ಸುಡುವುದಿಲ್ಲ, ಹೂಳುವುದಿಲ್ಲ, ಸಮಾಧಿ ಮಾಡುವುದಿಲ್ಲ! ಹಾಗಿದ್ದರೆ ಹೇಗೆ ನಡೆಯಲಿದೆ ರತನ್ ಟಾಟಾ ಅಂತ್ಯ ಸಂಸ್ಕಾರ ?
Ratan Tata Last Rituals :ಗೃಹ ಸಚಿವ ಅಮಿತ್ ಶಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಇದೀಗ ರತನ್ ಟಾಟಾ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಈ ದೊಡ್ಡ ಮಾಹಿತಿ ಹೊರಬೀಳುತ್ತಿದೆ
Ratan Tata Last Rituals : ರತನ್ ಟಾಟಾ ಅವರ ನಿಧನದಿಂದ ದೇಶದಲ್ಲಿ ಶೋಕದ ಅಲೆ ಎದ್ದಿದೆ.ಆಡಳಿತ ಪಕ್ಷದಿಂದ ಪ್ರತಿಪಕ್ಷದವರೂ ಈ ಅಜಾತ ಶತ್ರುವಿಗೆ ಗೌರವ ಸಲ್ಲಿಸುತ್ತಿದ್ದಾರೆ.ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಮುಂಬೈನಲ್ಲಿ ಜನರ ಸರತಿ ಸಾಲಿನಲ್ಲಿ ನಿಂತಿದ್ದಾರೆ.ಪ್ರಧಾನಿ ವಿದೇಶ ಪ್ರವಾಸದಲ್ಲಿದ್ದು, ಗೃಹ ಸಚಿವ ಅಮಿತ್ ಶಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಇದೀಗ ರತನ್ ಟಾಟಾ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಈ ದೊಡ್ಡ ಮಾಹಿತಿ ಹೊರಬೀಳುತ್ತಿದೆ.
ಪಾರ್ಸಿ ಪದ್ಧತಿಯಂತೆ ಅಂತ್ಯಕ್ರಿಯೆ? :
ರತನ್ ಟಾಟಾ ಅವರ ಅಂತಿಮ ವಿಧಿಗಳನ್ನು ಪಾರ್ಸಿ ಪದ್ಧತಿಯಂತೆ ನೆರವೇರಿಸಲಾಗುವುದು.ಮಾಹಿತಿಯ ಪ್ರಕಾರ, ಟಾಟಾ ಅವರ ಪಾರ್ಥಿವ ಶರೀರವನ್ನು ಮುಂಬೈನ ವರ್ಲಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಇರಿಸಲಾಗುವುದು.ಅಲ್ಲಿ ಸ್ವಲ್ಪ ಹೊತ್ತು ಪ್ರಾರ್ಥನೆ ಸಲ್ಲಿಸಿದ ನಂತರ ಅವರ ಅಂತ್ಯಕ್ರಿಯೆಗಳು ಪೂರ್ಣಗೊಳ್ಳುತ್ತವೆ.ಪಾರ್ಸಿ ಪದ್ದತಿಯಲ್ಲಿ ಹಿಂದೂಗಳಂತೆ ಸುಡುವುದಿಲ್ಲ, ಮುಸ್ಲಿಮರಂತೆ ಹೂಳುವುದಿಲ್ಲ, ಅಥವಾ ಕ್ರಿಶ್ಚಿಯನ್ನರಂತೆ ಸಮಾಧಿ ಮಾಡುವ ಪದ್ಧತಿ ಇಲ್ಲ. ಮಾನವ ದೇಹವು ಪ್ರಕೃತಿ ನೀಡಿದ ಕೊಡುಗೆ ಎನ್ನುವುದು ಪಾರ್ಸಿ ಜನರ ನಂಬಿಕೆ. ಹಾಗಾಗಿ ಸಾವಿನ ನಂತರ ದೇಹವನ್ನು ಮತ್ತೆ ಪ್ರಕೃತಿಗೆ ಹಿಂತಿರುಗಿಸಬೇಕು.ಪ್ರಪಂಚದಾದ್ಯಂತ ಇರುವ ಪಾರ್ಸಿಗಳು ತಮ್ಮ ಕುಟುಂಬದ ಸದಸ್ಯರ ಅಂತಿಮ ವಿಧಿಯನ್ನು ಇದೇ ರೀತಿಯಲ್ಲಿ ಮಾಡುತ್ತಾರೆ.ಮೃತ ದೇಹಗಳನ್ನು ಟವರ್ ಆಫ್ ಸೈಲೆನ್ಸ್ ನಲ್ಲಿ ಇರಿಸಲಾಗುತ್ತದೆ.
