ಬೆಂಗಳೂರು: ನಿಮ್ಮ ಬಳಿಯೂ ಕೂಡ ರೂ. 2000 ನೋಟುಗಳು ಇನ್ನೂ ಇದ್ದು, ಮುಂದೆ ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ, ಟೆನ್ಷನ್ ಬಿಟ್ಟು ಈ ಸುದ್ದಿಯನ್ನು ಓದಿ. ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ರೂ.2000 ನೋಟುಗಳ ಬದಲಾವಣೆಗೆ ಈ ಮೊದಲು ನೀಡಿದ್ದ ಗಡುವನ್ನು ವಿಸ್ತರಿಸಿದೆ. ಇನ್ಮುಂದೆ ನೀವು ಅಕ್ಟೋಬರ್ 7, 2023 ರವರೆಗೆ ನಿಮ್ಮ ಬಳಿ ಇರುವ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಅಂದರೆ ಈ ಗಡುವನ್ನು ಆರ್ಬಿಐ ಒಂದು ವಾರಗಳ ಕಾಲ ವಿಸ್ತರಿಸಿದೆ. 


COMMERCIAL BREAK
SCROLL TO CONTINUE READING

ಗಡುವು ವಿಸ್ತರಣೆಗೆ ಬೇಡಿಕೆ ಇತ್ತು
ಈ ಹಿಂದೆ ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ 30 ರವರೆಗೆ ಅಂದರೆ ಇಂದಿನವರೆಗೆ 2000 ರೂಪಾಯಿ ನೋಟು ಠೇವಣಿ ಮಾಡಲು ಅಥವಾ ಬದಲಾಯಿಸಲು ಸಮಯ ನೀಡಿತ್ತು. ರಿಸರ್ವ್ ಬ್ಯಾಂಕ್ ಈ ಗಡುವನ್ನು ವಿಸ್ತರಿಸಬಹುದು ಎಂಬ ಊಹಾಪೋಹಗಳಿದ್ದವು. ಅದರಲ್ಲೂ ಅನಿವಾಸಿ ಭಾರತೀಯರಿಗೆ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಹೆಚ್ಚುವರಿ ಸಮಯ ನೀಡಬೇಕೆಂಬ ಬೇಡಿಕೆ ಇತ್ತು. ಕಾರಣಾಂತರಗಳಿಂದ ಬ್ಯಾಂಕ್‌ಗಳಲ್ಲಿ 2000 ರೂಪಾಯಿ ನೋಟುಗಳನ್ನು ಠೇವಣಿ ಇಡಲು ಅಥವಾ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತಿದ್ದ ಜನರಿಗೆ ರಿಸರ್ವ್ ಬ್ಯಾಂಕ್‌ನ ಈ ನಿರ್ಧಾರ ಭಾರಿ ನೆಮ್ಮದಿಯನ್ನೇ ನೀಡಲಿದೆ. 


ಈ ಮಾಹಿತಿ ನೀಡಿದ ರಿಸರ್ವ್ ಬ್ಯಾಂಕ್ 
ಪರಿಶೀಲನೆಯ ಆಧಾರದ ಮೇಲೆ ಒಂದು ವಾರ ಹೆಚ್ಚುವರಿ ಸಮಯಾವಕಾಶವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ ಸೆಪ್ಟೆಂಬರ್ 30 ರಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ರಿಸರ್ವ್ ಬ್ಯಾಂಕ್ ಬಿಡುಗಡೆಯಲ್ಲಿ, ಹಿಂಪಡೆಯುವ ಪ್ರಕ್ರಿಯೆಗೆ ನಿಗದಿತ ಸಮಯವು ಕೊನೆಗೊಳ್ಳಲಿದೆ. ಪರಿಶೀಲನೆಯ ಆಧಾರದ ಮೇಲೆ, 2000 ರೂ ನೋಟುಗಳನ್ನು ಠೇವಣಿ ಮಾಡುವ ಅಥವಾ ಬದಲಾಯಿಸುವ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಅಕ್ಟೋಬರ್ 7, 2023 ರವರೆಗೆ ನಿರ್ವಹಿಸಬೇಕು ಎಂದು ನಿರ್ಧರಿಸಲಾಗಿದೆ ಎಂದು ತಿಳಿಯಪಡಿಸಿದೆ.


