ನವದೆಹಲಿ: ದೇಶದ 13 ಬ್ಯಾಂಕ್‌ಗಳ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬ್ಯಾಂಕ್‌ಗಳಲ್ಲಿ ನೀವು ಸಹ ಖಾತೆ ಹೊಂದಿದ್ದರೆ ಈ ಸುದ್ದಿಯನ್ನು ಓದಲೇಬೇಕು. ಇದು ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋದನ್ನು ತಿಳಿಯಿರಿ. ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸಲು ಆರ್‌ಬಿಐ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಆರ್‌ಬಿಐ ದೇಶದ 13 ಸಹಕಾರಿ ಬ್ಯಾಂಕ್‌ಗಳಿಗೆ ದಂಡ ವಿಧಿಸಿದೆ. ಇವುಗಳಲ್ಲಿ ಯಾವ ಬ್ಯಾಂಕ್‌ಗಳಿವೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಬ್ಯಾಂಕ್‍ಗಳಿಗೆ ದಂಡ ಏಕೆ?


ವಿವಿಧ ನಿಯಂತ್ರಕ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಈ ಬ್ಯಾಂಕ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಈ ಬ್ಯಾಂಕ್ ಗಳಿಗೆ 50 ಸಾವಿರ ರೂ.ನಿಂದ 4 ಲಕ್ಷ ರೂ.ವರೆಗೆ ದಂಡ ವಿಧಿಸಲಾಗಿದೆ. ಮಹಾರಾಷ್ಟ್ರದ ಚಂದ್ರಾಪುರ ಶ್ರೀ ಕನ್ಯಕಾ ನಗರಿ ಸಹಕಾರಿ ಬ್ಯಾಂಕ್‍ಗೆ ಗರಿಷ್ಠ ದಂಡ  ವಿಧಿಸಲಾಗಿದೆ. ಆರ್‌ಬಿಐ ಈ ಬ್ಯಾಂಕ್‌ಗೆ 4 ಲಕ್ಷ ರೂ. ದಂಡ ವಿಧಿಸಿದೆ.


ಇದನ್ನೂ ಓದಿ: LIC ಈ ಯೋಜನೆಯಲ್ಲಿ ನಿತ್ಯ ಕೇವಲ ರೂ.110 ಹೂಡಿಕೆ ಮಾಡಿ, ಮೂರು ಪಟ್ಟು ರಿಟರ್ನ್ ಪಡೆಯಿರಿ


ಈ ಬ್ಯಾಂಕಿಗೆ 2.50 ಲಕ್ಷ ರೂ. ದಂಡ


ಇದಲ್ಲದೇ ಮಹಾರಾಷ್ಟ್ರದ ಬೀಡ್‍ನ ವೈದ್ಯನಾಥ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ಆರ್‍ಬಿಐ 2.50 ಲಕ್ಷ ರೂ. ದಂಡ ವಿಧಿಸಿದೆ.


ಈ ಬ್ಯಾಂಕ್‌ಗಳಿಗೆ 1.50 ಲಕ್ಷ ರೂ. ದಂ


ಇದಲ್ಲದೇ ಸತಾರಾದ ವೈ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಇಂದೋರ್ ಪ್ರೀಮಿಯರ್ ಕೋ-ಆಪರೇಟಿವ್ ಬ್ಯಾಂಕ್‌ಗೆ ತಲಾ 2 ಲಕ್ಷ ರೂ. ದಂಡವನ್ನು ಆರ್‌ಬಿಐ ವಿಧಿಸಿದೆ. ಅದೇ ರೀತಿ ಮೇಘಾಲಯದ ಪಟಾನ್ ನಗರ್ ಸಹಕಾರಿ ಬ್ಯಾಂಕ್, ಪಟಾನ್ ಮತ್ತು ತುರಾ ಅರ್ಬನ್ ಕೋಆಪರೇಟಿವ್ ಬ್ಯಾಂಕ್‌ಗೆ 1.50 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.


ಸಂಪೂರ್ಣ ಪಟ್ಟಿ ಪರಿಶೀಲಿಸಿ


ಈ ಬ್ಯಾಂಕ್‍ಗಳ ಹೊರತಾಗಿ ಜಗದಲ್ಪುರ್‍ನ ನಗ್ರಿಕ್ ಸಹಕಾರಿ ಬ್ಯಾಂಕ್ ಮರ್ಯಾದಿತ್, ಅಮರಾವತಿಯ ಜಿಜೌ ವಾಣಿಜ್ಯ ಸಹಕಾರಿ ಬ್ಯಾಂಕ್, ಕೋಲ್ಕತ್ತಾದ ಪೂರ್ವ ಮತ್ತು ಈಶಾನ್ಯ ಫ್ರಾಂಟಿಯರ್ ರೈಲ್ವೆ ಕೋ-ಆಪರೇಟಿವ್ ಬ್ಯಾಂಕ್, ಛತ್ತರ್‌ಪುರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್, ರಾಯ್‌ಗಢದ ನಾಗರಿಕ್ ಸಹಕಾರಿ ಬ್ಯಾಂಕ್ ಮರ್ಯಾದಿತ್, ಬಿಲಾಸ್ಪುರ್‍ದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ ಮತ್ತು ಶಾಹದೋಲ್‍ನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಭಾರೀ ದಂಡ ವಿಧಿಸಲಾಗಿದೆ.


ಇದನ್ನೂ ಓದಿ: Affordable Cars: 2 ರಿಂದ 4 ಲಕ್ಷ ರೂ.ಗಳಲ್ಲಿ ಲಭ್ಯವಿರುವ ಕಾರುಗಳಿವು


ದಂಡಕ್ಕೆ ಪ್ರಮುಖ ಕಾರಣವೇನು?


ವಿವಿಧ ನಿಯಂತ್ರಕ ಅನುಸರಣೆಗಳ ಕೊರತೆಯೇ ಈ ಎಲ್ಲಾ ಬ್ಯಾಂಕ್‌ಗಳ ವಿರುದ್ಧ ಕ್ರಮಕ್ಕೆ ಪ್ರಮುಖ ಕಾರಣ. ಈ ಕಾರಣದಿಂದ ಬ್ಯಾಂಕ್‍ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.ಇದಲ್ಲದೇ ಗ್ರಾಹಕರೊಂದಿಗೆ ನಡೆಸಿದ ವಹಿವಾಟಿಗೂ ಈ ದಂಡಕ್ಕೂ ಯಾವುದೇ ಸಂಬಂಧವಿಲ್ಲವೆಂದು ಆರ್‌ಬಿಐ ಹೇಳಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.