Ration Card: ಸರ್ಕಾರಿ ಅಂಗಡಿಗಳಿಂದ ಪಡಿತರ ತೆಗೆದುಕೊಳ್ಳುವ ನಿಯಮದಲ್ಲಿ ಭಾರಿ ಬದಲಾವಣೆ! ಹೊಸ ನಿಬಂಧನೆಗಳನ್ನು ತಿಳಿಯಿರಿ
Standards for Ration Card: ಸರ್ಕಾರಿ ಪಡಿತರ ಅಂಗಡಿಗಳಿಂದ ಪಡಿತರ ತೆಗೆದುಕೊಳ್ಳುವ ಅರ್ಹತೆಯ ಮಾನದಂಡದಲ್ಲಿ ಬದಲಾವಣೆಯಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯಗಳೊಂದಿಗೆ ಹಲವು ಸಭೆಗಳನ್ನೂ ನಡೆಸಲಾಗಿದೆ.
Standards for Ration Card: ಪಡಿತರ ಚೀಟಿಯ ಫಲಾನುಭವಿಗಳಿಗೆ ಒಂದು ದೊಡ್ಡ ಸುದ್ದಿ ಇದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಪಡಿತರ ಚೀಟಿಯ ನಿಯಮಗಳನ್ನು ಬದಲಾಯಿಸುತ್ತಿದೆ. ವಾಸ್ತವವಾಗಿ, ಸರ್ಕಾರಿ ಪಡಿತರ ಅಂಗಡಿಗಳಿಂದ ಪಡಿತರವನ್ನು ತೆಗೆದುಕೊಳ್ಳುವ ಅರ್ಹ ಜನರಿಗೆ ನಿಗದಿಪಡಿಸಿದ ಮಾನದಂಡಗಳಲ್ಲಿ ಇಲಾಖೆಯು ಬದಲಾವಣೆಗಳನ್ನು ಮಾಡುತ್ತಿದೆ. ಹೊಸ ಮಾನದಂಡದ ಕರಡು ಈಗ ಬಹುತೇಕ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನೂ ನಡೆಸಲಾಗಿದೆ. ಹೊಸ ನಿಬಂಧನೆಯಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂದು ತಿಳಿಯೋಣ.
ಶ್ರೀಮಂತರೂ ಲಾಭ ಪಡೆಯುತ್ತಿದ್ದಾರೆ :
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪ್ರಕಾರ, ಪ್ರಸ್ತುತ ದೇಶಾದ್ಯಂತ 80 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (National Food Security Act-NFSA) ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಅವರಲ್ಲಿ ಆರ್ಥಿಕವಾಗಿ ಸಮೃದ್ಧವಾಗಿರುವ ಅನೇಕ ಜನರಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ವಿತರಣಾ ಸಚಿವಾಲಯವು ಮಾನದಂಡಗಳಲ್ಲಿ ಬದಲಾವಣೆಗಳನ್ನು ಮಾಡಲಿದೆ. ವಾಸ್ತವವಾಗಿ, ಈಗ ಹೊಸ ಮಾನದಂಡವನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲಾಗುವುದು. ಇದರಿಂದ ಯಾವುದೇ ರೀತಿಯ ಮೋಸವನ್ನು ತಡೆಯಬಹುದು ಎನ್ನಲಾಗಿದೆ.
ಇದನ್ನೂ ಓದಿ- Ration Card: ಪಡಿತರ ಪಟ್ಟಿಯಿಂದ ನಿಮ್ಮ ಹೆಸರು ಕೈಬಿಡಲಾಗಿದೆಯೇ? ಚಿಟಿಕೆಯಲ್ಲಿ ಹೀಗೆ ಚೆಕ್ ಮಾಡಿ
ಬದಲಾವಣೆಗಳು ಏಕೆ ಸಂಭವಿಸುತ್ತಿವೆ :
ಈ ನಿಟ್ಟಿನಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಕಳೆದ ಆರು ತಿಂಗಳಿಂದ ಗುಣಮಟ್ಟ ಬದಲಾವಣೆ ಕುರಿತು ರಾಜ್ಯಗಳೊಂದಿಗೆ ಸಭೆ ನಡೆಸುತ್ತಿದೆ. ರಾಜ್ಯಗಳು ನೀಡುವ ಸಲಹೆಗಳನ್ನು ಅಳವಡಿಸಿಕೊಂಡು, ಪಡಿತರ (Ration) ವಿತರಣೆಗೆ ಹೊಸ ಮಾನದಂಡಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಈ ಮಾನದಂಡಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಹೊಸ ಮಾನದಂಡದ ಅನುಷ್ಠಾನದ ನಂತರ, ಅರ್ಹ ವ್ಯಕ್ತಿಗಳು ಮಾತ್ರ ಪಡಿತರ ಚೀಟಿಯ (Ration Card) ಪ್ರಯೋಜನ ಪಡೆಯುತ್ತಾರೆ, ಅನರ್ಹರು ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಗತ್ಯವಿರುವವರನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- Ration Card ನಿಯಮದಲ್ಲಿ ಬದಲಾವಣೆ! ಇಲ್ಲದಿದ್ದರೆ ಪಡಿತರ ಪಡೆಯಲು ತಪ್ಪಿದಲ್ಲ ಸಮಸ್ಯೆ
ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆ:
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪ್ರಕಾರ, ಇಲ್ಲಿಯವರೆಗೆ 'ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ (ONORC) ಯೋಜನೆ'ಯನ್ನು 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿದೆ. ಸುಮಾರು 69 ಕೋಟಿ ಫಲಾನುಭವಿಗಳು ಅಂದರೆ NFSA ಅಡಿಯಲ್ಲಿ ಬರುವ ಜನಸಂಖ್ಯೆಯ 86 ಪ್ರತಿಶತದಷ್ಟು ಜನರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.