ನವದೆಹಲಿ: 2022-23ರ ಹಣಕಾಸು ವರ್ಷದ ಗಳಿಕೆ ದಾಖಲೆಯನ್ನು ಭಾರತೀಯ ರೈಲ್ವೆ ಬ್ರೇಕ್ ಮಾಡಿದೆ. ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಗಳಿಕೆ ಅಂಕಿ-ಅಂಶಗಳಲ್ಲಿ ಪ್ರಯಾಣಿಕರ ದರ ಮತ್ತು ಸರಕು ಸಾಗಣೆ ಆದಾಯ ಎರಡರಲ್ಲೂ ಏರಿಕೆಯಾಗಿದೆ. ಗಳಿಕೆಯ ಅಂಕಿ-ಅಂಶಗಳನ್ನು ಮತ್ತಷ್ಟು ಹೆಚ್ಚಿಸಲು ಭಾರತೀಯ ರೈಲ್ವೆ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದ ಪ್ರಕಾರ ಸಾರಿಗೆಯಲ್ಲಿ ಪಾಲನ್ನು ಹೆಚ್ಚಿಸಲು ಮತ್ತು ಆದಾಯ ಹೆಚ್ಚಿಸಲು ರೈಲ್ವೆ 84,000 ಬೋಗಿಗಳಿಗೆ ಆರ್ಡರ್ ಮಾಡಿದೆ. ರೈಲ್ವೆ ಖಾತೆ ರಾಜ್ಯ ಸಚಿವ ದರ್ಶನ ಜರ್ದೋಶ್ ಈ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಮುಂದಿನ ದಿನಗಳಲ್ಲಿ ರೈಲ್ವೆ ಆದಾಯದಲ್ಲಿ ಹೆಚ್ಚಳವಾದ ಮೇಲೆ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡಲಾಗಿದ್ದ ವಿನಾಯಿತಿ ಮತ್ತೆ ಜಾರಿಗೆ ತರಲು ಸರಕು ಸಾಗಣೆಯಲ್ಲಿ ಪಾಲು ಹೆಚ್ಚಿಸುವ ಗುರಿ ಹೊಂದಲಾಗಿದೆ . 2030ರ ವೇಳೆಗೆ ಸರಕು ಸಾಗಣೆಯ ಪಾಲನ್ನು ಶೇ.45ಕ್ಕೆ ಹೆಚ್ಚಿಸುವ ಗುರಿಯನ್ನು ರೈಲ್ವೆ ಹೊಂದಿದೆ. ಇದಕ್ಕಾಗಿ ಈ ವರ್ಷ ಸುಮಾರು 84,000 ಬೋಗಿಗಳಿಗೆ ಆರ್ಡರ್ ಮಾಡಲಾಗಿದ್ದು, ಇದುವರೆಗಿನ ಅತಿದೊಡ್ಡ ಅಂಕಿ-ಅಂಶವಾಗಿದೆ. ಈ ವರ್ಷ ರೈಲ್ವೆ ತನ್ನ ಅತ್ಯಧಿಕ ವಾಹಕ ಸಾಮರ್ಥ್ಯವನ್ನು 1500 ಮಿಲಿಯನ್ ಟನ್‌ಗಳನ್ನು ಸಾಧಿಸುವ ನಿರೀಕ್ಷೆಯಿದೆ ಎಂದು ಕೈಗಾರಿಕಾ ಮಂಡಳಿ ಅಸೋಚಾಮ್‌ನ ಕಾರ್ಯಕ್ರಮದಲ್ಲಿ ರೈಲ್ವೆ ರಾಜ್ಯ ಸಚಿವರು ಹೇಳಿದರು.


ಇದನ್ನೂ ಓದಿ: Government Scheme : ಸುಕನ್ಯಾ ಸಮೃದ್ಧಿ ಯೋಜನೆಯ ಚಂದಾದಾರರಿಗೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ!


