದ ಆಸ್ತಿಗಾಗಿ ಸಾಲವನ್ನು ತೆಗೆದುಕೊಳ್ಳುತ್ತಾರೆ. ಆದರೆ ಕೆಲವು ಕಾರಣಗಳಿಂದ ಅವರು ತಮ್ಮ ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ. ನಂತರ ಅವರೆಲ್ಲರ ಜಮೀನು ಅಥವಾ ನಿವೇಶನವನ್ನು ಬ್ಯಾಂಕ್ ಸ್ವಾಧೀನಪಡಿಸಿಕೊಳ್ಳುತ್ತದೆ. ಈ ರೀತಿಯ ಆಸ್ತಿಯನ್ನು ಬ್ಯಾಂಕ್‌ಗಳು ಕಾಲಕಾಲಕ್ಕೆ ಹರಾಜು ಮಾಡುತ್ತವೆ.  ಈ ಹರಾಜಿನಲ್ಲಿ, ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಬ್ಯಾಂಕ್ ತನ್ನ ಬಾಕಿ ಮೊತ್ತವನ್ನು ಮರುಪಡೆಯುತ್ತದೆ.


ಇದನ್ನೂ ಓದಿ : Modi Government: ಟೊಮೆಟೊ ದರಕ್ಕೆ ಸಂಬಂಧಿಸಿದಂತೆ ಶ್ರೀಸಾಮಾನ್ಯರಿಗೆ ಮತ್ತೊಂದು ನೆಮ್ಮದಿಯ ಸುದ್ದಿ ನೀಡಿದ ಕೇಂದ್ರ ಸರ್ಕಾರ!


SARFAESI ಕಾಯಿದೆಯಡಿಯಲ್ಲಿ ನಡೆಯಲಿದೆ ಹರಾಜು :  
ಈ ಹರಾಜು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ. ಈ ಮೆಗಾ ಇ-ಹರಾಜನ್ನು SARFAESI ಕಾಯಿದೆ ಅಡಿಯಲ್ಲಿ ಮಾಡಲಾಗುತ್ತಿದೆ.  ಬ್ಯಾಂಕ್‌ನಲ್ಲಿ ಅಡಮಾನ ಇಟ್ಟು, ಯಾವುದೋ ಕಾರಣದಿಂದ ಸಾಲ ಮರು ಪಾವತಿ ಮಾಡಲು ಸಾಧ್ಯವಾಗದಿದ್ದಲ್ಲಿ ಅಂಥಹ ಆಸ್ತಿಯನ್ನು ಹರಾಜಿನಲ್ಲಿ ಇಡಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.