RBI Floating Rate Bond: ನೀವು ಸಹ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದರೆ, ನಿಮಗೆ ಒಳ್ಳೆಯ ಸುದ್ದಿ ನಿಮಗಾಗಿ. ಭಾರತೀಯ ರಿಸರ್ವ್ ಬ್ಯಾಂಕ್ ನಿಮಗಾಗಿ ಒಂದು ಮಹತ್ವದ ಘೋಷಣೆ ಮಾಡಿದೆ. RBI ಕೇಂದ್ರ ಸರ್ಕಾರದ ಫ್ಲೋಟಿಂಗ್ ರೇಟ್ ಬಾಂಡ್, 2031 (ಎಫ್ಆರ್ಬಿ 2031) ಬಡ್ಡಿ ದರವನ್ನು ಡಿಸೆಂಬರ್ 7, 2022 ರಿಂದ ಜೂನ್ 6, 2023 ರವರೆಗೆ ಅನ್ವಯಿಸುತ್ತದೆ. ಆರ್ ಬಿಐ ನೀಡಿರುವ ಮಾಹಿತಿ ಪ್ರಕಾರ ಈ ಬಾರಿ ಈ ಬಡ್ಡಿ ದರ ವಾರ್ಷಿಕ ಶೇ.7.69 ರಷ್ಟು ಇರಲಿದೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಬಡ್ಡಿಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಈ ಕುರಿತು ತನ್ನ ಹೇಳಿಕೆಯಲ್ಲಿ ಮಾಹಿತಿಯನ್ನು ನೀಡಿರುವ ಆರ್ಬಿಐ, 'ಎಫ್ ಆರ್ ಬಿ 2031ರಲ್ಲಿ ಒಂದು ಕೂಪನ್ ಇರುತ್ತದೆ ಮತ್ತು ಅದರ ಮೂಲ ಮೌಲ್ಯ 182 ದಿನಗಳ ಟಿ -ಬಿಲ್ಸ್ ಗಳ ಹಿಂದಿನ ಮೂರು ಹರಾಜುಗಳ (ದರ ನಿಗದಿಯ ದಿನ ಅಂದರೆ 7 ಡಿಸೆಂಬರ್ 2022 ರಿಂದ) ವೆಟೆಡ್ ಎವರೆಜ್ ಯೀಲ್ಡಗೆ ಸಮನಾಗಿರುತ್ತದೆ. ಈ ವೆಟೆಡ್ ಎವರೇಜ್ ಯೀಲ್ಡ ಅನ್ನು ಒಂದು ವರ್ಷದಲ್ಲಿನ 365 ದಿನಗಳ ಲೆಕ್ಕಾಚಾರದಲ್ಲಿ ನಿರ್ಧರಿಸಲಾಗುತ್ತದೆ' ಎಂದು ಹೇಳಿದೆ.


ಇದನ್ನೂ ಓದಿ-Good News: ರೈತರಿಗೊಂದು ಗುಡ್ ನ್ಯೂಸ್, ಈ ನಂಬರ್ ಗೆ ಮಿಸ್ ಕಾಲ್ ಕೊಡಿ, ಖಾತೆಗೆ ಹಣ ಬರುತ್ತೆ!


ಏನಿದು ಫ್ಲೋಟಿಂಗ್ ಬಾಂಡ್?
ಸಾಮಾನ್ಯವಾಗಿ ಸಿಕ್ಯೋರಿಟಿ ಬಾಂಡ್ ಗಳನ್ನು ಫ್ಲೋಟಿಂಗ್ ರೇಟ್ ಬಾಂಡ್ ಗಳೆಂದು ಕರೆಯುತ್ತಾರೆ. ಇವುಗಳ ಮೇಲೆ ಯಾವುದೇ ನಿಶ್ಚಿತ ಕೂಪನ್ ರೇಟ್ ಅಥವಾ ಬಡ್ಡಿದರ ಇರುವುದಿಲ್ಲ. ಇದಕ್ಕೆ ಒಂದೇ ರೀತಿಯ ಅಲ್ಲ ಹಲವು ರೀತಿಯ ಕೂಪನ್ ರೇಟ್ ಗಳಿರುತ್ತವೆ. ಮೊದಲೇ ನಿರ್ಧರಿಸಿದಂತೆ ಒಂದು ನಿಶ್ಚಿತ ಸಮಯದ ನಂತರ ಅವುಗಳನ್ನು ಮರುಹೊಂದಿಸಲಾಗುತ್ತದೆ. 


ಇದನ್ನೂ ಓದಿ-PMKFPO Yojana: ಕೋಟ್ಯಾಂತರ ರೈತ ಬಾಂಧವರಿಗೆ ಬಹುದೊಡ್ಡ ಉಡುಗೊರೆ ನೀಡಿದ PM ಮೋದಿ! ಖಾತೆ ಸೇರಲಿವೆ 15 ಲಕ್ಷ ರೂ.


ಸರ್ಕಾರಿ ಭದ್ರತೆಗಳ ಸ್ಥಿತಿಗತಿ ಏನು?
ಮಂಗಳವಾರ ಅಂದರೆ ಡಿಸೆಂಬರ್ 6 ರಂದು ಸರ್ಕಾರಿ ಭದ್ರತೆಗಳು ಸಾಕಷ್ಟು ವೇಗ ಪಡೆದುಕೊಂಡು ತನ್ನ ವ್ಯವಹಾರವನ್ನು ಅಂತ್ಯಗೊಳಿಸಿವೆ. ಮತ್ತೊಂದೆಡೆ, ಬಾಂಡ್ ಇಳುವರಿ ಬಗ್ಗೆ ಹೇಳುವುದಾದರೆ, ಅವು ಮಂಗಳವಾರ ಶೇ.7.2486 ನಲ್ಲಿ ಮುಕ್ತಾಯ ಕಂಡಿವೆ, ಆದರೆ ಹಿಂದಿನ ವ್ಯಾಪಾರದ ಅವಧಿಯಲ್ಲಿ ಅವು ಶೇ.7.2254 ರಲ್ಲಿ ತನ್ನ ವಹಿವಾಟನ್ನು ಅಂತ್ಯಗೊಳಿಸಿವೆ. ಪ್ರಸ್ತುತ ಆರ್‌ಬಿಐನ ಹಣಕಾಸು ನೀತಿಯ ಸಭೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, RBIನ ಯಾವುದೇ ರೀತಿಯ ನಿರ್ಧಾರ ಕೈಗೊಳ್ಳುವ ಮುಂಚಿತವಾಗಿ ವ್ಯಾಪಾರಿಗಳು ಎಚ್ಚರಿಕೆಯ ಕ್ರಮದಲ್ಲಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.