ರೇಷನ್ ಕಾರ್ಡ್ ಹೊಸ ನಿಯಮ, ಇಂತಹವರು ಕೂಡಲೇ ನಿಮ್ಮ ಕಾರ್ಡ್ ಸರೆಂಡರ್ ಮಾಡಿ ಇಲ್ಲವೇ....
ಪಡಿತರ ಚೀಟಿ ಹೊಸ ನಿಯಮ: ಬಡವರಿಗೆ ಅನುಕೂಲವಾಗಲೆಂದು ಸರ್ಕಾರ ಉಚಿತ ಪಡಿತರ ವ್ಯವಸ್ಥೆಯನ್ನು ಕಲ್ಪಿಸಿದೆ. ಅದರಲ್ಲೂ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಒನ್ ನೇಷನ್ ಒನ್ ರೇಷನ್ ಎಂಬ ಮಹತ್ವಾಕಾಂಕ್ಷೆಯ ಯೋಜನೆಯಡಿ ಸರ್ಕಾರವು ದೇಶದ ಯಾವುದೇ ಭಾಗದಲ್ಲಾದರೂ ಫ್ರೀ ರೇಷನ್ ಪಡೆಯಬಹುದು ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ರೇಷನ್ ಕಾರ್ಡ್ ಹೊಸ ನಿಯಮ: ನೀವೂ ಸಹ ಪಡಿತರ ಚೀಟಿದಾರರಾಗಿದ್ದರೆ ಈ ಮಹತ್ವದ ಸುದ್ದಿಯನ್ನು ತಪ್ಪದೇ ಓದಿ. ಪಡಿತರ ಚೀಟಿ ವ್ಯವಸ್ಥೆಯಲ್ಲಿ ಕೆಲವು ಲೋಪದೋಷಗಳನ್ನು ಗಮನಿಸಿರುವ ಸರ್ಕಾರ ಕೆಲವು ಷರತ್ತುಗಳ ಅಡಿಯಲ್ಲಿ ಗ್ರಾಹಕರು ರೇಷನ್ ಕಾರ್ಡ್ ಅನ್ನು ಸರೆಂಡರ್ ಮಾಡಲು ಹೊಸ ನಿಯಮ ರೂಪಿಸಿದೆ. ಈ ನಿಯಮಗಳನ್ನು ನಿರ್ಲಕ್ಷಿಸುವುದರಿಂದ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಭಾರೀ ತೊಂದರೆ ಎದುರಾಗಬಹುದು.
ವಾಸ್ತವವಾಗಿ, ಬಡವರಿಗೆ ಅನುಕೂಲವಾಗಲೆಂದು ಸರ್ಕಾರ ಉಚಿತ ಪಡಿತರ ವ್ಯವಸ್ಥೆಯನ್ನು ಕಲ್ಪಿಸಿದೆ. ಅದರಲ್ಲೂ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಒನ್ ನೇಷನ್ ಒನ್ ರೇಷನ್ ಎಂಬ ಮಹತ್ವಾಕಾಂಕ್ಷೆಯ ಯೋಜನೆಯಡಿ ಸರ್ಕಾರವು ದೇಶದ ಯಾವುದೇ ಭಾಗದಲ್ಲಾದರೂ ಫ್ರೀ ರೇಷನ್ ಪಡೆಯಬಹುದು ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ, ಈ ಮಹತ್ವಾಕಾಂಕ್ಷೆಯ ಈ ಯೋಜನೆಯು ಅರ್ಹರಿಗೆ ತಲುಪುವ ಬದಲಿಗೆ ಅನರ್ಹ ಪಡಿತರ ಚೀಟಿದಾರರು ಅಂದರೆ ರೇಷನ್ ಕಾರ್ಡ್ ಪಡೆಯಲು ಅರ್ಹರಲ್ಲದವರ ಪಾಲಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಅಂತಹವರಿಗೆ ಪಡಿತರ ಚೀಟಿಯನ್ನು ಸರೆಂಡರ್ ಮಾಡಲು ನಿಯಮ ಜಾರಿಗೊಳಿಸಿದೆ. ಸರ್ಕಾರದ ಈ ನಿಯಮವನ್ನು ನಿರ್ಲಕ್ಷಿಸಿ ಸರ್ಕಾರದ ಪಡಿತರ ವ್ಯವಸ್ಥೆಯ ಲಾಭ ಪಡೆಯುವ ಅರ್ಹರಲ್ಲದ ಪಡಿತರ ಚೀಟಿದಾರರಿಗೆ ದಂಡ ವಿಧಿಸಬಹುದು. ಇಲ್ಲವೇ ಅಂತಹವರ ವಿರುದ್ಧ ಕಾನೂನು ಕ್ರಮ ಕೂಡ ಜರುಗಿಸಬಹುದು.