27ರಿಂದ 45ರಷ್ಟು ಹೆಚ್ಚಿಸುವ ಗುರಿ


ಸಾಮಾನ್ಯವಾಗಿ ಬೃಹತ್ ಸರಕುಗಳನ್ನು ಸಾಗಿಸಲು ರೈಲ್ವೆ ಸಾರಿಗೆ ಬಳಕೆಯಾಗುತ್ತದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವರು ಹೇಳಿದ್ದಾರೆ. ಆದರೆ ಈಗ ರಸ್ತೆ ಮೂಲಕ ಸಾಗಿಸಬಹುದಾದ ಅನೇಕ ಉತ್ಪನ್ನಗಳನ್ನು ರೈಲು ಮೂಲಕ ಕಂಟೈನರ್‌ಗಳಲ್ಲಿ ಸಾಗಿಸಲಾಗುತ್ತಿದೆ. ‘ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು 2030ರ ವೇಳೆಗೆ ಸರಕು ಸಾಗಣೆಯಲ್ಲಿ ರೈಲ್ವೆಯ ಪಾಲನ್ನು ಶೇ.27ರಿಂದ ಶೇ.45ಕ್ಕೆ ಹೆಚ್ಚಿಸುವ ಗುರಿ ನಿಗದಿಪಡಿಸಲಾಗಿದೆ. ಇದಕ್ಕಾಗಿ ಮೂಲಭೂತವಾಗಿ ವಿವಿಧ ಸಾರಿಗೆ ಯೋಜನೆಗಳನ್ನು ಹೊರತುಪಡಿಸಿ 4 ವಿಷಯಗಳಾದ ಟ್ರ್ಯಾಕ್ ಲಭ್ಯತೆ, ಬೋಗಿ ಮತ್ತು ರ್ಯಾಕ್, ಟರ್ಮಿನಲ್ ಲಭ್ಯತೆ ಅಗತ್ಯವಿದೆ ಎಂದು ಜರ್ದೋಶ್ ಹೇಳಿದ್ದಾರೆ.  


‘ಕಳೆದ 8 ವರ್ಷಗಳಲ್ಲಿ ಈ ಎಲ್ಲಾ ಅಂಶಗಳಿಗೆ ಸರ್ಕಾರ ಒತ್ತು ನೀಡಿದೆ. 2014 ಮತ್ತು 2021-22ರ ನಡುವೆ ದಿನಕ್ಕೆ 7 ಕಿ.ಮೀ ಆಧಾರದ ಮೇಲೆ ರೈಲು ಹಳಿ ಮಂಜೂರಾತಿ ನೀಡಲಾಗಿದ್ದು, ಈಗ ಅದು ದಿನಕ್ಕೆ 12 ಕಿ.ಮೀಗೆ ಏರಿಕೆಯಾಗಿದೆ. ತ್ವರಿತ ಗತಿಯಲ್ಲಿ ಪೂರ್ಣಗೊಳ್ಳುತ್ತಿರುವ ಯೋಜನೆಗಳು ದೇಶದ ಪ್ರತಿಯೊಂದು ಭಾಗಕ್ಕೂ ಸಂಪರ್ಕ ಕಲ್ಪಿಸುವ ಕೆಲಸ ಮಾಡಲಿವೆ. ಮೀಸಲಿಟ್ಟ ಸರಕು ಸಾಗಣೆ ಕಾರಿಡಾರ್ ಕಾಮಗಾರಿಯಲ್ಲಿ ಶೇ.61ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇದರ ಕೆಲಸ ಸಂಪೂರ್ಣವಾದಾಗ ಸರಕು ಸಾಗಣೆಯು ತುಂಬಾ ವೇಗವಾಗಿರುತ್ತದೆ’ ಎಂದು ಸಚಿವರು ತಿಳಿಸಿದ್ದಾರೆ.


ಇದನ್ನೂ ಓದಿ: Income Tax Return : ತೆರಿಗೆದಾರರ ಗಮನಕ್ಕೆ : ITR ಸಲ್ಲಿಕೆಗೆ ದಿನಾಂಕ ಘೋಷಣೆ, ಇಲ್ಲಿದೆ ಸಂಪೂರ್ಣ ಮಾಹಿತಿ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.