ನವದೆಹಲಿ: RTGS Service Update - ಒಂದು ವೇಳೆ ನೀವೂ ಕೂಡ ಆನ್ಲೈನ್ ಹಣ ವರ್ಗಾವಣೆ ಮಾಡಲು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಸರ್ವಿಸ್ (RTGS)ನ ಬಳಕೆ ಮಾಡುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಶನಿವಾರ ಮಧ್ಯರಾತ್ರಿಯಿಂದ 14 ಗಂಟೆಗಳವರೆಗೆ ಈ ಸೇವೆ ಸ್ಥಗಿತಗೊಳ್ಳಲಿದೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಈ ಕಾರಣ ಸೇವೆ ಸ್ಥಗಿತಗೊಳ್ಳಲಿದೆ
ಈ ಸೇವೆಯ 'ಡಿಸಾಸ್ಟರ್ ರಿಕವರಿ' ಸಮಯವನ್ನು ಮತ್ತಷ್ಟು ಉತ್ತಮಗೊಳಿಸುವ ಸಲುವಾಗಿ ಈ ಸೇವೆಯನ್ನು ಉನ್ನತ ದರ್ಜೆಗೆ ಏರಿಸಲಾಗುತ್ತಿರುವ ಕಾರಣ ಈ ಸೇವೆಯನ್ನು 14 ಗಂಟೆಗಳ ಅವಧಿಗೆ ಸ್ಥಗಿತಗೊಳಿಸಲಾಗುತ್ತಿದೆ. ಈ ಅವಧಿಯಲ್ಲಿ ಗ್ರಾಹಕರು 2 ಲಕ್ಷ ರೂ.ಗಳ ವರೆಗೆ ವರ್ಗಾವಣೆ ಮಾಡಲು ಬಳಸಲಾಗುವ ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್ (NEFT)ಬಳಸಬಹುದಾಗಿದೆ.


ಇದನ್ನೂ ಓದಿ- RBI: ಶೀಘ್ರದಲ್ಲಿಯೇ ದೇಶಾದ್ಯಂತ ತಲೆ ಎತ್ತಲಿವೆ 8 ಹೊಸ ಬ್ಯಾಂಕ್ ಗಳು, ಇಲ್ಲಿದೆ ಪಟ್ಟಿ


ಐದು ದಿನಗಳ ಮೊದಲೇ RBI ಈ ಕುರಿತು ಸೂಚನೆ ನೀಡಿತ್ತು
ಆರ್‌ಬಿಐ ಸೋಮವಾರವೇ ಈ ಕುರಿತು ಅಧಿಸೂಚನೆ ಹೊರಡಿಸಿ ಗ್ರಾಹಕರಿಗೆ ಮಾಹಿತಿ ನೀಡಿತ್ತು. ಅಧಿಸೂಚನೆಯಲ್ಲಿ, 'ಏಪ್ರಿಲ್ 17, 2021 ರಂದು ವ್ಯವಹಾರ ಪೂರ್ಣಗೊಂಡ ನಂತರ, ಆರ್‌ಟಿಜಿಎಸ್ ಸೇವೆಯ ಸಾಮರ್ಥ್ಯವನ್ನು ಸುಧಾರಿಸಲು ಮತ್ತು' ವಿಪತ್ತು ಚೇತರಿಕೆ '(Disaster Recovery) ಸಮಯವನ್ನು ಮತ್ತಷ್ಟು ಸುಧಾರಿಸಲು ಆರ್‌ಟಿಜಿಎಸ್ ಅನ್ನು ತಾಂತ್ರಿಕವಾಗಿ ಸುಧಾರಿಸಲಾಗುವುದು. ಈ ಕಾರಣದಿಂದಾಗಿ, 2021 ಏಪ್ರಿಲ್ 18 ರಂದು ಆರ್‌ಟಿಜಿಎಸ್ ಸೇವೆ 00:00 ಗಂಟೆಯಿಂದ (ಶನಿವಾರ ರಾತ್ರಿ) 14.00 ಗಂಟೆಗಳವರೆಗೆ (ಭಾನುವಾರದವರೆಗೆ) ಲಭ್ಯವಿರುವುದಿಲ್ಲ.


ಇದನ್ನೂ ಓದಿ- Oil Company ಗ್ರಾಹಕರಿಗೆ ನೀಡುತ್ತಿದೆ ಕೋಟ್ಯಾಧಿಪತಿಯಾಗುವ ಅವಕಾಶ


ಡಿಸೆಂಬರ್ 14ರಿಂದ 24X7 ಲಭ್ಯವಿದೆ RTGS
ಈ ಕುರಿತು ಸದಸ್ಯ ಬ್ಯಾಂಕುಗಳಿಗೆ ಸೂಚನೆ ನೀಡಿದ್ದ RBI, ತಮ್ಮ ಗ್ರಾಹಕರಿಗೆ ಅವರ ಪಾವತಿ ಚಟುವಟಿಕೆಗಳ ಸುವ್ಯವಸ್ತಿತ ನಿಯೋಜನೆಗಾಗಿ ಸೂಚಿಸುವಂತೆ ಹೇಳಿತ್ತು. ಕಳೆದ ವರ್ಷ ಡಿಸೆಂಬರ್ 14 ರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಈ ಸೇವೆಯನ್ನು 24x7 ಜಾರಿಗೊಳಿಸಿ ಆದೇಶ ನೀಡಿತ್ತು.


ಇದನ್ನೂ ಓದಿ- ಶೀಘ್ರದಲ್ಲೇ ಬಂದ್ ಆಗಲಿದೆ ಈ ಪ್ರಸಿದ್ದ ಬ್ಯಾಂಕ್..! ಕಾರಣ ಇಲ್ಲಿದೆ ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.