Rakesh Jhunjhunwala Death: ಭಾರತೀಯ ಷೇರು ಮಾರುಕಟ್ಟೆಯ ವಾರೆನ್ ಬಫೆಟ್ ಎಂದೇ ಖ್ಯಾತರಾಗಿದ್ದ ರಾಕೇಶ್ ಝುನ್ಝುನ್ವಾಲಾ ತಮ್ಮ 62ನೇ ವಯಸ್ಸಿನಲ್ಲಿ ಭಾನುವಾರದಂದು ನಿಧನರಾಗಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ. ರಾಕೇಶ್ ಷೇರು ಮಾರುಕಟ್ಟೆಯ ಮಾಂತ್ರಿಕರಾಗಿದ್ದರು, ಅವರು ಹೂಡಿಕೆ ಮಾಡಲು ಬಯಸುತ್ತಿದ್ದ ಕಂಪನಿಯ ಷೇರುಗಳು ಯಾವಾಗಲು ಗಗನಮುಖಿಯಾಗುತ್ತಿದ್ದವು. ಅವರು 5000 ರೂಪಾಯಿಗಳೊಂದಿಗೆ ಹೂಡಿಕೆ ಮಾಡಲು ಆರಂಭಿಸಿದ್ದರು ಮತ್ತು ಇಂದು ಅವರ ಬಂಡವಾಳವು ಸುಮಾರು 39500 ಕೋಟಿ ರೂ.ಗಳಷ್ಟಿದೆ. ಅವರ ಹೂಡಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರು, ಆದರೆ, ಷೇರುಪೇಟೆಯಲ್ಲಿ  ಹೂಡಿಕೆಯ ಹೊರತಾಗಿ, ರಾಕೇಶ್ ಝುನ್ಝುನ್ವಾಲಾ ಇತರ ಕೆಲವು ವಿಷಯಗಳಲ್ಲಿ ಹವ್ಯಾಸಿಯಾಗಿದ್ದರು. ಕೆಲವು ಸಂದರ್ಶನಗಳಲ್ಲಿ, ಅವರು ತಮ್ಮ ಎರಡು ಹವ್ಯಾಸಗಳ ಬಗ್ಗೆ ಮಾತನಾಡಿದ್ದಾರೆ. ರಾಕೇಶ್ ಝುನ್ಝುನ್ವಾಲಾ ಅವರ ಆ ಹವ್ಯಾಸಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

1. ಫುಡ್ ಷೋ ವೀಕ್ಷಿಸುವುದು
ರಾಕೇಶ್ ಝುನ್ಝುನ್ವಾಲಾ ಅವರು ಆಹಾರ ಬಗ್ಗೆ ತುಂಬಾ ಹವ್ಯಾಸಿಯಾಗಿದ್ದರು, ಅದಕ್ಕಾಗಿಯೇ ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ಹೊರತುಪಡಿಸಿ ಹೆಚ್ಚು ಇಷ್ಟಪಡುವ ವಿಷಯವೆಂದರೆ ಆಹಾರ ಷೋಗಳನ್ನು ವೀಕ್ಷಿಸುವುದು. ಅವರಿಗೆ ಹೊಸ ಹೊಸ ಆಹಾರಗಳು ಮತ್ತು ಅವುಗಳನ್ನು ಹೇಗೆ ತಯಾರಿಸುತ್ತಾರೆ ಎಂಬುದು ತಿಳಿಯುವುದು ತುಂಬಾ ಇಷ್ಟವಾಗುತ್ತಿತ್ತು. ರಾಕೇಶ್ ಝುನ್ಝುನ್ವಾಲಾ ಅವರಿಗೆ ಸ್ಟ್ರೀಟ್ ಫುಡ್, ಚೈನೀಸ್ ಫುಡ್ ಇಷ್ಟವಾಗುತ್ತಿತ್ತು. ಅವರಿಗೆ ದೋಸೆ ಎಂದರೆ ತುಂಬಾ ಇಷ್ಟ ಎಂದು ಹೇಳಿದ್ದರು. ಇದಲ್ಲದೇ ಪಾವ್-ಭಾಜಿ ತಿನ್ನುವುದು ಕೂಡ ಇಷ್ಟದ ಪದಾರ್ಥವಾಗಿತ್ತು. ಹೊರಗೆ ತಯಾರಿಸಿದ ಪಾವ್ ಭಾಜಿ ಅವರಿಗೆ ಇಷ್ಟವಾಗುತ್ತಿಲ್ಲವಾದ್ದರಿಂದ ಅವರು ಮನೆಯಲ್ಲೇ ಅದನ್ನು ತಯಾರಿಸಿ ತಿನ್ನುತ್ತಿದ್ದರು.