ಇದನ್ನೂ ಓದಿ- Ration card : ಈಗ ಮನೆಯಲ್ಲಿ ಕುಳಿತು ಪಡಿತರ ಚೀಟಿ ಪಡೆಯಿರಿ! Online ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿ ತಿಳಿಯಿರಿ
ದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂದು ಸರ್ಕಾರದ ವತಿಯಿಂದ ನೀಡಲಾಗುವ ಉಚಿತ ಪಡಿತರದ ಪ್ರಯೋಜನ ಅರ್ಹ ಪಡಿತರದಾರರಿಗೆ ಲಭ್ಯವಾಗುವುದಕ್ಕಿಂತ ಹೆಚ್ಚಾಗಿ ಅರ್ಹರಲ್ಲದವರೇ ಇದರ ಲಾಭವನ್ನು ಹೆಚ್ಚಾಗಿ ಪಡೆಯುತ್ತಿದ್ದಾರೆ. ಹಾಗಾಗಿ, ಪಡಿತರ ಯೋಜನೆಗೆ ಅರ್ಹರಲ್ಲದವರು ಕೂಡಲೇ ತಮ್ಮ ರೇಷನ್ ಕಾರ್ಡ್ ಅನ್ನು ಮರಳಿಸುವಂತೆ ಅಧಿಕಾರಿಗಳ ಮೂಲಕ ಮನವಿ ಮಾಡಲಾಗುತ್ತಿದೆ.
ಇದಲ್ಲದೆ, ನಿಗದಿತ ಗಡುವಿನೊಳಗೆ ಅನರ್ಹರು ತಮ್ಮ ಪಡಿತರ ಚೀಟಿಯನ್ನು ಹಿಂದಿರುಗಿಸದಿದ್ದರೆ ಹಾಗೂ ತನಿಖೆ ವೇಳೆ ಪಡಿತರ ಯೋಜನೆಯ ಲಾಭವನ್ನು ಪಡೆಯಲು ಅರ್ಹರಲ್ಲದವರು ಯೋಜನೆಯ ಲಾಭ ಪಡೆಯುತ್ತಿರುವುದು ಪತ್ತೆಯಾದರೆ ಅಂತಹವರ ರೇಷನ್ ಕಾರ್ಡ್ ಅನ್ನು ಪರಿಶೀಲನೆಯ ನಂತರ ರದ್ದುಗೊಳಿಸಲಾಗುತ್ತದೆ. ಅಷ್ಟೇ ಅಲ್ಲದೆ ಇಂತಹ ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ- Ration Card : ಪಡಿತರ ಚೀಟಿಯಲ್ಲಿ ಮನೆಯ ಹೊಸ ಸದಸ್ಯರ ಹೆಸರನ್ನು ಹೀಗೆ ಸೇರಿಸಿ!
ಸರ್ಕಾರದ ಪಡಿತರ ವ್ಯವಸ್ಥೆಯನ್ನು ಪಡೆಯಲು ಯಾರು ಅನರ್ಹರು ?
ಗ್ರಾಮೀಣ ಪ್ರದೇಶದಲ್ಲಿ ಕುಟುಂಬದ ಆದಾಯ ವರ್ಷಕ್ಕೆ 2 ಲಕ್ಷ ಮತ್ತು ನಗರ ಪ್ರದೇಶಗಳಲ್ಲಿ ವಾರ್ಷಿಕ 3 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಕುಟುಂಬಗಳು ಈ ಯೋಜನೆಗೆ ಅನರ್ಹರಾಗಿರುತ್ತಾರೆ. ಇದಲ್ಲದೆ, 100 ಚದರ ಮೀಟರ್‌ಗಿಂತ ಹೆಚ್ಚಿನ ವಿಸ್ತೀರ್ಣದ ಮನೆ ಅಥವಾ ಫ್ಲಾಟ್, ನಾಲ್ಕು ಚಕ್ರದ ವಾಹನ ಹೊಂದಿದ್ದರೆ ಅಂತಹ ಜನರು ಪಡಿತರ ಚೀಟಿಯನ್ನು ಪಡೆಯಲು ಅರ್ಹತೆ ಹೊಂದಿರುವುದಿಲ್ಲ.
ಕರ್ನಾಟಕದಲ್ಲಿ ಪಡಿತರ ಚೀಟಿ ಪಡೆಯಲು ಅಗತ್ಯ ಅರ್ಹತೆಯ ಮಾನದಂಡ:
ನೀವು ಕರ್ನಾಟಕದಲ್ಲಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಹೊಂದಿರುವುದು ಅಗತ್ಯವಾಗಿದೆ-
* ಕರ್ನಾಟಕದಲ್ಲಿ ಪಡಿತರ ಚೀಟಿ ಪಡೆಯಲು ಅರ್ಜಿದಾರರು ಕರ್ನಾಟಕದ ಕಾನೂನುಬದ್ಧ ಮತ್ತು ಖಾಯಂ ನಿವಾಸಿ ಆಗಿರುವುದು ಮುಖ್ಯ.
* ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರು ಈ ಮೊದಲು ಯಾವುದೇ ಪಡಿತರ ಚೀಟಿಯನ್ನು ಹೊಂದಿರಬಾರದು.
* ಇದಲ್ಲದೆ ಪಡಿತರ ಚೀಟಿದಾದರರ ಹಳೆಯ ರೇಷನ್ ಕಾರ್ಡ್ ಕಳುವಾಗಿದ್ದರೆ ಅಥವಾ ನೀವು ಅದನ್ನು ಎಲ್ಲಾದರೂ ಕಳೆದುಕೊಡ್ನಿದ್ದರೆ ಅಂತಹ ಸಂದರ್ಭದಲ್ಲಿಯೂ ಹೊಸ ರೇಷನ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
* ನವವಿವಾಹಿತರು ತಮ್ಮ ಮೊದಲು ತಾವು ಹೊಂದಿದ್ದ ರೇಷನ್ ಕಾರ್ಡಿನಲ್ಲಿ ಹೆಸರನ್ನು ತೆಗೆಸಿ, ನಂತರ ಅಗತ್ಯ ದಾಖಲೆಗಳೊಂದಿಗೆ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.