ರತನ್ ಟಾಟಾ ತಮ್ಮ ನೆಚ್ಚಿನ `ನಾಯಿ`ಗೆ ಹುಷಾರಿಲ್ಲ ಎಂದು ವಿದೇಶ ಪ್ರವಾಸವನ್ನೇ ರದ್ದುಗೊಳಿಸಿದ್ದರಂತೆ..!
Ratan Tata Pets Love: ರತನ್ ಟಾಟಾ ಅದ್ಭುತ ವ್ಯಕ್ತಿತ್ವದ ಮಹಾನ್ ವ್ಯಕ್ತಿ. ಅಷ್ಟೇ ಅಲ್ಲ, ಸರಳವಾಗಿ ಬದುಕಿ ತೋರಿಸಿ ಎಲ್ಲರಿಗೂ ಮಾದರಿಯಾಗಿರುವ ಇವರು ಅಪ್ರತಿಮ ಶ್ವಾನ ಪ್ರಿಯರು.
Ratan Tata Dogs Love: ಭಾರತದ ಹೆಸರಾಂತ ಉದ್ಯಮಿ ರತನ್ ಟಾಟಾ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಜೀವನದುದ್ದಕ್ಕೂ ಬೇರೆಯವರಿಗೆ ಆದರ್ಶವಾಗಿ ಬದುಕಿದ್ದ ಹಿರಿಯ ಜೀವಿ ಅಪ್ರತಿಮ ಶ್ವಾನ ಪ್ರಿಯರಾಗಿದ್ದು, ತಮ್ಮೆರದು ಶ್ವಾನಗಳನ್ನು ಬಹಳ ಪ್ರೀತಿಯಿಂದ ಸಾಕಿ ಸಲುಹಿದ್ದರು. 'ನಾಯಿ'ಗಳ ಮೇಲಿನ ಅವರ ಪ್ರೀತಿ ಎಷ್ಟರಮಟ್ಟಿಗಿತ್ತು ಎಂಬುದಕ್ಕೆ ಒಂದು ಸನ್ನಿವೇಶ ಕನ್ನಡಿ ಹಿಡಿದಂತಿದೆ.
ಶ್ವಾನ ಪ್ರಿಯ ರತನ್ ಟಾಟಾ!
ಶ್ವಾನ ಪ್ರಿಯರಾದ ರತನ್ ಟಾಟಾ ತಮ್ಮ ಮಾನ್ಯಲ್ಲಿ ಟೀಟೋ, ಟ್ಯಾಂಗೋ ಎಂಬ ಎರಡು ನಾಯಿಗಳನ್ನು ಸಾಕಿದ್ದರು. ಅಷ್ಟೇ ಅಲ್ಲ, ರತನ್ ಟಾಟಾರ ಕಚೇರಿಯಲ್ಲಿ "ಗೋವಾ" ಎಂಬ ಶ್ವಾನವನ್ನೂ ಸಾಕಿದ್ದರು. ತಮ್ಮ ಕೊನೆಯ ಕಾಲದಲ್ಲೂ ಕೂಡ ನಾಯಿಗಳಿಗೆ ಅಪಾರ ಪ್ರೀತಿ ತೋರುತ್ತಿದ್ದ ರತನ್ ಟಾಟಾ ಅವರ ಬಾಧುಕಿನಲ್ಲಿ ಶ್ವಾನಗಳೊಂದಿಗೆ ಬಹಳ ಅಪರೂಪದ ಕ್ಷಣಗಳನ್ನು ಕಳೆದಿದ್ದಾರೆ ಎಂದು ರತನ್ ಶ್ವಾನ ಪ್ರೀತಿಯ ಬಗ್ಗೆ ಅವರ ಆಪ್ತ ವಲಯದವರು ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ- ತಮ್ಮ ಕಂಪನಿಯಲ್ಲೇ ಉದ್ಯೋಗಕ್ಕಾಗಿ 'ರೆಸ್ಯೂಮ್' ರೆಡಿ ಮಾಡಿದ್ದರು ರತನ್ ಟಾಟಾ! ಘಟನೆಯ ಹಿಂದಿನ ಸತ್ಯ ಏನು ಗೊತ್ತಾ..?
