Repo Rate update : ಬ್ಯಾಂಕ್ ಲೋನ್ ಮೇಲಿನ EMI ಮೇಲೆ ಬಿಗ್ ಅಪ್ಡೇಟ್ ! ಹೊರಬಿತ್ತು RBI ನಿರ್ಧಾರ
RBI Repo Rate:. ಎಂಪಿಸಿ ಸಭೆಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವ ಬಗ್ಗೆ ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದಾಸ್ ಹೇಳಿದ್ದಾರೆ.
RBI Repo Rate : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹಣಕಾಸು ನೀತಿ ಪರಾಮರ್ಶೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಬಾರಿಯೂ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರೆಪೊ ದರವನ್ನು 6.5 ಪ್ರತಿಶತದಲ್ಲಿಯೇ ಇಡಲಾಗಿದೆ. ಸಾಲ ತೆಗೆದುಕೊಳ್ಳುವ ಗ್ರಾಹಕರು ಅದರ ಹಳೆಯ ಮಟ್ಟದಲ್ಲಿ ಉಳಿದಿರುವ ರೆಪೊ ದರದ ಪ್ರಯೋಜನ ಪಡೆಯುತ್ತಾರೆ. ಗೃಹ ಸಾಲ, ವಾಹನ ಸಾಲ ಅಥವಾ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಮೊದಲಿನಂತೆಯೇ ಇರುತ್ತದೆ.ಸತತ ಆರನೇ ಬಾರಿಗೆ ರೆಪೊ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲಾಗಿಲ್ಲ. ಎಂಪಿಸಿ ಸಭೆಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವ ಬಗ್ಗೆ ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದಾಸ್ ಹೇಳಿದ್ದಾರೆ.ಕೇಂದ್ರೀಯ ಬ್ಯಾಂಕ್ ಕೊನೆಯದಾಗಿ ಫೆಬ್ರವರಿ 2023ರಲ್ಲಿ ರೆಪೊ ದರವನ್ನು 6.5 ಪ್ರತಿಶತಕ್ಕೆ ಏರಿಸಿತ್ತು.
ವಿಶ್ಲೇಷಕರ ಅಂದಾಜುಗಳನ್ನು ಮೀರಿದ ಬೆಳವಣಿಗೆ :
ವಿತ್ತೀಯ ನೀತಿ ಪರಾಮರ್ಶೆಯನ್ನು ಪ್ರಕಟಿಸಿದ ಸೆಂಟ್ರಲ್ ಬ್ಯಾಂಕ್ ಗವರ್ನರ್ ದಾಸ್, ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಯ ನಡುವೆ ದೇಶದ ಆರ್ಥಿಕತೆ ಸದೃಢವಾಗಿದೆ ಎಂದು ಹೇಳಿದರು. ಒಂದೆಡೆ ಆರ್ಥಿಕ ಬೆಳವಣಿಗೆ ಹೆಚ್ಚುತ್ತಿದೆ, ಮತ್ತೊಂದೆಡೆ ಹಣದುಬ್ಬರ ಕಡಿಮೆಯಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ತೀವ್ರಗೊಳಿಸಲು ರೆಪೊ ದರದಲ್ಲಿ ಬದಲಾವಣೆ ಮಾಡಲಾಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ : Bharat Rice: ಭಾರತ್ ರೈಸ್ ಹೆಸರಿನಲ್ಲಿ 29 ರೂ./ಕೆಜಿ ಅಕ್ಕಿ ಪರಿಚಯಿಸಿದ ಕೇಂದ್ರ ಸರ್ಕಾರ! ಎಲ್ಲಿ ಖರೀದಿಸಬೇಕು?
ಜಾಗತಿಕ ಬೆಳವಣಿಗೆ ದರವು ಸ್ಥಿರವಾಗಿ ಉಳಿಯುವ ನಿರೀಕ್ಷೆ :
ಇದರ ಹೊರತಾಗಿ, ಆರ್‌ಬಿಐ ಎಂಎಸ್‌ಎಫ್ (ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ರೇಟ್ ) ಮತ್ತು ಬ್ಯಾಂಕ್ ದರವನ್ನು ಶೇಕಡಾ 6.75 ನಲ್ಲಿ ಇರಿಸಲಾಗಿದೆ. 2024ರಲ್ಲಿ ಜಾಗತಿಕ ಬೆಳವಣಿಗೆ ದರ ಸ್ಥಿರವಾಗಿ ಉಳಿಯುವ ನಿರೀಕ್ಷೆ ಇದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಹಣದುಬ್ಬರ ದರವನ್ನು ಶೇಕಡಾ ನಾಲ್ಕಕ್ಕೆ ತರಲು ಎಂಪಿಸಿ ಬದ್ಧವಾಗಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡಲಾಗುತ್ತಿದೆ. 2024-25ರಲ್ಲೂ ಕೈಗಾರಿಕಾ ಚಟುವಟಿಕೆಯ ವೇಗ ಮುಂದುವರಿಯಲಿದೆ ಎಂದು ದಾಸ್ ಭರವಸೆ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಜುಲೈ 2023ರಲ್ಲಿ ಹಣದುಬ್ಬರ ದರವು 7.44 ಶೇಕಡಾ ದಾಖಲೆಯ ಮಟ್ಟಕ್ಕೆ ಏರಿದೆ.ಇದಾದ ನಂತರ, ಇದರಲ್ಲಿ ಕುಸಿತ ಕಂಡುಬಂದಿದ್ದು, ಡಿಸೆಂಬರ್ 2023 ರಲ್ಲಿ ಅದು 5.69 ಶೇಕಡಾಕ್ಕೆ ಇಳಿಯಿತು. ರಿಸರ್ವ್ ಬ್ಯಾಂಕ್ ಹಣದುಬ್ಬರ ದರವನ್ನು ಶೇಕಡಾ 4-6 ರ ವ್ಯಾಪ್ತಿಯಲ್ಲಿ ಇರಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ : Public Provident Fund: ನಿಮ್ಮ ಪಿಪಿಎಫ್ ಅಕೌಂಟ್ ಬಂದ್ ಆಗಿದ್ಯಾ? ಅದನ್ನು ಮತ್ತೆ ಪ್ರಾರಂಭಿಸಲು ಇಲ್ಲಿದೆ ಸುಲಭ ವಿಧಾನ
ರೆಪೋ ದರ ಎಂದರೇನು? :
ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ. ರೆಪೊ ದರದಲ್ಲಿ ಹೆಚ್ಚಳ ಎಂದರೆ ಬ್ಯಾಂಕ್‌ಗಳು ದುಬಾರಿ ದರದಲ್ಲಿ ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಇದು ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲ ಇತ್ಯಾದಿಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸುತ್ತದೆ. ಇದು ನಿಮ್ಮ EMI ಮೇಲೆ ನೇರ ಪರಿಣಾಮ ಬೀರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.