ಜೀವನಪರ್ಯಂತ ವೈಮಾನಿಕ ಪ್ರೇಮಿಯಾಗಿದ್ದ ರತನ್ ಟಾಟಾ
Ratan Naval Tata : ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ, ರತನ್ ಟಾಟಾ ಅವರು ಜಿ-ಸೂಟ್ ಧರಿಸಿ, ಎರಡು ಅಮೆರಿಕನ್ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿ, ತನ್ನ ಸಾಹಸಿ ಮನೋಭಾವವನ್ನು ಪ್ರದರ್ಶಿಸಿದ್ದರು. ಯಲಹಂಕ ವಾಯು ಸೇನಾ ನೆಲೆಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ರತನ್ ಟಾಟಾ ಅವರು ನಿರಂತರವಾಗಿ ಭೇಟಿ ನೀಡುತ್ತಿದ್ದರು.
Ratan Tata : ಯಲಹಂಕ ವಾಯು ಸೇನಾ ನೆಲೆಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ರತನ್ ಟಾಟಾ ಅವರು ನಿರಂತರವಾಗಿ ಭೇಟಿ ನೀಡುತ್ತಿದ್ದರು. ರತನ್ ಟಾಟಾ ಅವರಿಗೆ ವೈಮಾನಿಕ ಕ್ಷೇತ್ರದ ಕುರಿತು ಇದ್ದ ಪ್ರೀತಿ, ಆಸಕ್ತಿ ಎಲ್ಲರಿಗೂ ತಿಳಿದ ವಿಚಾರವೇ ಆಗಿತ್ತು. ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ, ರತನ್ ಟಾಟಾ ಅವರು ಜಿ-ಸೂಟ್ ಧರಿಸಿ, ಎರಡು ಅಮೆರಿಕನ್ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿ, ತನ್ನ ಸಾಹಸಿ ಮನೋಭಾವವನ್ನು ಪ್ರದರ್ಶಿಸಿದ್ದರು.
2007ರಲ್ಲಿ, ಟಾಟಾ ಅವರು ಏರೋ ಇಂಡಿಯಾ ಪ್ರದರ್ಶನದ ಸಂದರ್ಭದಲ್ಲಿ ಲಾಕ್‌ಹೀಡ್ ಮಾರ್ಟಿನ್ ಎಫ್-16 ಯುದ್ಧ ವಿಮಾನದಲ್ಲಿ ಮೊದಲ ಹಾರಾಟದ ಅನುಭವ ಪಡೆದಿದ್ದರು. ಈ ಹಾರಾಟದ ಬಳಿಕ, ರತನ್ ಟಾಟಾ ತನ್ನ ರೋಮಾಂಚಕ ಅನುಭವದ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಅದಾದ ಕೆಲ ವರ್ಷಗಳ ಬಳಿಕ, 2011ರಲ್ಲಿ, ಅವರು ಮತ್ತೊಂದು ಬಾರಿಗೆ ಆಗಸಕ್ಕೆ ಚಿಮ್ಮಿದ್ದರು. ಈ ಬಾರಿ ಅವರು ಏರೋ ಇಂಡಿಯಾ ಪ್ರದರ್ಶನದಲ್ಲಿ ಬೋಯಿಂಗ್ ಎಫ್-18 ಸೂಪರ್ ಹಾರ್ನೇಟ್ ವಿಮಾನದಲ್ಲಿ ಸಾಗಿದ್ದರು. ಅದಾದ ಬಳಿಕ ಅವರು ಹಾರಾಟ ನಡೆಸದಿದ್ದರೂ, ಅವರು ನಿಯಮಿತವಾಗಿ ಏರೋ ಇಂಡಿಯಾ ಪ್ರದರ್ಶನಕ್ಕೆ ಭೇಟಿ ನೀಡುತ್ತಾ ಬಂದಿದ್ದರು. ಅಲ್ಲಿ ಟಾಟಾ ಸಮೂಹದ ಸಂಸ್ಥೆಗಳು ಪ್ರಮುಖ ಪ್ರದರ್ಶನ ನೀಡುತ್ತಿದ್ದವು.
ಇದನ್ನೂ ಓದಿ:ಟಾಟಾ ನ್ಯಾನೋ ಕಾರು ತಯಾರಿಸುವ ಆಲೋಚನೆ ರತನ್ ಟಾಟಾರಿಗೆ ಎಲ್ಲಿಂದ ಬಂತು? ಇದರ ಹಿಂದಿದೆ ಆಸಕ್ತಿದಾಯಕ ಕಾರಣ!
