RBI Guidelines: ಆನ್‌ಲೈನ್ ಪಾವತಿ  (Online Payment) ಮತ್ತು ಯುಪಿಐ ಪಾವತಿಯೊಂದಿಗೆ ಬ್ಯಾಂಕಿಂಗ್ (Banking) ಸೌಲಭ್ಯಗಳು ಸುಲಭವಾಗಿದ್ದರೂ, ಜನರು ಕೆಲವೊಮ್ಮೆ ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ತಪ್ಪಿನಿಂದಾಗಿ ನೀವು ಆನ್‌ಲೈನ್ ವಂಚನೆಗೆ  (Online fraud) ಬಲಿಯಾಗಬಹುದು ಅಥವಾ ಕೆಲವೊಮ್ಮೆ ಹಣ ಕಳುಹಿಸುವಾಗ ತಪ್ಪಾದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬಹುದು. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಅನ್ನು ಸುಲಭ ಮತ್ತು ಅನುಕೂಲಕರವಾಗಿಸಲು, ವಿಶೇಷವಾಗಿ ಆನ್‌ಲೈನ್ ಬ್ಯಾಂಕಿಂಗ್ ಮಾಡಲು ಮತ್ತು ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಹಲವು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಈ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. 


COMMERCIAL BREAK
SCROLL TO CONTINUE READING

ತಪ್ಪಾದ ಖಾತೆಗೆ ಹಣ ಟ್ರಾನ್ಸ್ಫರ್ ಆಗಿದೆಯೇ? ಅದನ್ನು ಈ ರೀತಿ ಮರಳಿ ಪಡೆಯಿರಿ:
ಆನ್‌ಲೈನ್ ಬ್ಯಾಂಕಿಂಗ್  (Online Banking) ಮೂಲಕ ಖಾತೆಗೆ ಹಣ ವರ್ಗಾಯಿಸುವಾಗ ಮಿಸ್ ಆಗಿ ನೀವು ಬೇರೆ ಖಾತೆಗೆ ಅಂದರೆ ತಪ್ಪಾದ ಖಾತೆಗೆ ಹಣ ಕಳುಹಿಸಿದ್ದರೆ, ಆ ಬಗ್ಗೆ ಚಿಂತಿಸಬೇಕಾಗಿಲ್ಲ. ಆರ್‌ಬಿಐ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಹಣವನ್ನು ಮರಳಿ ಪಡೆಯಬಹುದು. ನೀವು ಜಾಗರೂಕರಾಗಿರಲು ಈ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.


ಆರ್‌ಬಿಐ ಮಾರ್ಗಸೂಚಿಗಳು (RBI Guidelines): 
ಆರ್‌ಬಿಐ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈಗ ನೀವು ಎಟಿಎಂ, ಯುಪಿಐ ಅಥವಾ ನೆಟ್ ಬ್ಯಾಂಕಿಂಗ್‌ನಿಂದ (Net Banking) ಯಾವುದೇ ವಹಿವಾಟು ಮಾಡಲು ಬಯಸಿದರೆ, ನಿಮಗೆ ತಕ್ಷಣವೇ ಸಂದೇಶ ಬರುತ್ತದೆ, ಅದರಲ್ಲಿ ನೀವು ಸರಿಯಾದ ವಹಿವಾಟು ಮಾಡಿದ್ದೀರಾ ಅಥವಾ ತಪ್ಪಾಗಿ ಮಾಡಿದ್ದೀರಾ ಎಂದು ದೃಢೀಕರಿಸಲಾಗುತ್ತದೆ. ಈ ಸಂದೇಶದಲ್ಲಿ ನಿಮಗೆ ಫೋನ್ ಸಂಖ್ಯೆಯನ್ನು ಸಹ ನೀಡಲಾಗುತ್ತದೆ. ನೀವು ಆ ವಹಿವಾಟನ್ನು ತಪ್ಪಾಗಿ ಮಾಡಿದ್ದರೆ ಈ ಫೋನ್ ನಂಬರ್ ನಲ್ಲಿ ಈ ವ್ಯವಹಾರವನ್ನು ತಪ್ಪಾಗಿ ಮಾಡಲಾಗಿದೆ ಎಂದು ನೀವು ತಕ್ಷಣ ಹೇಳಬಹುದು. ನಿಮ್ಮ ಬ್ಯಾಂಕ್ ಇಂತಹ ಸಂದೇಶಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆರ್‌ಬಿಐ ನಿರ್ದೇಶಿಸಿದೆ.


ಇದನ್ನೂ ಓದಿ- How To Block Accounts: ಮೊಬೈಲ್ ಕಳೆದುಹೋದರೆ PhonePe, Google Pay ಮತ್ತು Paytm ಖಾತೆಗಳನ್ನು ಹೇಗೆ ನಿರ್ಬಂಧಿಸುವುದು?


