Ration Card Download: ರಾಜ್ಯ ಸರ್ಕಾರಗಳಿಂದ ಜನರಿಗೆ ಪಡಿತರ ಚೀಟಿ ನೀಡಲಾಗುತ್ತದೆ. ಪಡಿತರ ಚೀಟಿಯ ಸಹಾಯದಿಂದ ಜನರಿಗೆ ಕಡಿಮೆ ದರದಲ್ಲಿ ಸರ್ಕಾರದಿಂದ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಈ ಮೂಲಕ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಜನರಿಗೆ ಸಬ್ಸಿಡಿ ಆಹಾರ ಧಾನ್ಯಗಳು ಸಿಗುತ್ತವೆ. ಇದರಿಂದ ಬಡವರಿಗೆ ಸಾಕಷ್ಟು ಸಹಾಯವಾಗುತ್ತದೆ. ಆದರೆ, ಕೆಲವೊಮ್ಮೆ ಸಣ್ಣಪುಟ್ಟ ತಪ್ಪುಗಳಿಂದ ಪಡಿತರ ಚೀಟಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಪಡಿತರ ಚೀಟಿಯಲ್ಲಿ ಅಗತ್ಯ ನವೀಕರಣಗಳನ್ನು ಮಾಡುವುದು ಅವಶ್ಯಕ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Kashi Yatra Subsidy: ಕಾಶಿ ಯಾತ್ರೆಯ ವೆಬ್‌ಸೈಟ್‌ಗೆ ಚಾಲನೆ, 5 ಸಾವಿರ ರೂ. ಸಬ್ಸಿಡಿಗಾಗಿ ಈ ರೀತಿ ಅರ್ಜಿ ಸಲ್ಲಿಸಿ


ಈ ನವೀಕರಣವನ್ನು ಮಾಡಿ:


ಎಷ್ಟೋ ಸಲ ಹುಡುಗನ ಮನೆಯಲ್ಲಿ ಮದುವೆಯಾಗಿ ನವ ವಧು ಮನೆಗೆ ಬರುವುದು ನಡೆಯುತ್ತದೆ. ಆದರೆ, ಮನೆಯಲ್ಲಿರುವ ಹೊಸ ಸದಸ್ಯರ ಹೆಸರನ್ನು ಪಡಿತರ ಚೀಟಿಗೆ ಸೇರಿಸಲು ಜನರು ವಿಳಂಬ ಮಾಡುತ್ತಾರೆ, ಇದರಿಂದಾಗಿ ಆ ಕುಟುಂಬವು ಆ ಹೊಸ ಸದಸ್ಯರ ಪಾಲಿನ ಪಡಿತರವನ್ನು ಪಡೆಯಲು ಸಾಧ್ಯವಾಗಲ್ಲ. ಇಂತಹ ಪರಿಸ್ಥಿತಿಯಲ್ಲಿ ಆದಷ್ಟು ಬೇಗ ಮನೆಗೆ ಬಂದಿರುವ ಹೊಸ ಸದಸ್ಯರ ಹೆಸರನ್ನೂ ಪಡಿತರ ಚೀಟಿಗೆ ಸೇರಿಸುವುದು ಅಗತ್ಯವಾಗಿದೆ.


ದಾಖಲೆಗಳನ್ನು ನೀಡಬೇಕು:


ಪಡಿತರ ಚೀಟಿಯಲ್ಲಿ ಮನೆಯ ಸೊಸೆಯ ಹೆಸರನ್ನು ಸೇರಿಸಿ ಅವರ ಪಾಲಿನ ಪಡಿತರವನ್ನೂ ಪಡೆಯಬಹುದು. ಇಂತಹ ಪರಿಸ್ಥಿತಿಯಲ್ಲಿ, ವಿವಾಹಿತರು ಆದಷ್ಟು ಬೇಗ ಪಡಿತರ ಚೀಟಿಯಲ್ಲಿ ಇದನ್ನು ನವೀಕರಿಸಬೇಕು. ಪಡಿತರ ಚೀಟಿಯಲ್ಲಿ ಸದಸ್ಯರ ಹೆಸರನ್ನು ಸೇರಿಸಲು, ರಾಜ್ಯ ಸರ್ಕಾರಕ್ಕೆ ಅಗತ್ಯವಿರುವ ಕೆಲವು ದಾಖಲೆಗಳನ್ನು ಸಹ ಒದಗಿಸಬೇಕಾಗುತ್ತದೆ.


ಇದನ್ನೂ ಓದಿ: GST Update: ಮಕ್ಕಳ ಸ್ಟೇಷನರಿಯಿಂದ ಹಿಡಿದು ಆಸ್ಪತ್ರೆಯ ಬೆಡ್ ವರೆಗೆ ಸೋಮವಾರದಿಂದ ಯಾವ ಯಾವ ವಸ್ತುಗಳು ದುಬಾರಿ? ಇಲ್ಲಿದೆ ಪಟ್ಟಿ


ಈ ಕೆಲಸವನ್ನು ಮಾಡುವುದು ಸಹ ಅಗತ್ಯವಾಗಿದೆ:


ಇದಲ್ಲದೆ, ನವವಿವಾಹಿತರ ಹಿಂದಿನ ಮನೆಯ ಪಡಿತರ ಚೀಟಿಯಿಂದ ಹೆಸರನ್ನು ತೆಗೆದುಹಾಕಬೇಕು. ಹೆಸರು ತೆಗೆದು ಹಾಕಲಾದ ಪ್ರಮಾಣಪತ್ರವನ್ನು ಸಹ ಸಲ್ಲಿಸಬೇಕು. ಅಲ್ಲದೆ ಸೊಸೆಯ ಹೆಸರನ್ನು ಸೇರಿಸಲು ಮದುವೆ ನೋಂದಣಿ ಪ್ರಮಾಣಪತ್ರವನ್ನು ಸಹ ಸಲ್ಲಿಸಬೇಕು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.