Indian Railways News : ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿವೃತ್ತ ರೈಲ್ವೇ ಉದ್ಯೋಗಿಗಳಿಗೆ ಪಿಂಚಣಿ ನೀಡಲು ಬಂಧನ್ ಬ್ಯಾಂಕ್‌ ಗೆ ಅನುಮೋದನೆ ನೀಡಿದೆ. ಖಾಸಗಿ ವಲಯದ ಬಂಧನ್ ಬ್ಯಾಂಕ್ ಹೊರಡಿಸಿದ ಹೇಳಿಕೆಯ ಪ್ರಕಾರ, ಪಿಂಚಣಿ ವಿತರಣೆ ಪ್ರಕ್ರಿಯೆಯನ್ನು ನಡೆಸಲು ಬ್ಯಾಂಕ್ ತನ್ನ ವ್ಯವಸ್ಥೆಯನ್ನು ರೈಲ್ವೆ ಸಚಿವಾಲಯದೊಂದಿಗೆ ಶೀಘ್ರದಲ್ಲೇ ಜೋಡಿಸಲಿದೆ. ಆರ್‌ಬಿಐನ ಈ ಅನುಮೋದನೆಯೊಂದಿಗೆ, ದೇಶದಾದ್ಯಂತ ರೈಲ್ವೆಯ 17 ಪ್ರಾದೇಶಿಕ ಕಚೇರಿಗಳು ಮತ್ತು ಎಂಟು ಉತ್ಪಾದನಾ ಘಟಕಗಳಿಂದ ಪ್ರತಿ ವರ್ಷ ಸುಮಾರು 50,000 ನಿವೃತ್ತ ನೌಕರರು  ಈ ಬ್ಯಾಂಕಿನ  ಗ್ರಾಹಕರಾಗಲಿದ್ದಾರೆ. 


COMMERCIAL BREAK
SCROLL TO CONTINUE READING

ರೈಲ್ವೆ ದೇಶದ ಅತಿ ದೊಡ್ಡ ಉದ್ಯೋಗದಾತ : 
ಭಾರತೀಯ ರೈಲ್ವೇ ದೇಶದ ಅತಿದೊಡ್ಡ ಉದ್ಯೋಗದಾತರಲ್ಲಿ ಒಂದಾಗಿದೆ. ಇದು ಪಿಂಚಣಿದಾರರಿಗೆ ಸ್ಪರ್ಧಾತ್ಮಕ ದರಗಳು ಮತ್ತು ಬ್ಯಾಂಕ್ ನೀಡುವ ಇತರ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ. ರೈಲ್ವೇ ಸಚಿವಾಲಯದ ಪರವಾಗಿ ಇ-ಪಿಪಿಒ ಮೂಲಕ ಪಿಂಚಣಿ ವಿತರಿಸಲು ಬಂಧನ್ ಬ್ಯಾಂಕ್‌ಗೆ ಆರ್‌ಬಿಐ ಅಧಿಕಾರ ನೀಡಿದೆ. ಇದರಿಂದಾಗಿ ರೈಲ್ವೆ ಸಚಿವಾಲಯದ ಎಲ್ಲಾ ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ ನೀಡಲು ಬಂಧನ್ ಬ್ಯಾಂಕ್‌ಗೆ ಅವಕಾಶ  ಸಿಕ್ಕಿದೆ. 


ಇದನ್ನೂ ಓದಿ : ಹಳೆಯ ಪಿಂಚಣಿ ಯೋಜನೆ ಬಗ್ಗೆ ಹೊಸ ಅಪ್ಡೇಟ್ ! ಕೇಂದ್ರ ಸರ್ಕಾರ ನೀಡಿದ ಮಾಹಿತಿ ಇದು !


12 ಲಕ್ಷ ಜನರಿಗೆ ಉದ್ಯೋಗ ನೀಡುತ್ತದೆ ರೈಲ್ವೇ  : 
ದೇಶದ ಅತಿ ದೊಡ್ಡ ಉದ್ಯೋಗದಾತ ಆಗಿರುವ ರೈಲ್ವೆ ಸುಮಾರು 12 ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ. ರೈಲ್ವೆ ಸಚಿವಾಲಯದ ಸಹಯೋಗದಲ್ಲಿ ಬ್ಯಾಂಕ್ ಶೀಘ್ರದಲ್ಲೇ ಪಿಂಚಣಿ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ. ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬಂಧನ್ ಬ್ಯಾಂಕಿನ ನಿವ್ವಳ ಲಾಭವು ಮೂರು ಪಟ್ಟು ಹೆಚ್ಚಾಗಿ 721 ಕೋಟಿ ರೂ.ಗೆ ಏರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 209 ಕೋಟಿ ರೂ. ಆಗಿತ್ತು. ಇದಕ್ಕೆ  ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ.245 ರಷ್ಟು ಭಾರೀ ಏರಿಕೆಯಾಗಿದೆ.


ಪ್ರಸಕ್ತ ತ್ರೈಮಾಸಿಕದಲ್ಲಿ ಸುಮಾರು 10 ಲಕ್ಷ ಗ್ರಾಹಕರು ಬ್ಯಾಂಕ್‌ಗೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಬ್ಯಾಂಕ್ ಗ್ರಾಹಕರ ಸಂಖ್ಯೆ 3.17 ಕೋಟಿಗೆ ಏರಿಕೆಯಾಗಿದೆ. ಸೆಪ್ಟೆಂಬರ್ 30, 2023 ರಂತೆ, ಬ್ಯಾಂಕ್ 6200 ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿದೆ. ಬ್ಯಾಂಕಿಂಗ್ ಜಾಲವು 1621 ಶಾಖೆಗಳನ್ನು ಮತ್ತು 4,598 ಬ್ಯಾಂಕಿಂಗ್ ಘಟಕಗಳನ್ನು ಒಳಗೊಂಡಿದೆ.


ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಪ್ರಮುಖ ಸುದ್ದಿ! ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಈ ಆದೇಶ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