ತಪ್ಪಾದ ಖಾತೆಗೆ ಹಣ ವರ್ಗಾವಣೆ ಆದರೆ ತಕ್ಷಣವೇ ಈ ಕೆಲಸವನ್ನು ಮಾಡಬೇಕು ...
ನೀವು ಎಂದಾದರೂ ತಪ್ಪಾಗಿ ಖಾತೆಗೆ ಹಣವನ್ನು ವರ್ಗಾಯಿಸಿದ್ದರೆ  (Money Transfer), ವಹಿವಾಟು ವಂಚನೆಯಿಂದ ಅಥವಾ ನಿಮ್ಮ ತಪ್ಪಿನಿಂದ ಮಾಡಲ್ಪಟ್ಟಿದೆಯೇ ಎಂಬ ಬಗ್ಗೆ ತಕ್ಷಣವೇ  ನಿಮ್ಮ ಬ್ಯಾಂಕ್‌ಗೆ ತಿಳಿಸಿ. ನೀವು ನಿಮ್ಮ ಬ್ಯಾಂಕ್‌ನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಬಹುದು ಅಥವಾ ನೀವೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ನೀಡಬಹುದು. ಯಾರ ಖಾತೆಗೆ ಹಣ ಹೋಗಿದೆ, ಅದರ ಬ್ಯಾಂಕ್ ಖಾತೆ, ದಿನಾಂಕ, ಸಮಯ ಇತ್ಯಾದಿ ಎಲ್ಲವನ್ನೂ ಇಲ್ಲಿ ನೀವು ಹೇಳಬೇಕಾಗುತ್ತದೆ. ನೀವು ಹಣವನ್ನು ರವಾನೆ ಮಾಡಿದ ಅಥವಾ ನಿಮ್ಮ ಹಣವನ್ನು ಸ್ವೀಕರಿಸುವವರನ್ನು ಬ್ಯಾಂಕ್ ಸಂಪರ್ಕಿಸಬಹುದು.


ನೀವು ಕ್ರಮ ತೆಗೆದುಕೊಳ್ಳಬಹುದು :
ನೀವು ತಪ್ಪಾಗಿ ಯಾರ ಖಾತೆಗಾದರೂ ಹಣವನ್ನು ಕಳುಹಿಸಿದ್ದರೆ ಮತ್ತು ಅವರು ಹಣವನ್ನು ಹಿಂದಿರುಗಿಸಲು ನಿರಾಕರಿಸಿದರೆ, ನೀವು ಕಾನೂನು ಕ್ರಮ ತೆಗೆದುಕೊಳ್ಳಬಹುದು. ನೀವು ಪ್ರಕರಣವನ್ನು ನ್ಯಾಯಾಲಯಕ್ಕೆ ತೆಗೆದುಕೊಳ್ಳಬೇಕು. ಆರ್‌ಬಿಐ ಕೂಡ ಇದನ್ನು ನಿರ್ದೇಶಿಸುತ್ತದೆ. ಆದರೆ, ಪ್ರಕರಣವು ಈಗ ನ್ಯಾಯಾಲಯದಲ್ಲಿ ಇತ್ಯರ್ಥವಾಗುವುದರಿಂದ ಈ ಪ್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ತಪ್ಪಾದ ಖಾತೆಗೆ ಹಣವನ್ನು ವರ್ಗಾಯಿಸಿದರೆ, ಹೊಣೆಗಾರಿಕೆಯು ನಿಮ್ಮದಾಗುತ್ತದೆ, ಈ ಸಂದರ್ಭದಲ್ಲಿ ಬ್ಯಾಂಕ್ ಕೂಡ ಅದರ ಹೊಣೆ ಹೊರುವುದಿಲ್ಲ.


ಇದನ್ನೂ ಓದಿ- Dhanteras 2021: ಧಂತೇರಾಸ್‌ನಲ್ಲಿ ಏನು ಖರೀದಿಸಬೇಕು, ಯಾವುದನ್ನು ಖರೀದಿಸಬಾರದು


ಅದೇ ಸಮಯದಲ್ಲಿ, ನೀವು ತಪ್ಪಾಗಿ ಸ್ವೀಕರಿಸುವವರ ಖಾತೆ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದರೆ ಮತ್ತು ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸಿದರೆ, ನಿಮ್ಮ ಹಣವನ್ನು ಸ್ವಯಂಚಾಲಿತವಾಗಿ ಮರಳಿ ಕ್ರೆಡಿಟ್ ಮಾಡಲಾಗುತ್ತದೆ. ಅದೇ ಸಮಯದಲ್ಲಿ, UPI ವಹಿವಾಟಿನ ಸಮಯದಲ್ಲಿ ನೀವು ತಪ್ಪು ಖಾತೆ ಸಂಖ್ಯೆಯನ್ನು ನಮೂದಿಸಿದ್ದರೆ, ನಂತರ ನಿಮ್ಮ ಹಣವನ್ನು ಕಡಿತಗೊಳಿಸಲಾಗುವುದಿಲ್ಲ ಏಕೆಂದರೆ ಈ ವಹಿವಾಟನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