Reserve Bank (RBI): ಆಟೋ ಡೆಬಿಟ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ರಿಸರ್ವ್ ಬ್ಯಾಂಕ್ OTP ಆಧಾರಿತ ಪುನರಾವರ್ತಿತ ಪಾವತಿ ಮಿತಿಯನ್ನು 15000 ರೂ.ಗೆ ಹೆಚ್ಚಿಸಿದೆ. ಅಂದರೆ ಈಗ ಒಟಿಪಿ ಇಲ್ಲದೆಯೇ 15 ಸಾವಿರ ರೂ.ವರೆಗಿನ ಆಟೋ ಡೆಬಿಟ್ ಆಗಲಿದೆ. ಅದಕ್ಕಿಂತ ಹೆಚ್ಚಿನ ಆಟೋ ಡೆಬಿಟ್ ವಹಿವಾಟುಗಳಿಗೆ OTP ಕಡ್ಡಾಯವಾಗಿರಲಿದೆ. ಇಂತಹ ವಹಿವಾಟುಗಳನ್ನು ಸಾಮಾನ್ಯವಾಗಿ ಪುನರಾವರ್ತಿತ ಪಾವತಿ ಎಂದು ಕರೆಯಲಾಗುತ್ತದೆ. ಇದರ ಮಿತಿಯನ್ನು 5000 ರಿಂದ 15000 ಕ್ಕೆ ಹೆಚ್ಚಿಸಲಾಗಿದೆ. ಈ ಕುರಿತು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಇತ್ತೀಚೆಗೆ ಮಂಡಿಸಿದ್ದ ತಮ್ಮ ಹಣಕಾಸು ನೀತಿಯ ಸಂದರ್ಭದಲ್ಲಿ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಯಾವ ವಹಿವಾಟುಗಳಿಗೆ ಇ-ಮ್ಯಾಂಡೇಟ್ ಅಗತ್ಯ?
OTT ಚಂದಾದಾರಿಕೆ ಶುಲ್ಕ ಪುನರಾವರ್ತಿತ ಪಾವತಿಯಂತಹ ವಹಿವಾಟುಗಳಿಗೆ ಈ ಮೊದಲು ಇದ್ದ ಮಿತಿಯನ್ನು ಹೆಚ್ಚಿಸಲಾಗಿದೆ. ಆದರೆ, ಗ್ರಾಹಕರು ಆಟೋ ಡೆಬಿಟ್ ವಹಿವಾಟಿನ 24 ಗಂಟೆಗಳ ಮೊದಲು ಡೆಬಿಟ್ ಬಗ್ಗೆ ಮಾಹಿತಿ ನೀಡಬೇಕು ಎಂಬ ನಿಯಮ ಇನ್ನೂ ಮುಂದುವರೆಯಲಿದ್ದು, ಪಾವತಿಯ ಮಿತಿಯನ್ನು 5000 ರಿಂದ 15000 ಕ್ಕೆ ಹೆಚ್ಚಿಸಲಾಗಿದೆ. ಸ್ವಯಂ ಡೆಬಿಟ್‌ನ ಇ-ಮ್ಯಾಂಡೇಟ್ ಅನ್ನು ಜನರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಜೊತೆಗೆ UPI ಇಂಟರ್ಫೇಸ್‌ನಲ್ಲಿ ಹೆಚ್ಚಾಗಿ ಅನ್ವಯಿಸುತ್ತಾರೆ. ಅಕ್ಟೋಬರ್ 1, 2021 ರಂದು, RBI ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು ಮತ್ತು UPI ನಿಂದ ಪುನರಾವರ್ತಿತ ಪಾವತಿಗಳಿಗೆ (ಸ್ವಯಂ-ಡೆಬಿಟ್ ಆದೇಶಗಳು) OTP ದೃಢೀಕರಣವನ್ನು ಕಡ್ಡಾಯಗೊಳಿಸಿದೆ. ಮಾಸಿಕ ಆಧಾರದ ಮೇಲೆ ಆಟೋ ಮೋಡ್‌ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ.


ಗ್ರಾಹಕರು ಹೇಗೆ ಪ್ರಯೋಜನ ಪಡೆಯುತ್ತಾರೆ?
ಪುನರಾವರ್ತಿತ ಪಾವತಿಗಾಗಿ OTP ಮಿತಿ 15000 ರೂ.ಗೆ ಹೆಚ್ಚಾಗುವುದರಿಂದ ಗ್ರಾಹಕರಿಗೆ ಭಾರಿ ಪ್ರಯೋಜನವಾಗಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ಗ್ರಾಹಕರ ಅನುಕೂಲ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಿಸರ್ವ್ ಬ್ಯಾಂಕ್ ಕಳೆದ ವರ್ಷ ಇದನ್ನು ಜಾರಿಗೊಳಿಸಿತ್ತು. ಪುನರಾವರ್ತಿತ ಪಾವತಿ ಸೇವೆಯ ಸಹಾಯದಿಂದ, ನೀವು ಮಾಸಿಕ ಚಂದಾದಾರಿಕೆ, ಇಂಟರ್ನೆಟ್ ರೀಚಾರ್ಜ್, ವಿಮಾ ಪ್ರೀಮಿಯಂ ಠೇವಣಿ ಮಾಡುವುದು, ಶಿಕ್ಷಣ ಶುಲ್ಕವನ್ನು ಠೇವಣಿ ಮಾಡುವುದು ಮುಂತಾದ ಕೆಲಸಗಳನ್ನು ಮಾಡಬಹುದು. ಇದರ ಮಿತಿಯನ್ನು 15 ಸಾವಿರಕ್ಕೆ ಹೆಚ್ಚಾಗುವುದರಿಂದ ಗ್ರಾಹಕರು ಸ್ವಲ್ಪ ದೊಡ್ಡ ವಹಿವಾಟುಗಳನ್ನು ನಡೆಸಲು ಸಾಧ್ಯವಾಗಲಿದೆ. ರಿಸರ್ವ್ ಬ್ಯಾಂಕ್ ಪ್ರಕಾರ, ಇದುವರೆಗೆ 6.25 ಕೋಟಿ ಆದೇಶಗಳನ್ನು ನೋಂದಾಯಿಸಲಾಗಿದೆ. ಇದು 3400 ಅಂತರಾಷ್ಟ್ರೀಯ ವ್ಯಾಪಾರಿಗಳನ್ನು ಸಹ ಒಳಗೊಂಡಿದೆ.


