ರೇಷನ್ ಕಾರ್ಡ್‌ನ ಹೊಸ ನಿಯಮಗಳು:  ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ರೇಷನ್ ಕಾರ್ಡ್‌ನ ನಿಯಮಗಳಲ್ಲಿ ಆಗಾಗ್ಗೆ ಬದಲಾವಣೆ ತರುತ್ತದೆ. ಇದರ ಅಡಿಯಲ್ಲಿ, ಸರ್ಕಾರಿ ಪಡಿತರ ಅಂಗಡಿಗಳಿಂದ ಉಚಿತ ಪಡಿತರ ಪಡೆಯುವ ಅರ್ಹತಾ ಮಾನದಂಡಗಳು ಬದಲಾಗುತ್ತಿರುತ್ತವೆ. ವಾಸ್ತವವಾಗಿ, ಸರ್ಕಾರದ ಪಡಿತರ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವವರು ಹಲವರಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಅರ್ಹರಿಗೆ ಯೋಜನೆಯನ್ನು ತಲುಪಿಸಲು ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.  ಅನರ್ಹ ಪಡಿತರ ಚೀಟಿದಾರರು ತಮ್ಮ ರೇಷನ್ ಕಾರ್ಡ್ ಅನ್ನು ಸರೆಂಡರ್ ಮಾಡುವಂತೆ ಅಥವಾ ಅದನ್ನು ರದ್ದು ಮಾಡುವಂತೆ ಸರ್ಕಾರ ಮನವಿ ಮಾಡಿದೆ. ಅನರ್ಹ ಪಡಿತರ ಚೀಟಿದಾರರು ರೇಷನ್ ಕಾರ್ಡ್ ಸರೆಂಡರ್ ಮಾಡದೇ ಇರುವವರು ಸರ್ಕಾರ ನಡೆಸುವ ಪರಿಶೀಲನೆಯಲ್ಲಿ ಸಿಕ್ಕಿಬಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ದೇಶದ  32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ "ಒನ್ ನೇಷನ್, ಒನ್ ರೇಷನ್" ಯೋಜನೆಯನ್ನು ಜಾರಿಗೆ ತರಲಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪ್ರಕಾರ,  ದೇಶಾದ್ಯಂತ 80 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (ಎನ್ಎಫ್ಎಸ್ಎ)  ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಅವರಲ್ಲಿ ಆರ್ಥಿಕವಾಗಿ ಸದೃಢರಾಗಿರುವ ಜನರೂ ಇದ್ದಾರೆ.  ಈ ಕಾರಣಕ್ಕಾಗಿಯೇ ಈಗ ಸರ್ಕಾರ ತನ್ನ ನಿಯಮಗಳನ್ನು ಬದಲಾಯಿಸಲು ಹೊರಟಿದೆ. ಹೊಸ ಮಾನದಂಡದನ್ವಯ ಪಡಿತರ ವ್ಯವಸ್ಥೆಯಲ್ಲಿ ಯಾವುದೇ ಅವ್ಯವಹಾರಗಳು ನಡೆಯದಂತೆ ಸಂಪೂರ್ಣ ಪಾರದರ್ಶಕಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ- Ration Card Update: ಇನ್ಮುಂದೆ ಪಡಿತರ ಅಂಗಡಿ ಮಾಲೀಕರು ಪಡಿತರ ತೂಕದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ, ಬಂದಿದೆ ಹೊಸ ನಿಯಮ


ಸರ್ಕಾರದಿಂದ ಉಚಿತ ಪಡಿತರ ಪಡೆಯಲು ಇರುವ ನಿಯಮಗಳೇನು?
ಪಡಿತರ ನಿಯಮದ ಪ್ರಕಾರ,  ಕಾರ್ಡ್ ಹೊಂದಿರುವವರು ತಮ್ಮ ಸ್ವಂತ ಆದಾಯದಿಂದ ಗಳಿಸಿದ 100 ಚದರ ಮೀಟರ್ ವಿಸ್ತೀರ್ಣದ ಪ್ಲಾಟ್/ಫ್ಲಾಟ್ ಅಥವಾ ಮನೆ ಹೊಂದಿದ್ದರೆ, ನಾಲ್ಕು ಚಕ್ರ ವಾಹನ/ಟ್ರಾಕ್ಟರ್, ಶಸ್ತ್ರಾಸ್ತ್ರ ಪರವಾನಗಿ ಅಥವಾ ಗ್ರಾಮದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಮತ್ತು ನಗರದಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯವನ್ನು ಹೊಂದಿದ್ದರೆ ಅಂತಹವರು ಫ್ರೀ ರೇಷನ್ ಪಡೆಯಲು ಅರ್ಹತೆಯನ್ನು ಹೊಂದಿರುವುದಿಲ್ಲ. 


ನೀವು ಅರ್ಹರಲ್ಲದಿದ್ದರೂ ಸರ್ಕಾರದ ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದರೆ ತಕ್ಷಣವೇ ನಿಮ್ಮ ಸನಿಹದ ತಹಸಿಲ್ದಾರ್ ಕಚೇರಿ ಮತ್ತು ಡಿಎಸ್ಒ ಕಚೇರಿಯಲ್ಲಿ ಪಡಿತರ ಚೀಟಿಯನ್ನು ಒಪ್ಪಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.


ಇದನ್ನೂ ಓದಿ- Aadhaar Card: ಕ್ರೆಡಿಟ್-ಡೆಬಿಟ್ ಕಾರ್ಡ್‌ಗಳಂತೆ ಆಧಾರ್ ಕಾರ್ಡ್‌ಗೂ ಇದೆ ಎಕ್ಸ್‌ಪೈರಿ ಡೇಟ್


ಸರ್ಕಾರದ ನಿಯಮಗಳ ಪ್ರಕಾರ, ಪಡಿತರವನ್ನು ನಕಲಿ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವರು, ಅನರ್ಹ ಪಡಿತರ ಚೀಟಿದಾರರು ತಮ್ಮ ಕಾರ್ಡ್ ಅನ್ನು ಒಪ್ಪಿಸದಿದ್ದರೆ, ತನಿಖೆಯ ನಂತರ ಅಂತಹ ಜನರ ಕಾರ್ಡ್ ಅನ್ನು ರದ್ದುಗೊಳಿಸಲಾಗುತ್ತದೆ. ಇದಲ್ಲದೇ ಅವರ ವಿರುದ್ಧ ಕಾನೂನು ಕ್ರಮವನ್ನೂ ಕೈಗೊಳ್ಳಬಹುದು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.