2019ರಲ್ಲಿ, ರತನ್ ಟಾಟಾ ಅವರು ಸಾಮಾಜಿಕ ಜಾಲತಾಣದಲ್ಲಿ ತನ್ನ ಪಯಣ ಮತ್ತು ಏರೋ ಇಂಡಿಯಾ ಪ್ರದರ್ಶನದಲ್ಲಿ ಯುದ್ಧ ವಿಮಾನದಲ್ಲಿ ಸಾಗಿದ್ದ ಅನುಭವವನ್ನು ಹಂಚಿಕೊಂಡಿದ್ದರು. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಟಾಟಾ, "2019 ಕೇವಲ ವರ್ಷವೊಂದರ ಕೊನೆ ಮಾತ್ರವಲ್ಲ, ಇದು ದಶಕದ ಕೊನೆಯೂ ಹೌದು" ಎಂದು ಬರೆದುಕೊಂಡಿದ್ದರು. ಅವರು ಬರಲಿರುವ ಹೊಸ ದಶಕದ ಕುರಿತು ಅಪಾರ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ಅವರು ಉತ್ತಮ ಉದ್ದೇಶಗಳ ಪರವಾಗಿ ನಿಲ್ಲುವ, ಹೊಸದೇನಾದರೂ ನಿರ್ಮಿಸುವ, ಹಾಗೂ ಹೊಸ ಸಂಪರ್ಕಗಳನ್ನು ಸಾಧಿಸುವ ಕುರಿತು ಸದಾ ಉತ್ಸುಕರಾಗಿದ್ದರು. ಅವರು ಎಫ್-18 ಸೂಪರ್ ಹಾರ್ನೇಟ್ ವಿಮಾನದಲ್ಲಿ ಸಾಗಿದ್ದು 2010ರ ದಶಕದ ತನ್ನ ಅತ್ಯಂತ ನೆಚ್ಚಿನ ಅನುಭವ ಎಂದು ವಿವರಿಸಿದ್ದರು.
ರತನ್ ಟಾಟಾ ಅವರ ವೈಮಾನಿಕ ಆಸಕ್ತಿ ಕೇವಲ ವೈಮಾನಿಕ ಪ್ರದರ್ಶನಗಳಲ್ಲಿ ಭಾಗವಹಿಸುವುದಕ್ಕೆ ಸೀಮಿತವಾಗಿರಲಿಲ್ಲ. 2007ರಲ್ಲಿ ಎಫ್-16 ಯುದ್ಧ ವಿಮಾನ ಮತ್ತು 2011ರಲ್ಲಿ ಸೂಪರ್ ಹಾರ್ನೇಟ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿರುವುದು ಅವರ ಸಾಹಸ ಪ್ರವೃತ್ತಿ ಮತ್ತು ಹಾರಾಟದ ಪ್ರೀತಿಗೆ ಸಾಕ್ಷಿಯಾಗಿತ್ತು. 2011ರ ಬಳಿಕ ಅವರು ಯುದ್ಧ ವಿಮಾನದಲ್ಲಿ ಹಾರಾಟ ನಡೆಸದಿದ್ದರೂ, ಏರೋ ಇಂಡಿಯಾ ಪ್ರದರ್ಶನದಲ್ಲಿ ಅವರ ಉಪಸ್ಥಿತಿ ಎಂದಿನಂತೆ ನಿರಂತರವಾಗಿತ್ತು. ಅವರೊಡನೆ, ಅವರ ನೇತೃತ್ವದ ಟಾಟಾ ಸಮೂಹ ಸಂಸ್ಥೆಯೂ ಪ್ರಮುಖ ಪ್ರದರ್ಶಕ ಸಂಸ್ಥೆಯಾಗಿ ಮುಂದುವರಿದಿತ್ತು.
ಗಿರೀಶ್ ಲಿಂಗಣ್ಣ
ರಕ್ಷಣಾ ಮತ್ತು ಏರೋಸ್ಪೇಸ್ ವಿಶ್ಲೇಷಕರು, ಬೆಂಗಳೂರು
ದೂರವಾಣಿ: +91 9845099196
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.