Cooperative Banks License: ನಿಯಮಗಳ ಅನುಸರಣೆಯಲ್ಲಿ ನಿರ್ಲಕ್ಷ್ಯಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್  ಮತ್ತೊಂದು ಬ್ಯಾಂಕ್‌ನ ಪರವಾನಗಿಯನ್ನು ರದ್ದುಗೊಳಿಸಿದೆ. ಈ ಬಾರಿ ಯುಪಿಯ ಸಹಕಾರಿ ಬ್ಯಾಂಕ್ ಯುನೈಟೆಡ್ ಇಂಡಿಯಾ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಪರವಾನಗಿಯನ್ನು ಆರ್‌ಬಿಐ ರದ್ದುಗೊಳಿಸಿದೆ. ಅಲ್ಲದೆ, ಈ ಒಂದು ತಿಂಗಳಲ್ಲಿ ಕರ್ನಾಟಕದ ಎರಡು ಬ್ಯಾಂಕ್ ಸೇರಿ ಇನ್ನು ಹಲವು ಬ್ಯಾಂಕ್ ಗಳ ಪರಾವನಿಗೆ ರದ್ದು ಮಾಡಿದೆ. ಬ್ಯಾಂಕ್ ಸಾಕಷ್ಟು ಬಂಡವಾಳವನ್ನು ಹೊಂದಿಲ್ಲ ಮತ್ತು ಗಳಿಕೆಯ ಸಾಮರ್ಥ್ಯ ಕಡಿಮೆ ಇರುವ ಕಾರಣ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. 


COMMERCIAL BREAK
SCROLL TO CONTINUE READING

ಹಣ  ಠೇವಣಿ ಮಾಡಿದ ಗ್ರಾಹಕನ ಗತಿ ಏನು ? : 
ಪರವಾನಗಿ ರದ್ದತಿಯಿಂದಾಗಿ ಬುಧವಾರ ಸಂಜೆಯಿಂದ ಬ್ಯಾಂಕ್ ವ್ಯವಹಾರ ನಡೆಸುವಂತಿಲ್ಲ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಯಿಂದ ವಿಮಾ ಕ್ಲೈಮ್ ಅಡಿಯಲ್ಲಿ ಪ್ರತಿಯೊಬ್ಬ ಠೇವಣಿದಾರನು 5 ಲಕ್ಷ ರೂಪಾಯಿ ಮಿತಿಯವರೆಗೆ ಹಣವನ್ನು ಸ್ವೀಕರಿಸಲು ಅರ್ಹನಾಗಿರುತ್ತಾನೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿದ ಪ್ರತಿಯೊಬ್ಬ ಖಾತೆದಾರನ 5 ಲಕ್ಷದವರೆಗಿನ ಠೇವಣಿಗಳ ಮೇಲೆ ಡಿಐಸಿಜಿಸಿ ವಿಮೆ ಮಾಡುತ್ತದೆ.  ವಾಣಿಜ್ಯ ಬ್ಯಾಂಕುಗಳು, ಸ್ಥಳೀಯ ಪ್ರದೇಶದ ಬ್ಯಾಂಕುಗಳು, ಪ್ರಾದೇಶಿಕ ಮತ್ತು ಸಹಕಾರಿ ಬ್ಯಾಂಕುಗಳು ಸೇರಿದಂತೆ ಎಲ್ಲಾ ಬ್ಯಾಂಕುಗಳ ಠೇವಣಿಗಳನ್ನು ಡಿಐಸಿಜಿಸಿಯ ವಿಮಾ ಯೋಜನೆಯಡಿ ಒಳಗೊಂಡಿದೆ.


ಇದನ್ನೂ ಓದಿ : Modi Government: ಟೊಮೆಟೊ ದರಕ್ಕೆ ಸಂಬಂಧಿಸಿದಂತೆ ಶ್ರೀಸಾಮಾನ್ಯರಿಗೆ ಮತ್ತೊಂದು ನೆಮ್ಮದಿಯ ಸುದ್ದಿ ನೀಡಿದ ಕೇಂದ್ರ ಸರ್ಕಾರ!


ಇದುವರೆಗೆ 5 ಸಹಕಾರಿ ಬ್ಯಾಂಕ್‌ಗಳ ಪರವಾನಗಿ ರದ್ದು :
ಪ್ರಸಕ್ತ ಹಣಕಾಸು ವರ್ಷದಲ್ಲಿ, ಐದು ಸಹಕಾರಿ ಬ್ಯಾಂಕ್‌ಗಳ ಪರವಾನಗಿಯನ್ನು ಆರ್‌ಬಿಐ ಇದುವರೆಗೆ ರದ್ದುಗೊಳಿಸಿದೆ. ಜುಲೈ ತಿಂಗಳಿನಲ್ಲಿಯೇ ಎಲ್ಲಾ ಐದು ಬ್ಯಾಂಕ್‌ಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಈ ಹಿಂದೆ ಜುಲೈ 11 ರಂದು ಕರ್ನಾಟಕದ ತುಮಕೂರಿನ ಶ್ರೀ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಮತ್ತು ಮಹಾರಾಷ್ಟ್ರದ ಸತಾರಾದಲ್ಲಿರುವ ಹರಿಹರೇಶ್ವರ ಬ್ಯಾಂಕ್ ವಿರುದ್ಧ ಕೇಂದ್ರ ಬ್ಯಾಂಕ್ ಕ್ರಮ ಕೈಗೊಂಡಿತ್ತು. ಮತ್ತೊಂದೆಡೆ, ಜುಲೈ 5 ರಿಂದ, ಬುಲ್ಧಾನ ಮೂಲದ ಮಲ್ಕಾಪುರ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮತ್ತು ಬೆಂಗಳೂರು ಮೂಲದ ಸುಶ್ರುತಿ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತ ಬ್ಯಾಂಕಿಂಗ್ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ.


ಇದನ್ನೂ ಓದಿ : ಜುಲೈ 20ಕ್ಕೆ ಹೊರಬೀಳಲಿದೆಯಾ ಈ ನಿರ್ಧಾರ? ಲಕ್ಷಾಂತರ ಜನರಿಗೆ ಸಿಗಲಿದೆ ಅದರ ಲಾಭ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.