Ration Card Rules : ನೀವೂ ಒಂದು ವೇಳೆ ಪಡಿತರ ಚೀಟಿಧಾರಕರಾಗಿದ್ದಾರೆ ಈ ಸುದ್ದಿಯನ್ನು ತಪ್ಪದೆ ಓದಿ. ಕರೋನಾ ಮಹಾಮಾರಿಯ ಸಮಯದಲ್ಲಿ ಸರ್ಕಾರವು ಬಡವರಿಗೆ ಉಚಿತ ಪಡಿತರ ವ್ಯವಸ್ಥೆಯನ್ನು ಪ್ರಾರಂಭಿಸಿತ್ತು. ಆದರೆ ಕೊನೆಯ ದಿನಗಳಲ್ಲಿ ಸರಕಾರದಿಂದ ಸಿಗುವ ಉಚಿತ ಪಡಿತರದ ಲಾಭವನ್ನು ಲಕ್ಷಗಟ್ಟಲೆ ಅನರ್ಹರು ಸಹ ಪಡೆಯುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ.

COMMERCIAL BREAK
SCROLL TO CONTINUE READING

ಕ್ರಮ ಜರುಗಿಸಲಾಗುವುದು
ಇದಕ್ಕಾಗಿ ಸರಕಾರ ಜನರಲ್ಲಿ ಮನವಿ ಮಾಡುತ್ತಿದ್ದು, ಅನರ್ಹರು ತಾವೇ ಖುದ್ದಾಗಿ ಪಡಿತರ ಚೀಟಿ ರದ್ದುಪಡಿಸಿಕೊಡಬೇಕು ಎಂದು ಹೇಳಿದೆ. ಪಡಿತರ ಚೀಟಿ ಒಂದು ವೇಳೆ ರದ್ದುಪಡಿಸದಿದ್ದರೆ ಪರಿಶೀಲನೆ ಬಳಿಕ ಆಹಾರ ಇಲಾಖೆಯ ತಂಡ ಅವುಗಳನ್ನು ರದ್ದುಪಡಿಸಿ ಅನರ್ಹರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ-Astrology: ನೀವು ಮಲಗುವ ವಿಧಾನ ನಿಮ್ಮ ಭವಿಷ್ಯ ಹೇಳುತ್ತದೆ

ಏನಿದು ನಿಮಯ?
ಪಡಿತರ ಚೀಟಿ ಹೊಂದಿದವರ ಬಳಿ ಸ್ವಂತ ಆದಾಯದಿಂದ ಗಳಿಸಿದ 100 ಚದರ ಮೀಟರ್ ವಿಸ್ತೀರ್ಣದ ನಿವೇಶನ/ಫ್ಲಾಟ್ ಅಥವಾ ಮನೆ ಇದ್ದರೆ, ಅಥವಾ ನಾಲ್ಕು ಚಕ್ರ ವಾಹನ/ಟ್ರಾಕ್ಟರ್, ಶಸ್ತ್ರಾಸ್ತ್ರ ಪರವಾನಗಿ, ಕುಟುಂಬದ ಆದಾಯವು ಗ್ರಾಮದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಮತ್ತು ನಗರದಲ್ಲಿ ವಾರ್ಷಿಕ ಮೂರು ಲಕ್ಷ ರೂ.ಗಿಂತ ಹೆಚ್ಚಾಗಿದ್ದರೆ,  ಅಂತಹ ಜನರು ತಮ್ಮ ಪಡಿತರ ಚೀಟಿಯನ್ನು ತಹಸಿಲ್ ಮತ್ತು ಡಿಎಸ್ಒ ಕಚೇರಿಯಲ್ಲಿ ಸರೆಂಡರ್ ಮಾಡಬೇಕಾಗಲಿದೆ.


ಇದನ್ನೂ ಓದಿ-Funny Video: ಬೆನ್ನು ತುರುಸಿಕೊಳ್ಳಲು ಈ ವ್ಯಕ್ತಿ ಮಾಡಿದ ಪ್ಲ್ಯಾನ್‌ ನೋಡಿ..

ವಸೂಲಿ ಮಾಡಲಾಗುವುದು
ಸರ್ಕಾರದ ನಿಯಮಗಳ ಪ್ರಕಾರ, ಅನರ್ಹ ಪಡಿತರ ಚೀಟಿದಾರರು ತಮ್ಮ ಕಾರ್ಡನ್ನು ಸರೆಂಡರ್ ಮಾಡದೆ ಹೋದಲ್ಲಿ, ಪರಿಶೀಲನೆಯ ಬಳಿಕ ಅಂತಹ ಜನರ ಕಾರ್ಡ್ ಅನ್ನು ರದ್ದುಗೊಳಿಸಲಾಗುವುದು ಎನ್ನಲಾಗಿದೆ. ಇದಲ್ಲದೆ ಆ ಕುಟುಂಬದ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎನ್ನಲಾಗಿದೆ. ಅಷ್ಟೇ ಅಲ್ಲ ಅಂತಹವರಿಂದ ಅವರು ಪಡೆದ ಪಡಿತರವನ್ನೂ ಕೂಡ ವಸೂಲಿ ಮಾಡಲಾಗುವುದು ಎನ್ನಲಾಗಿದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.