ಇದನ್ನೂ ಓದಿ-Edible Oil Price: ದೇಶದ ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ


2. ಪುಸ್ತಕಗಳನ್ನು ಓದುವುದು
ರಾಕೇಶ್ ಝುನ್ಝುನ್ವಾಲಾ ಅವರು ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದಲು ಇಷ್ಟಪಡುತ್ತಿದ್ದರು. ಈ ಬಗ್ಗೆ ಹಲವು ಸಂದರ್ಶನಗಳಲ್ಲೂ ಅವರು ಹೇಳಿದ್ದರು. ಬಿಡುವಿದ್ದಾಗಲೆಲ್ಲ ಪುಸ್ತಕಗಳನ್ನು ಓದುತ್ತಿದ್ದೆ ಎಂದು ಹೇಳುತ್ತಿದ್ದರು. ಯಾವ ಪುಸ್ತಕಗಳಿಂದ ಕಲಿಯಲು ಹೆಚ್ಚು ಸಿಗುತ್ತಿತ್ತೋ ಅವರು ಅಂತಹ ಪುಸ್ತಕಗಳನ್ನು ಹೆಚ್ಚು ಓದುತ್ತಿದ್ದರು. 


ಇದನ್ನೂ ಓದಿ-NPS Rule Update: NPS ನಿಯಮದಲ್ಲಿ ಮಹತ್ವದ ಬದಲಾವಣೆ, ಈ ಹೊಸ ಬದಲಾವಣೆ ನಿಮಗೂ ತಿಳಿದಿರಲಿ


3. ಚಲನಚಿತ್ರಗಳ ಕಡೆಗೂ ಒಲವು
ರಾಕೇಶ್ ಝುನ್ಝುನ್ವಾಲಾ ಅವರು ಷೇರು ಮಾರುಕಟ್ಟೆಯ ಹೊರತಾಗಿ ಹಿಂದಿ ಚಲನಚಿತ್ರಗಳತ್ತ ಕೂಡ ಹೆಚ್ಚಿನ ಒಲವು ಹೊಂದಿದ್ದರು. ಅವರು ಕೆಲವು ಹಿಂದಿ ಚಿತ್ರಗಳಲ್ಲಿ ಹಣವನ್ನು ಹೂಡಿಕೆಯನ್ನು ಕೂಡ ಮಾಡಿದ್ದರು ಮತ್ತು ಅಲ್ಲಿಯೂ ಕೂಡ ಅವರು ಉತ್ತಮ ಆದಾಯವನ್ನು ಪಡೆದಿದ್ದರು. ಅವರು ಮೊದಲು 2012 ರಲ್ಲಿ ಶ್ರೀದೇವಿ ಅವರ ಇಂಗ್ಲಿಷ್ ವಿಂಗ್ಲಿಷ್ ಚಿತ್ರಕ್ಕೆ ಹಣವನ್ನು ಹೂಡಿಕೆ ಮಾಡಿದ್ದರು. ಇದಲ್ಲದೇ 2016ರಲ್ಲಿ ತೆರೆಕಂಡ ‘ಕಿ ಅಂಡ್ ಕಾ’ ಹಾಗೂ 2015ರಲ್ಲಿ ‘ಶಮಿತಾಭ್’ ಚಿತ್ರದಲ್ಲೂ ಹಣ ಹೂಡಿಕೆ ಮಾಡಿದ್ದರು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.