ಇದನ್ನೂ ಓದಿ : ಸಿನಿ ರಂಗದಲ್ಲಿಯೂ ಆಸಕ್ತಿ ಹೊಂದಿದ್ದ ರತನ್ ಟಾಟಾ!ಅವರ ನಿರ್ಮಾಣದ ಮೊದಲ ಮತ್ತು ಕೊನೆಯ ಸಿನಿಮಾ ಇದು !
ಏನಿದು ಟವರ್ ಆಫ್ ಸೈಲೆನ್ಸ್ :
ಟವರ್ ಆಫ್ ಸೈಲೆನ್ಸ್ ಅನ್ನು ಸ್ಮಶಾನ ಎಂದೇ ಪರಿಗಣಿಸಬಹುದು. ಅಲ್ಲಿ ಮರಣದ ನಂತರ ಅವರ ದೇಹವನ್ನು ಪ್ರಕೃತಿಯ ಮಡಿಲಿಗೆ ಬಿಡಲಾಗುತ್ತದೆ. ಈ ಸಂಪ್ರದಾಯವು ಪಾರ್ಸಿ ಜನರಲ್ಲಿ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಇದನ್ನು ದಖ್ಮಾ ಎಂದೂ ಕರೆಯುತ್ತಾರೆ.ಪಾರ್ಸಿ ಸಮುದಾಯದ ಜನರ ಮೃತ ದೇಹಗಳನ್ನು 'ಮೌನ ಗೋಪುರ'ದಲ್ಲಿ ಬಿಡುವ ಸಂಪ್ರದಾಯವಿದೆ. ಅಲ್ಲಿ ರಣಹದ್ದುಗಳು ಈ ಮೃತ ದೇಹಗಳನ್ನು ತಿನ್ನುತ್ತವೆ.ಇದನ್ನು ‘ಆಕಾಶ ಸಮಾಧಿ’ ಎಂದೂ ಕರೆಯುತ್ತಾರೆ.ಹೊಸ ಪೀಳಿಗೆಯ ಪಾರ್ಸಿಗಳು ಈಗ ಅಂತಹ ಅಂತ್ಯಕ್ರಿಯೆಗಳ ವಿಧಿಯನ್ನು ಅನುಸರಿಸುವುದು ಕಡಿಮೆ.ಹಾಗಾಗಿ ಪಾರ್ಸಿಗಳು ನಿರ್ಮಿಸಿದ ವಿದ್ಯುತ್ ಚಿತಾಗಾರದಲ್ಲಿ ಕೂಡಾ ರತನ್ ಟಾಟಾ ಅಂತ್ಯಕ್ರಿಯೆ ನಡೆಯಬಹುದು ಎನ್ನಲಾಗಿದೆ.
ಎಲೆಕ್ಟ್ರಿಕ್ ಸ್ಮಶಾನದಲ್ಲಿ ಅಂತ್ಯಕ್ರಿಯೆಯ ಪ್ರಕ್ರಿಯೆಯು ಸುಮಾರು ಒಂದರಿಂದ ಒಂದೂವರೆ ಗಂಟೆಗಳನ್ನು ತೆಗೆದುಕೊಳ್ಳುತ್ತದೆ.ವಿದ್ಯುತ್ ಸ್ಮಶಾನದಲ್ಲಿ ದಹನದ ನಂತರ ಚಿತಾಭಸ್ಮವನ್ನು ಸೂಕ್ಷ್ಮ ಕಣಗಳಾಗಿ ಸಂಸ್ಕರಿಸಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.