ಶ್ವಾನ ಆರೈಕೆಗಾಗಿ ಇಂಗ್ಲೆಂಡ್ ಪ್ರವಾಸ ರದ್ದುಗೊಳಿಸಿದ್ದ ರತನ್ ಟಾಟಾ:
ಮಾಧ್ಯಮ ವರದಿಗಳ ಪ್ರಕಾರ, ನಿತ್ಯ ಶ್ವಾನಗಳಿಗೂ ಸಮಯ ಮೀಸಲಿಡುತ್ತಿದ್ದ ಇವರು ಒಮ್ಮೆ ಶ್ವಾನದ ಆರೈಕೆಗಾಗಿ ತಮ್ಮ ವಿದೇಶ ಪ್ರವಾಸವನ್ನೇ ರದ್ದುಗೊಳಿಸಿದ್ದರು. ಇಂಗ್ಲೆಂಡ್ ನ ಬಕಿಂಗ್ ಹ್ಯಾಮ್ ಪ್ಯಾಲೇಸ್ನಲ್ಲಿ ರತನ್ ಟಾಟಾ ಅವರ ಗೌರವಾರ್ಥವಾಗಿ ಆಹ್ವಾನಿಸಲಾಗಿತ್ತು. ಆದರೆ, ರತನ್ ಟಾಟಾರ ಪ್ರೀತಿಯ ಎರಡು ಶ್ವಾನಗಳ ಪೈಕಿ ಒಂದು ನಾಯಿಗೆ ಆರೋಗ್ಯ ಸಮಸ್ಯೆ ಉಂಟಾದ ಕಾರಣ ಅವರು ತಮ್ಮ ವಿದೇಶ ಪ್ರವಾಸವನ್ನೇ ರದ್ದುಗೊಳಿಸಿದ್ದರಂತೆ.
ರತನ್ ಶ್ವಾನ ಪ್ರೀತಿಗೆ ಫಿದಾ ಆಗಿದ್ದ ರಾಜ:
ಶ್ವಾನದ ಮೇಲಿನ ಪ್ರೀತಿಯಿಂದಾಗಿ ಅದರ ಆರೈಕೆಗಾಗಿ ರತನ್ ಟಾಟಾ ಇಂಗ್ಲೆಂಡ್ ಪ್ರವಾಸವನ್ನು ರದ್ದುಗೊಳಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಬಕ್ಕಿಂಗ್ ಹ್ಯಾಮ್ ಅರಮನೆಯ ರಾಜ ಪ್ರಿನ್ಸ್ ಚಾರ್ಲ್ಸ್ ರತನ್ ರ ಪ್ರಾಣಿ ಪ್ರೇಮಕ್ಕೆ ಫಿದಾ ಆಗಿ ಅವರನ್ನು ಹಾಡಿ ಹೊಗಳಿದ್ದರು.
ಬೀದಿ ನಾಯಿಗಳಿಗೂ ಆಸರೆಯಾಗಿದ್ದ ರತನ್ ಟಾಟಾ:
ಕೇವಲ ತಮ್ಮ ಮನೆಯಲ್ಲಿರುವ ನಾಯಿಗಳ ಬಗ್ಗೆ ಅಷ್ಟೇ ಅಲ್ಲದೆ, ಬೀದಿ ನಾಯಿಗಳ ಬಗೆಗೂ ಕಾಳಜಿ ಹೊಂದಿದ್ದ ರತನ್ ಟಾಟಾ ಪ್ರತಿಷ್ಠಿತ ತಾಜ್ ಹೊಟೇಲ್ ಮುಂಭಾಗದಲ್ಲಿ ಬಿಡಿ ನಾಯಿಗಳನ್ನು ಓಡಿಸಬಾರದು ಎಂದು ಕಟ್ಟಾಜ್ಞೆ ಹೊರಡಿಸಿದ್ದರು. ಇದರಿಂದಾಗಿ ಹವಾಮಾನ ವೈಪರಿತ್ಯದ ಸಂದರ್ಭದಲ್ಲಿ ಬೀದಿ ನಾಯಿಗಳು ತಾಜ್ ಹೊಟೇಲ್ ಗಳ ಮೆಟ್ಟಿಲುಗಳಲ್ಲಿ ಮಲಗಿ ಆಶ್ರಯ ಪಡೆಯುತ್ತಿದ್ದವು. ಇದು ರತನ್ ಟಾಟಾರ ಶ್ವಾನ ಪ್ರೀತಿಗೆ ಅತ್ಯುತ್ತಮ ನಿದರ್ಶನ ಎಂತಲೇ ಹೇಳಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.