ಇದನ್ನೂ ಓದಿ-Swiss Bank: ಸ್ವಿಸ್ ಬ್ಯಾಂಕಿನಲ್ಲಿದೆ ಭಾರತೀಯರ 30,600 ಕೋಟಿ ರೂ. ಹಣ


ನಿಯಮವು 1 ಅಕ್ಟೋಬರ್ 2021 ರಿಂದ ಅನ್ವಯಿಸುತ್ತದೆ
ಭಾರತೀಯ ರಿಸರ್ವ್ ಬ್ಯಾಂಕ್ 1 ಅಕ್ಟೋಬರ್ 2021 ರಂದು ಆಟೋ ಡೆಬಿಟ್ ನಿಯಮಗಳನ್ನು ಜಾರಿಗೆ ತಂದಿತು. ಪಾವತಿಯ ದಿನಕ್ಕೆ ಕನಿಷ್ಠ 24 ಗಂಟೆಗಳ ಮೊದಲು ಗ್ರಾಹಕರಿಗೆ ಸ್ವಯಂ ಡೆಬಿಟ್ ಕುರಿತು ಸಂದೇಶವನ್ನು ಕಳುಹಿಸುವುದು ಅನಿವಾರ್ಯವಾಗಿದೆ. ನೀವೂ ಕೂಡ ನಿಮ್ಮ ಮೊಬೈಲ್‌ನಲ್ಲಿ BHIM ಆಟೋ ಪೇ ಸಿಸ್ಟಮ್ ಅನ್ನು ಹೊಂದಿಸಲು ನೀವು ಬಯುತ್ತಿದ್ದರೆ, ನೀವು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನೀಡಿದ ಸೂಚನೆಗಳನ್ನು ಅನುಸರಿಸಬಹುದು. ಸ್ವಯಂ ಪಾವತಿ ವ್ಯವಸ್ಥೆಯನ್ನು ಸ್ಥಾಪಿಸಲು NPCI ಹಂತ ಹಂತವಾಗಿ ವಿಧಾನಗಳನ್ನು ನೀಡಿದೆ. ಈ ವಿಧಾನಗಳನ್ನು ಬಳಸಿಕೊಂಡು ನೀವು ನಿಮ್ಮ ಮೊಬೈಲ್‌ನಲ್ಲಿ BHIM ಸ್ವಯಂ ಪಾವತಿಯನ್ನು ಸಹ ಹೊಂದಿಸಬಹುದು.


ಇದನ್ನೂ ಓದಿ-Edible Oil Price : ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರೀ ಇಳಿಕೆ .. !


BHIM UPI ಅಪ್ಲಿಕೇಶನ್‌ನಲ್ಲಿ ಸ್ವಯಂ ಪಾವತಿಯನ್ನು ಹೊಂದಿಸುವುದು ಹೇಗೆ?
>> ಇದಕ್ಕಾಗಿ ಮೊದಲು BHIM UPI ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ.
>> ನಂತರ ಆಟೋ ಡೆಬಿಟ್ ಮೇಲೆ ಕ್ಲಿಕ್ ಮಾಡಿ.
>> ಬಳಿಕ ಆದೇಶದ ಮೇಲೆ ಕ್ಲಿಕ್ ಮಾಡಿ.
>> ಹೊಸ ಆದೇಶವನ್ನು ರಚಿಸಿ/ಹಿಂದಿನ ಆದೇಶವನ್ನು ಪರಿಶೀಲಿಸಿ ಮೇಲೆ ಕ್ಲಿಕ್ಕಿಸಿ.
>> ಮಾಸಿಕ, ಸಾಪ್ತಾಹಿಕ, ವಾರ್ಷಿಕ ಅಥವಾ ಯಾವುದೇ ಇತರ ಮೋಡ್‌ನಲ್ಲಿ ಹಣ ಪಾವತಿಸಬೇಕು ಎಂಬುದನ್ನು ಹೊಂದಿಸಿ.
>> ಹಣ ಪಾವತಿ ಮಾಡಲು ಕಂಪನಿಗೆ (ವ್ಯಾಪಾರಿ) ಸ್ವಯಂ ಡೆಬಿಟ್ ದಿನಾಂಕವನ್ನು ನಮೂದಿಸಿ.
>> ಕೊನೆಗೆ Proceed ಆಯ್ಕೆಯ ಮೇಲೆ ಕ್ಲಿಕ್ ಮಾಡಿ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.