RBL Bank Limited: ಈ ಹಿಂದೆ ನಿಯಮಗಳನ್ನು ಅನುಸರಿಸದ ಹಿನ್ನಲೆಯಲ್ಲಿ ಎಚ್‌ಡಿಎಫ್‌ಸಿ ಲಿಮಿಟೆಡ್‌ಗೆ (ಎಚ್‌ಡಿಎಫ್‌ಸಿ ಲಿ.) ದಂಡ ವಿಧಿಸಿದ್ದ ಭಾರತೀಯ  ರಿಸರ್ವ್ ಬ್ಯಾಂಕ್(ಆರ್‌ಬಿ‌ಐ)  ಇದೀಗ ಮತ್ತೊಂದು ದೈತ್ಯ ಬ್ಯಾಂಕ್‌ಗೆ ₹ 2.27 ಕೋಟಿ ದಂಡ ವಿಧಿಸಿದೆ. ವಾಸ್ತವವಾಗಿ,  ಸಾಲ ವಸೂಲಾತಿ ಏಜೆಂಟ್‌ಗಳ ಮೇಲಿನ ಕೆಲವು ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ ಆರ್‌ಬಿ‌ಎಲ್  ಬ್ಯಾಂಕ್‌ಗೆ ಆರ್‌ಬಿ‌ಐ  ₹ 2.27 ಕೋಟಿ ದಂಡವನ್ನು ವಿಧಿಸಿದೆ. 


COMMERCIAL BREAK
SCROLL TO CONTINUE READING

ಆರ್‌ಬಿಎಲ್‌ಗೆ ದಂಡ ವಿಧಿಸಲು ಕಾರಣ?
ಮೊದಲೇ ತಿಳಿಸಿದಂತೆ ಖಾಸಗಿ ವಲಯದ ಸಾಲದಾತ ಆರ್‌ಬಿ‌ಎಲ್ ಬ್ಯಾಂಕ್‌ಗೆ ಸಾಲ ವಸೂಲಾತಿ ಏಜೆಂಟ್‌ಗಳ ಮೇಲಿನ ಕೆಲವು ನಿರ್ದೇಶನಗಳನ್ನು ಅನುಸರಿಸದ ಕಾರಣ ₹ 2.27 ಕೋಟಿ ವಿತ್ತೀಯ ದಂಡವನ್ನು ವಿಧಿಸಿದೆ ಎಂದು ಆರ್‌ಬಿ‌ಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 


ಇದನ್ನೂ ಓದಿ- Credit Card ಬಳಕೆದಾರರೇ ಎಚ್ಚರ, ನೀವೂ ಈ ತಪ್ಪುಗಳನ್ನು ಮಾಡಿದರೆ ಸಂಕಷ್ಟಕ್ಕೆ ಸಿಲುಕಬಹುದು


2018-19 ರಿಂದ 2021-22 ರ ಆರ್ಥಿಕ ವರ್ಷಗಳಲ್ಲಿ ಮುಂಬೈ ಮೂಲದ ಸಾಲದಾತರ ವಸೂಲಾತಿ ಏಜೆಂಟ್‌ಗಳ ವಿರುದ್ಧ ಸ್ವೀಕರಿಸಿದ ದೂರುಗಳನ್ನು ಪರಿಶೀಲಿಸಿದ ನಂತರ ಕೇಂದ್ರ ಬ್ಯಾಂಕ್ "ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು" ಗಮನಿಸಿ ಈ ನಿರ್ಧಾರ ಕೈಗೊಂಡಿದೆ ಎಂದು  ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.


ಆ ಅವಧಿಯಲ್ಲಿ ತಾನು ತೊಡಗಿಸಿಕೊಂಡಿರುವ ಸಾಲ ವಸೂಲಾತಿ ಏಜೆಂಟ್‌ಗಳು ಬೆದರಿಕೆ ಅಥವಾ ಕಿರುಕುಳವನ್ನು ಆಶ್ರಯಿಸದಂತೆ ಖಚಿತಪಡಿಸಿಕೊಳ್ಳಲು ಖಾಸಗಿ ವಲಯದ ಬ್ಯಾಂಕ್ ವಿಫಲವಾಗಿದೆ ಮತ್ತು ಏಜೆಂಟರನ್ನು ನೇಮಿಸಿಕೊಳ್ಳುವ ಮೊದಲು ಪೋಲೀಸ್ ಪರಿಶೀಲನೆಯನ್ನು ಖಚಿತಪಡಿಸಿಕೊಂಡಿಲ್ಲ ಎಂದು ಆರ್‌ಬಿಐ ಹೇಳಿದೆ.


ಈ ಕ್ರಮವು ಆರ್ಥಿಕ ವರ್ಷ 2018-19 ರಿಂದ ಆರ್ಥಿಕ ವರ್ಷ 2021-22 ರ ಅವಧಿಗೆ ಸಂಬಂಧಿಸಿದಂತೆ ಗಮನಿಸಿದ ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿದೆ. ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡಿರುವ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಆರ್‌ಬಿಐ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. 


ಇದನ್ನೂ ಓದಿ- ಪ್ಯಾನ್‌ ಕಾರ್ಡ್‌ದಾರರೇ ಗಮನಿಸಿ ಮಾರ್ಚ್ 31ರವರೆಗೆ ಈ ಕೆಲಸ ಮಾಡದಿದ್ದರೆ ಭಾರೀ ನಷ್ಟ


ವಾಸ್ತವವಾಗಿ, 2022 ರಲ್ಲಿ, ಆರ್‌ಬಿಐ ತಾನು ನಿಯಂತ್ರಿಸುವ ಹಣಕಾಸು ಸಂಸ್ಥೆಗಳಿಗೆ "ಅವರು ಅಥವಾ ಅವರ ಏಜೆಂಟ್‌ಗಳು ಯಾವುದೇ ರೀತಿಯ ಬೆದರಿಕೆ ಅಥವಾ ಕಿರುಕುಳವನ್ನು ಆಶ್ರಯಿಸುವುದಿಲ್ಲ ಎಂದು ಕಟ್ಟುನಿಟ್ಟಾಗಿ ಖಚಿತಪಡಿಸಿಕೊಳ್ಳಲು" ಸಲಹೆ ನೀಡಿತ್ತು. ಇದಲ್ಲದೆ,  ಆರ್‌ಬಿ‌ಐನ ಯಾವುದೇ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಹ 
ಸುತ್ತೋಲೆಯನ್ನು ಹೊರಡಿಸಿತ್ತು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