ಬ್ಯಾಂಕ್ ಲಾಕರ್ ನಿಯಮಗಳು: ಗ್ರಾಹಕರ ಸುರಕ್ಷತೆ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಿಸರ್ವ್ ಬ್ಯಾಂಕ್  (ಆರ್‌ಬಿಐ)  ಬ್ಯಾಂಕ್ ಲಾಕರ್‌ಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ. ನೀವು ಯಾವುದೇ ಬ್ಯಾಂಕಿನಲ್ಲಿ ಲಾಕರ್ ತೆಗೆದುಕೊಂಡು ಅದರಲ್ಲಿ ನಿಮ್ಮ ಚಿನ್ನ, ಬೆಳ್ಳಿ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಇಟ್ಟಿದ್ದರೆ ಖಂಡಿತಾ ಈ ಸುದ್ದಿಯನ್ನು ಓದಿ.


COMMERCIAL BREAK
SCROLL TO CONTINUE READING

ರಿಸರ್ವ್ ಬ್ಯಾಂಕ್ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಬ್ಯಾಂಕ್‌ನಲ್ಲಿ ಲಾಕರ್ ತೆಗೆದುಕೊಳ್ಳುವ ಗ್ರಾಹಕರ ದೂರಿನ ಮೇರೆಗೆ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಮಗಳನ್ನು ಬದಲಾಯಿಸಿದೆ. ಆಗಾಗ ಗ್ರಾಹಕರ ಕಡೆಯಿಂದ ಬ್ಯಾಂಕ್ ಲಾಕರ್‌ಗಳಲ್ಲಿ ಕಳ್ಳತನದ ದೂರುಗಳು ಬರುತ್ತಿವೆ. ಈಗ ಲಾಕರ್‌ನಿಂದ ಏನಾದರೂ ಕಳ್ಳತನವಾದರೆ, ಗ್ರಾಹಕರಿಗೆ ಸಂಬಂಧಪಟ್ಟ ಬ್ಯಾಂಕ್‌ನಿಂದ ಲಾಕರ್ ಬಾಡಿಗೆಯ 100 ಪಟ್ಟು ಪರಿಹಾರವನ್ನು ನೀಡಲಾಗುತ್ತದೆ.


ಇದನ್ನೂ ಓದಿ- ನೀವೂ ಪಾಸ್‌ಪೋರ್ಟ್ ಮಾಡಿಸಬೇಕೆ? ಆನ್‌ಲೈನ್‌ನಲ್ಲಿ ಈ ರೀತಿ ಅಪ್ಲೈ ಮಾಡಿ


ವೇಟಿಂಗ್ ಲಿಸ್ಟ್ ನಂಬರ್ ಅನ್ನು ಡಿಸ್ಪ್ಲೇಗೆ ಹಾಕಬೇಕಾಗುತ್ತದೆ:
ವಾಸ್ತವವಾಗಿ, ಕಳ್ಳತನದ ಘಟನೆಯನ್ನು ಬ್ಯಾಂಕ್‌ಗಳು ನಿರ್ಲಕ್ಷಿಸುತ್ತಿರುವುದು ಹಲವು ಬಾರಿ ಕಂಡುಬಂದಿದೆ. ಅಷ್ಟೇ ಅಲ್ಲ, ಬ್ಯಾಂಕ್ ಲಾಕರ್‌ನಲ್ಲಿ ಕಳುವಾದ ವಸ್ತುಗಳಿಗೆ ತಾವು ಯಾವುದೇ ರೀತಿಯಲ್ಲಿ ಜವಾಬ್ದಾರರಲ್ಲ ಎಂದು ಗ್ರಾಹಕರಿಗೆ ಹೇಳುವ ಬಗ್ಗೆಯೂ ಹಲವು ಬಾರಿ ವರದಿಗಳಾಗಿವೆ. ಆರ್‌ಬಿಐ ನೀಡಿರುವ ಆದೇಶದಲ್ಲಿ, ಬ್ಯಾಂಕ್‌ಗಳು ಖಾಲಿ ಲಾಕರ್‌ಗಳ ಪಟ್ಟಿ, ಲಾಕರ್‌ಗಾಗಿ ವೇಟಿಂಗ್ ಲಿಸ್ಟ್ ಸಂಖ್ಯೆಯನ್ನು ಡಿಸ್‌ಪ್ಲೇ ಮೇಲೆ ಹಾಕಬೇಕು ಎಂದು ಹೇಳಲಾಗಿದೆ. ಇದು ಲಾಕರ್ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆಯನ್ನು ತರುತ್ತದೆ. ಜೊತೆಗೆ ಇದರಿಂದ ಬ್ಯಾಂಕ್ ಗ್ರಾಹಕರನ್ನು ಕತ್ತಲಲ್ಲಿಡಲು ಸಾಧ್ಯವಾಗುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ.


ನೀವು ಒಮ್ಮೆಗೆ ಗರಿಷ್ಠ 3 ವರ್ಷಗಳವರೆಗೆ ಬಾಡಿಗೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ,
ನೀವು ಲಾಕರ್ ಅನ್ನು ಪ್ರವೇಶಿಸಿದಾಗಲೆಲ್ಲಾ, ಬ್ಯಾಂಕ್ ಮೂಲಕ ಇಮೇಲ್ ಮತ್ತು SMS ಮೂಲಕ ನಿಮಗೆ ಎಚ್ಚರಿಕೆ ನೀಡಲಾಗುತ್ತದೆ. ಯಾವುದೇ ರೀತಿಯ ವಂಚನೆಯಿಂದ ರಕ್ಷಿಸಲು ಆರ್‌ಬಿಐ ಈ ನಿಯಮವನ್ನು ಮಾಡಿದೆ. ಒಂದು ಬಾರಿಗೆ ಗರಿಷ್ಠ ಮೂರು ವರ್ಷಗಳ ಅವಧಿಗೆ ಲಾಕರ್ ಬಾಡಿಗೆಯನ್ನು ತೆಗೆದುಕೊಳ್ಳುವ ಹಕ್ಕು ಬ್ಯಾಂಕ್‌ಗಳಿಗೆ ಇದೆ. ಲಾಕರ್ ಬಾಡಿಗೆ ರೂ. 2000 ಆಗಿದ್ದರೆ, ಇತರ ನಿರ್ವಹಣಾ ಶುಲ್ಕಗಳನ್ನು ಹೊರತುಪಡಿಸಿ ಬ್ಯಾಂಕ್ ನಿಮಗೆ ರೂ. 6000 ಕ್ಕಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ.


ಇದನ್ನೂ ಓದಿ- ಹೆಚ್ಚಿನ ಲಾಭ ಪಡೆಯಲು ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ


ಲಾಕರ್ ಕೋಣೆಗೆ ಬರುವ ಮತ್ತು ಹೋಗುವವರ ಮೇಲೆ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡುವುದು ಸಹ ಅಗತ್ಯವಾಗಿದೆ. ಇದಲ್ಲದೇ 180 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸುರಕ್ಷಿತವಾಗಿಡಬೇಕಾಗುತ್ತದೆ. ಕಳ್ಳತನ ಅಥವಾ ಇನ್ನಾವುದೇ ಅನಾಹುತ ಸಂಭವಿಸಿದಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ತನಿಖೆ ನಡೆಸಲು ಸಾಧ್ಯವಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