ಮತ್ತೊಂದು ಮಹತ್ವದ ಬದಲಾವಣೆ
ಆದರೆ, ಪ್ರಸ್ತುತ ರಿಸರ್ವ್ ಬ್ಯಾಂಕ್ ಬದಲಾವಣೆ ಮಾಡಿದೆ. ಇಲ್ಲಿಯವರೆಗೆ ಅಂದರೆ ಸೆ.30ರವರೆಗೆ ಯಾವುದೇ ಬ್ಯಾಂಕ್ ಶಾಖೆಯಲ್ಲಿ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದಾಗಿದ್ದು, ಬ್ಯಾಂಕ್ ಶಾಖೆಗೆ ತೆರಳಿ ಜನರು ತಮ್ಮ ಖಾತೆಗೆ ಹಣ ಜಮಾ ಮಾಡಬಹುದಾಗಿದ್ದು, ಇನ್ಮುಂದೆ ಈ ವ್ಯವಸ್ಥೆ ಇರುವುದಿಲ್ಲ. ಈಗ ಆರ್‌ಬಿಐನ 19 ಸಂಚಿಕೆ ಕಚೇರಿಗಳಲ್ಲಿ ಮಾತ್ರ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ. ರಿಸರ್ವ್ ಬ್ಯಾಂಕ್‌ನ ಈ 19 ಕಚೇರಿಗಳಲ್ಲಿ ಜನರು 2000 ರೂಪಾಯಿ ನೋಟುಗಳನ್ನು ತಮ್ಮ ಖಾತೆಗಳಲ್ಲಿ ಜಮಾ ಮಾಡಬಹುದು.


ಇದನ್ನೂ ಓದಿ-ಕೇವಲ ಒಂದು ಲಕ್ಷ ರೂ.ಗಳಲ್ಲಿ ಈ ತಳಿಯ ಸವತೆಕಾಯಿ ವ್ಯವಸಾಯ ಪ್ರಾರಂಭಿಸಿ ತಿಂಗಳಿಗೆ ಕೈತುಂಬಾ ಸಂಪಾದಿಸಿ!


ಮಿತಿಯು ಹಾಗೇ ಇರುತ್ತದೆ
ಬದಲಾಯಿಸಬಹುದಾದ ನೋಟುಗಳ ಗಬದಲಾಯಿಸಿಕೊಳ್ಳಬಹುದುರಿಷ್ಠ ಮಿತಿಯು ಈ ಮೊದಲಿನಂತೆಯೇ ಮುಂದುವರೆಯಲಿದೆ. ಅಂದರೆ ಒಂದೇ ಬಾರಿಗೆ ಗರಿಷ್ಠ 20,000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಅಂದರೆ ನೀವು ಒಂದು ಬಾರಿಗೆ 2000 ರೂಪಾಯಿಯ 10 ನೋಟುಗಳನ್ನು ಮಾತ್ರ ಬದಲಾಯಿಸಬಹುದು.


ಇದನ್ನೂ ಓದಿ-SIP ನಲ್ಲಿ ಮುಂದೇನು ಮಾಡಬೇಕು? ಮ್ಯೂಚ್ವಲ್ ಫಂಡ್ ಗಳಲ್ಲಿ ಹೊಸ ಅವಕಾಶ ಸೃಷ್ಟಿಯಾಗುತ್ತಿದೆ, ತಜ್ಞರು ಏನೆನ್ನುತ್ತಾರೆ?


ಅಂಚೆ ಮೂಲಕ ಕಳುಹಿಸುವ ಸೌಲಭ್ಯ
ಇದಲ್ಲದೆ, ಅಂಚೆ ಮೂಲಕ ನೋಟುಗಳನ್ನು ಕಳುಹಿಸುವ ಸೌಲಭ್ಯವನ್ನು ಕೇಂದ್ರ ಬ್ಯಾಂಕ್ ಜನರಿಗೆ ನೀಡಿದೆ. ಭಾರತದಲ್ಲಿ ವಾಸಿಸುವ ಜನರು 2000 ರೂಪಾಯಿ ನೋಟುಗಳನ್ನು ದೇಶದ ಯಾವುದೇ ಭಾಗದಿಂದ ರಿಸರ್ವ್ ಬ್ಯಾಂಕ್‌ನ ಯಾವುದೇ 19 ಸಂಚಿಕೆ ಕಚೇರಿಗಳಿಗೆ ಅಂಚೆ ಮೂಲಕ ಕಳುಹಿಸಬಹುದು, ಅದನ್ನು ಅವರ ಬ್ಯಾಂಕ್ ಖಾತೆಗೆ ಠೇವಣಿ ಮಾಡಲಾಗುತ್ತದೆ. ಈ ಸೌಲಭ್ಯವನ್ನು ಪಡೆಯಲು, ನೀವು ರಿಸರ್ವ್ ಬ್ಯಾಂಕ್ ನಿರ್ದಿಷ್ಟಪಡಿಸಿದ ಗುರುತಿನ ಚೀಟಿ/ದಾಖಲೆಗಳನ್ನು ಸಹ ಒದಗಿಸಬೇಕಾಗುತ್ತದೆ.

ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.