Indian Railways : ರೈಲ್ವೇಯಿಂದ ಪ್ರಯಾಣಿಕರಿಗೆ ಕಾಲಕಾಲಕ್ಕೆ ಹಲವು ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ IRCTC ಕೇವಲ 20 ರೂಪಾಯಿಗಳಲ್ಲಿ ಆಹಾರವನ್ನು ಪರಿಚಯಿಸಿದೆ.ಇದರೊಂದಿಗೆ 3 ರೂ.ಗೆ ನೀರು ಕೂಡಾ ಸಿಗಲಿದೆ.  ಅಂದರೆ ರೈಲಿನಲ್ಲಿ ಪ್ರಯಾಣಿಸುವಾಗ ಇನ್ನು ಮುಂದೆ ಅತ್ಯಂತ ಕಡಿಮೆ ಬೆಲೆಯಲ್ಲಿ   ಆಹಾರ ಲಭ್ಯವಿರುತ್ತದೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿಯೂ ಅಗ್ಗದ ಆಹಾರ ಮಳಿಗೆಗಳನ್ನು ತೆರೆಯಲಾಗಿದೆ. 


COMMERCIAL BREAK
SCROLL TO CONTINUE READING

ಪೂರಿ-ಪಲ್ಯ, ಮಸಾಲಾ ದೋಸೆ, ಚೋಲೆ-ಬಟುರಾ, ಖಿಚಡಿ ಸೇರಿದಂತೆ ಹಲವು ರೀತಿಯ ಆಯ್ಕೆಗಳನ್ನು ರೈಲ್ವೆ ಪ್ರಯಾಣಿಕರಿಗೆ ನೀಡಿದೆ. ಭಾರತೀಯ ರೈಲ್ವೇ ಈ ಸೌಲಭ್ಯವನ್ನು ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್  ಸಹಯೋಗದೊಂದಿಗೆ ಪ್ರಾರಂಭಿಸಿದೆ.


ಇದನ್ನೂ ಓದಿ : IndiGo: ವಿಮಾನ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಇಂಡಿಗೋ ಸಂಸ್ಥೆಯಿಂದ ಇನ್-ಫ್ಲೈಟ್ ಎಂಟರ್ಟೈನ್ಮೆಂಟ್ ಕಂಟೆಂಟ್ ಸೌಲಭ್ಯ!


ಜನರಲ್ ಕೋಚ್ ಎದುರು ಸ್ಟಾಲ್  :
ಪ್ರಸ್ತುತ ರೈಲ್ವೆಯು 100ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ 150 ಸ್ಟಾಲ್‌ಗಳನ್ನು ಆರಂಭಿಸಿದೆ. ಜನರಲ್ ಕೋಚ್ ಮುಂಭಾಗದ ಪ್ಲಾಟ್‌ಫಾರ್ಮ್‌ನಲ್ಲಿ ಈ ಸ್ಟಾಲ್‌ಗಳನ್ನು ಹಾಕಲಾಗಿದೆ. ಜನರಲ್ ಕೋಚ್ ನಲ್ಲಿ ಪ್ರಯಾಣಿಸುವವರಿಗೆ ಅಗ್ಗದ ದರದಲ್ಲಿ ಆಹಾರ ಸಿಗುತ್ತವೆ. ಈ ಸ್ಟಾಲ್‌ನಲ್ಲಿ  ಎರಡು ಆಯ್ಕೆಯಲ್ಲಿ ಆಹಾರ ನೀಡಲಾಗುತ್ತದೆ. ಮೊದಲನೆಯದ್ದು, 20 ರೂ.ಗೆ ಸಿಗುವ ಆಹಾರ ಹಾಗೂ ಎರಡನೇಯದ್ದು 50 ರೂ.ಗೆ ಸಿಗುವ ಆಹಾರ.  


 20 ರೂ.ಗೆ ಪುರಿ-ಪಲ್ಯ : 
ಆಹಾರದ ಬೆಲೆಯನ್ನು ರೈಲ್ವೆ ನಿಗದಿಪಡಿಸಿದೆ. 20 ರೂಪಾಯಿಗೆ ಪೂರಿ, ಪಲ್ಯ , ಉಪ್ಪಿನಕಾಯಿ ಸಿಗುತ್ತದೆ. ಇದರಲ್ಲಿ 7 ಪೂರಿ ಜೊತೆಗೆ 150 ಗ್ರಾಂ ತರಕಾರಿ ಸಿಗಲಿದೆ. 


50 ರೂಪಾಯಿಗೆ ಏನು ಸಿಗುತ್ತದೆ?:
ಇದಲ್ಲದೇ 50 ರೂ.ಗೆ ಸಿಗುವ ಆಹಾರದಲ್ಲಿ ರಾಜ್ಮಾ-ರೈಸ್, ಖಿಚಡಿ-ಪೊಂಗಲ್, ಚೋಲೆ-ಕುಲ್ಚೆ, ಚೋಲೆ-ಬಟುರಾ ಮತ್ತು ಮಸಾಲೆ ದೋಸೆ ಸಿಗುತ್ತದೆ.  ಇದರಲ್ಲಿ ಯಾವುದನ್ನು ಬೇಕಾದರೂ ಆರಿಸಬಹುದು. 


ಇದನ್ನೂ ಓದಿ : ಆದಾಯ ತೆರಿಗೆ ಉಳಿಸಲು PPF ಮತ್ತು FDಯಲ್ಲಿ ಯಾವುದು ಉತ್ತಮ ಆಯ್ಕೆ ?


3 ರೂ.ಗೆ ನೀರು :
ಇದಲ್ಲದೆ, ನೀರು ಸಹ ಸಾಕಷ್ಟು ಅಗ್ಗವಾಗಿದೆ. ನೀರಿಗಾಗಿ ಕೇವಲ 3 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. 200 ಎಂಎಂ ಪ್ಯಾಕೇಜ್ ಮಾಡಿದ ಸೀಲ್ಡ್ ವಾಟರ್ ಗ್ಲಾಸ್‌ಗಳನ್ನು 3ಗೆ ನೀಡಲಾಗುತ್ತದೆ.  


ಈ ಹಿಂದೆ 51 ನಿಲ್ದಾಣಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು :
ಕಳೆದ ವರ್ಷ ಸುಮಾರು 51 ನಿಲ್ದಾಣಗಳಲ್ಲಿ ರೈಲ್ವೇ  ಈ ಬಗ್ಗೆ ಟೆಸ್ಟಿಂಗ್ ನಡೆಸಿದ್ದು, ಇದರಲ್ಲಿ ಸಾಕಷ್ಟು ಯಶಸ್ವಿಯಾಗಿತ್ತು.ನಂತರ, ರೈಲ್ವೆಯು ಈ ಆಧಾರದ ಮೇಲೆ  ಕಡಿಮೆ ಬೆಲೆಯ ಆಹಾರದ ಕಲ್ಪನೆಯನ್ನು ವಿಸ್ತರಿಸಿದೆ. ಇದೀಗ 100 ಸ್ಟಾಲ್‌ಗಳನ್ನು ಪ್ರಾರಂಭಿಸಿದೆ. ಅಂದರೆ ಈಗ ಒಟ್ಟು 151 ಸ್ಟಾಲ್‌ಗಳಲ್ಲಿ ಕಡಿಮೆ ಬೆಲೆಯ ಆಹಾರ ಸಿಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.