Paytm Payments Bank: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್‌ಬಿಐ ಮಹತ್ವದ ಕ್ರಮ ಕೈಗೊಂಡಿದೆ. ಮುಂದಿನ ಆದೇಶದವರೆಗೆ ಹೊಸ ಗ್ರಾಹಕರನ್ನು ( New Customer) ಸೇರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು RBI ನಿಷೇಧಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Good News: ಬ್ಯಾಂಕ್ ಗ್ರಾಹಕರಿಗೊಂದು ಸಂತಸದ ಸುದ್ದಿ! ಇದೀಗ Aadhaar ನಿಂದ ಸಕ್ರೀಯವಾಗಲಿದೆ ಈ ಸೇವೆ

ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್, 1949 ರ ಸೆಕ್ಷನ್ 35A ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿ, ಹೊಸ ಗ್ರಾಹಕರ ಸೇರ್ಪಡೆಯನ್ನು ನಿಷೇಧಿಸಲು ತಕ್ಷಣದಿಂದಲೇ ಜಾರಿಗೆ ಬರುವಂತೆ Paytm ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ನಿರ್ದೇಶನ ನೀಡಿದೆ. ಇದಲ್ಲದೆ, ಐಟಿ ವ್ಯವಸ್ಥೆಯ ಸಮಗ್ರ ಆಡಿಟ್ ನಡೆಸಲು ಐಟಿ ಆಡಿಟ್ ಸಂಸ್ಥೆಯನ್ನು ನೇಮಿಸುವಂತೆ RBI ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ನಿರ್ದೇಶನ ನೀಡಿದೆ. ಐಟಿ ಆಡಿಟರ್‌ಗಳ ವರದಿಯನ್ನು ಪರಿಶೀಲಿಸಿದ ನಂತರ ಮತ್ತು RBIನಿಂದ ಅನುಮತಿ ಪಡೆದ ನಂತರವೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಹೊಸ ಗ್ರಾಹಕರನ್ನು ಸೇರಿಸಲು ಸಾಧ್ಯವಾಗಲಿದೆ ಎಂದು RBI ತನ್ನ ಆದೇಶದಲ್ಲಿ ತಿಳಿಸಿದೆ.


ಇದನ್ನೂ ಓದಿ-PF ಖಾತೆದಾರರಿಗೆ ಬಂಪರ್ ಆಫರ್ : ನಿಮಗೆ ಸಿಗಲಿದೆ ₹7 ಲಕ್ಷ, ಅದಕ್ಕೆ ಈ ಕೆಲಸ ಮಾಡಬೇಕಷ್ಟೆ

ವಾಸ್ತವದಲ್ಲಿ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಮೇಲ್ವಿಚಾರಣೆಯ ಸಮಯದಲ್ಲಿ ಆರ್‌ಬಿಐ (Reserve Bank Of India) ಕೆಲ ವಿಷಯಗಳನ್ನು ಪತ್ತೆಹಚ್ಚಿದ್ದು, ಅವುಗಳ ಬಗ್ಗೆ ಪರಿವೀಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ವರ್ಷ ಅಕ್ಟೋಬರ್ 2021 ರಲ್ಲಿ, ಆರ್‌ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ರೂ 1 ಕೋಟಿ ದಂಡ ವಿಧಿಸಿದೆ. ಇದಾದ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆರ್‌ಬಿಐಗೆ ಸರ್ಟಿಫಿಕೆಟ್ ಆಫ್ ಅಥರೈಸೆಶನ್ ಪ್ರಮಾಣಪತ್ರಕ್ಕಾಗಿ (CoA) ಅರ್ಜಿಯನ್ನು ಕಳುಹಿಸುವಂತೆ ಹೇಳಿತ್ತು. ಸರ್ಟಿಫಿಕೆಟ್ ಪರಿಶೀಲನೆ ವೇಳೆ PPBL ಒದಗಿಸಿರುವ ಮಾಹಿತಿಯು ಕಂಪನಿಯ ಸರಿಯಾದ ಸ್ಥಿತಿಯನ್ನು ಬಿಂಬಿಸುವುದಿಲ್ಲ ಎಂಬುದು ತಿಳಿದುಬಂದಿದೆ.


ಇದನ್ನೂ ಓದಿ-ರೈತರಿಗೆ ಸಂತಸದ ಸುದ್ದಿ : ಸರ್ಕಾರ ಶೀಘ್ರದಲ್ಲೇ ಪ್ರಾರಂಭಿಸಲಿದೆ ಈ ಸೌಲಭ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.