ನವದೆಹಲಿ: ರಾಜ್ಯ ಮತ್ತು ಕೇಂದ್ರ ಸರ್ಕಾರ ಪಡಿತರ ಚೀಟಿ ವಿಚಾರದಲ್ಲಿ ಕಟ್ಟುನಿಟಿನ ನಿಯಮಗಳನ್ನು ಜಾರಿಗೊಳಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) 2013ರ ಪ್ರಕಾರ ಉಚಿತ ‘ಅಂತ್ಯೋದಯ ಅನ್ನ ಯೋಜನೆ’ ಪ್ರಯೋಜನ ಪಡೆಯಲು ಆಧಾರ್‌ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ ಕೇಂದ್ರ ಸರ್ಕಾರ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಎರಡೂ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಈ ಮೊದಲು  ಜೂನ್ 30 ಆಗಿತ್ತು, ಆದರೆ ಇದೀಗ ಸರ್ಕಾರ ಈ ದಿನವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.  ‘ಅಂತ್ಯೋದಯ ಅನ್ನ ಯೋಜನೆ’ಯಡಿ ಪ್ರಯೋಜನ ಪಡೆಯುತ್ತಿರುವ ಜನರು ಪಡಿತರ ಚೀಟಿ ಮತ್ತು ಆಧಾರ್ ಲಿಂಕ್ ಮಾಡಬೇಕಿದೆ. ಅನರ್ಹರನ್ನು ಪತ್ತೆಹಚ್ಚಲು ಮತ್ತು ಬಹು ಪಡಿತರ ಚೀಟಿಗಳನ್ನು ಹೊಂದುವುದನ್ನು ತಡೆಯಲು ಎರಡೂ ಕಾರ್ಡ್‌ಗಳನ್ನು ಲಿಂಕ್ ಮಾಡಲು ಸರ್ಕಾರ ಸೂಚಿಸಿದೆ. ಉಚಿತವಾಗಿ ಆಧಾರ್ ಲಿಂಕ್ ಮಾಡಲು ನೀವು ಹತ್ತಿರದ ಪಡಿತರ ಕಚೇರಿಗೆ ಹೋಗಬೇಕು.


ಇದನ್ನೂ ಓದಿ: Good News: ಡೆಬಿಟ್-ಕ್ರೆಡಿಟ್ ಕಾರ್ಡ್ ಪಡೆಯಬಯಸುವವರಿಗೆ ಒಂದು ಗುಡ್ ನ್ಯೂಸ್, ಆರ್ಬಿಐ ಕರಡು ಸುತ್ತೋಲೆ ಜಾರಿ


ಮನೆಯಲ್ಲಿ ಕುಳಿತು ಈ ರೀತಿ ಲಿಂಕ್ ಮಾಡಿ


  • ನೀವು ಈಗ ಮನೆಯಲ್ಲಿಯೇ ಕುಳಿತು ಸುಲಭವಾಗಿ ರೇಷನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡಬಹುದು. ನೀವು ಮೊದಲು ಸರ್ಕಾರದ ಅಧಿಕೃತ ವೆಬ್‌ಸೈಟ್‌ ahara.kar.nic.inಗೆ ಭೇಟಿ ನೀಡಬೇಕು.

  • ಲಾಗಿನ್ ಆದ ನಂತರ ನೀವು ಆಧಾರ್ ಕಾರ್ಡ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಂತಹ ಅಗತ್ಯವಿರುವ ಎಲ್ಲಾ ವಿವರ ನಮೂದಿಸಬೇಕು.

  • ವಿವರಗಳನ್ನು ಭರ್ತಿ ಮಾಡಿದ ನಂತರ ನೀವು continue ಕ್ಲಿಕ್ ಮಾಡಿ, ನಂತರ ನೀವು ನಮೂದಿಸಿದ ಸಂಖ್ಯೆಗೆ OTP ಬರುತ್ತದೆ, ಅದನ್ನು ನೀವು ನಮೂದಿಸಬೇಕಾಗುತ್ತದೆ.

  • OTPಯನ್ನು ದೃಢೀಕರಿಸಿದ ನಂತರ ನೀವು ಪಡಿತರ ಚೀಟಿಯನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.


ಪಡಿತರ ಚೀಟಿಯ ಪ್ರಯೋಜನಗಳು


  • ಪಡಿತರ ಅಂಗಡಿಯಲ್ಲಿ ಆಹಾರ ಪದಾರ್ಥಗಳು ಸಬ್ಸಿಡಿ ದರದಲ್ಲಿ ಸಿಗುತ್ತದೆ.

  • ಪಡಿತರ ಚೀಟಿಯು ಭಾರತದಲ್ಲಿ ಅಧಿಕೃತ ಗುರುತಿನ ಅಂಗೀಕೃತ ರೂಪವಾಗಿದೆ.  

  • ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಇದನ್ನು ಗುರುತಿನ ಪುರಾವೆಯಾಗಿಯೂ ಬಳಸಬಹುದು.

  • ಬ್ಯಾಂಕ್ ಖಾತೆ ತೆರೆಯಲು ಮತ್ತು ಬ್ಯಾಂಕ್ ಖಾತೆಗಳ ನಡುವೆ ಹಣ ಕಳುಹಿಸಲು ಪಡಿತರ ಚೀಟಿ ಬಳಸಬಹುದು.

  • ಹೊಸ ಮತದಾರರ ಗುರುತಿನ ಚೀಟಿಯನ್ನು ಮಾಡಲು ಈ ಕಾರ್ಡ್ ಬಳಸಲಾಗುತ್ತದೆ.

  • ಈ ಕಾರ್ಡ್‌ನೊಂದಿಗೆ ನೀವು ಮೊಬೈಲ್ ಸಿಮ್‍ಕಾರ್ಡ್ ಕೂಡ ಖರೀದಿಸಬಹುದು.

  • ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು ನೀವು ಈ ಕಾರ್ಡ್ ಸಹ ಬಳಸಬಹುದು.

  • ಡ್ರೈವಿಂಗ್ ಲೈಸೆನ್ಸ್ ಪಡೆಯಲು ನೀವು ರೇಷನ್ ಕಾರ್ಡ್ ಬಳಸಬಹುದು.

  • ಹೊಸ LPG ಸಂಪರ್ಕ ಪಡೆಯಲು ಸಹ ನೀವು ಈ ಕಾರ್ಡ್ ಬಳಸಬಹುದು.

  •  ಜೀವ ವಿಮೆ ಹಿಂಪಡೆಯಲು ಕೂಡ ನೀವು ಈ ಕಾರ್ಡ್ ಬಳಸಬಹುದಾಗಿದೆ.


ಇದನ್ನೂ ಓದಿ: ರಾಜ್ಯದ ಮತ್ತೊಂದು ಬ್ಯಾಂಕ್ ಲೈಸೆನ್ಸ್ ರದ್ದು ಮಾಡಿದ ಆರ್ ಬಿಐ ! ಇಂದಿನಿಂದಲೇ ಎಲ್ಲಾ ವ್ಯವಹಾರ ಕ್ಯಾನ್ಸಲ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.