RBI Board Meeting: ಭಾರತೀಯ ರಿಸರ್ವ್ ಬ್ಯಾಂಕ್ ಮಂಡಳಿಯು ತನ್ನ ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ 87,416 ಕೋಟಿ ರೂಪಾಯಿಗಳನ್ನು ಲಾಭಾಂಶದ ರೂಪದಲ್ಲಿ ನೀಡಲು ಅನುಮೋದನೆ ನೀಡಿದೆ. 2021-22ರ ಹಣಕಾಸು ವರ್ಷದಲ್ಲಿ ಆರ್‌ಬಿಐ ಕೇಂದ್ರ ಸರ್ಕಾರಕ್ಕೆ 30,307 ಕೋಟಿ ರೂಪಾಯಿ ಲಾಭಾಂಶ ನೀಡಿತ್ತು. ಇದರೊಂದಿಗೆ, ಆರ್‌ಬಿಐ ಮಂಡಳಿಯು ಆಕಸ್ಮಿಕ ಅಪಾಯದ ಬಫರ್ ಅನ್ನು ಪ್ರಸ್ತುತ ಶೇಕಡಾ 5.5 ರಿಂದ ಶೇಕಡಾ 6 ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಇರುವ ಜಾಗತಿಕ ಮತ್ತು ದೇಶೀಯ ಆರ್ಥಿಕ ಪರಿಸ್ಥಿತಿಯನ್ನು ಇಂದಿನ ಮಂಡಳಿಯ ಸಭೆಯಲ್ಲಿ ಪರಿಶೀಲಿಸಲಾಗಿದೆ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದಲ್ಲದೆ, ಪ್ರಸ್ತುತ ಜಾಗತಿಕ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದ ಸವಾಲುಗಳು ಮತ್ತು ಅದರ ಪರಿಣಾಮಗಳನ್ನು ಕೂಡ ಪರಿಶೀಲಿಸಲಾಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 2022 ರಿಂದ ಮಾರ್ಚ್ 2023 ರವರೆಗೆ ಆರ್‌ಬಿಐ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲಾಗಿದೆ. ಈ ಸಭೆಯಲ್ಲಿ, 2022-23 ರ ಹಣಕಾಸು ವರ್ಷದ ಆರ್‌ಬಿಐ ವಾರ್ಷಿಕ ವರದಿಯೊಂದಿಗೆ ಆರ್‌ಬಿಐ ಖಾತೆಗಳನ್ನು ಅನುಮೋದಿಸಲಾಗಿದೆ.


ಇದನ್ನೂ ಓದಿ-Adani Hindenburg Case: SEBI ಗೆ ಹೆಚ್ಚಿನ ಅಧಿಕಾರ ನೀಡುವ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದ ಸುಪ್ರೀಂ


2023-24ರ ಬಜೆಟ್‌ನಲ್ಲಿ ಸರ್ಕಾರವು ಬ್ಯಾಂಕ್‌ಗಳು ಮತ್ತು ಆರ್‌ಬಿಐ ಸೇರಿದಂತೆ 48000 ಕೋಟಿ ರೂಪಾಯಿಗಳ ಲಾಭಾಂಶವನ್ನು ಪಡೆಯುವ ಗುರಿಯನ್ನು ಹೊಂದಿತ್ತು. ಕಳೆದ ವರ್ಷ ಸರ್ಕಾರವು ಬ್ಯಾಂಕ್-ಆರ್‌ಬಿಐಗೆ 73,948 ಕೋಟಿ ಲಾಭಾಂಶದ ಗುರಿಯನ್ನು ನೀಡಿದ್ದಾಗ, ಅದು ಕೇವಲ 40,953 ಕೋಟಿ ರೂ.ಆಗಿತ್ತು.  ಆದರೆ ಈ ವರ್ಷ ಸರ್ಕಾರಕ್ಕೆ ಅಂದಾಜಿಗಿಂತ ಹೆಚ್ಚು ಲಾಭಾಂಶ ಬಂದಿದೆ. ಆರ್‌ಬಿಐನಿಂದ ಸರ್ಕಾರವು ಪಡೆದ ಈ ಅತ್ಯುತ್ತಮ ಲಾಭಾಂಶದ ನಂತರ, ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಮೋದಿ ಸರ್ಕಾರಕ್ಕೆ ಇದು ಸಹಕಾರಿಯಾಗಲಿದೆ. ಹಾಗೆ ನೋಡಿದರೆ, ಇದು ಚುನಾವಣಾ ವರ್ಷ, ಹೀಗಾಗಿ  ಜನಪರ ಘೋಷಣೆಗಳನ್ನು ಪೂರೈಸಲು ಸರ್ಕಾರಕ್ಕೆ ಈ ನಿಧಿಯ ಅವಶ್ಯಕತೆ ಇತ್ತು.


ಇದನ್ನೂ ಓದಿ-Credit-Debit Card ಗಳಿಂದ ಹಣ ಖರ್ಚು ಮಾಡುವ ನಿಯಮಗಳಲ್ಲಿ ಬದಲಾವಣೆ, ವಿತ್ತ ಸಚಿವಾಲಯದಿಂದ ಹೊಸ ನಿಯಮಗಳು ಜಾರಿ


ಗವರ್ನರ್ ಶಕ್ತಿಕಾಂತ ದಾಸ್ ಅವರಲ್ಲದೆ, ಉಪ ಗವರ್ನರ್‌ಗಳಾದ ಮಹೇಶ್ ಕುಮಾರ್ ಜೈನ್, ಮೈಕೆಲ್ ದೇಬಬ್ರತ ಪಾತ್ರ, ರಾಜೇಶ್ವರ್ ರಾವ್, ಟಿ ರಬಿ ಶಂಕರ್ ಆರ್‌ಬಿಐ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದರು. ಇದಲ್ಲದೆ ಮಂಡಳಿಯ ಇತರ ನಿರ್ದೇಶಕರಾದ ಸತೀಶ್ ಕೆ ಮರಾಠೆ, ರೇವತಿ ಅಯ್ಯರ್, ಸಚಿನ್ ಚತುರ್ವೇದಿ, ಆವಂದ್ ಮಹೀಂದ್ರಾ, ಪಂಕಜ್ ರಮಣಭಾಯ್ ಪಟೇಲ್ ಮತ್ತು ರವೀಂದ್ರ ಧೋಲಾಕಿಯಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಸರ್ಕಾರದ ಪರವಾಗಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಸಭೆಯಲ್ಲಿ ಭಾಗವಹಿಸಿದ್ದರು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