RBI MPC Meeting: ಆರ್‌ಬಿಐನ ಹಣಕಾಸು ನೀತಿ ಸಭೆ ಇಂದಿನಿಂದ ಅಂದರೆ ಏಪ್ರಿಲ್ 3ರಿಂದ ಆರಂಭವಾಗಲಿದೆ. ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ರೆಪೋ ದರವನ್ನು ಹೆಚ್ಚಿಸಲಿದೆಯೇ? ನಿಮ್ಮ ಮನೆಯ ಇಎಂಐ ಮತ್ತೆ ಹೆಚ್ಚಾಗಲಿದೆಯೇ? ಎಂಬುದು ಈ ಸಭೆ ಬಳಿಕ ತಿಳಿಯಲಿದೆ. ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಸಭೆಯಲ್ಲೂ ಆರ್ ಬಿಐ ಬಡ್ಡಿ ದರವನ್ನು ಹೆಚ್ಚಿಸಬಹುದು ಎಂಬುದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ವಿತ್ತೀಯ ಪರಾಮರ್ಶೆಯಲ್ಲಿ ರೆಪೊ ದರವನ್ನು ಮತ್ತೊಮ್ಮೆ ಶೇಕಡಾ 0.25 ರಷ್ಟು ಹೆಚ್ಚಿಸಲು ನಿರ್ಧರಿಸಬಹುದು ಎನ್ನಲಾಗುತ್ತಿದೆ. 


COMMERCIAL BREAK
SCROLL TO CONTINUE READING

ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯ (RBI MPC) ದ್ವೈಮಾಸಿಕ ಪರಿಶೀಲನಾ ಸಭೆಯು ಏಪ್ರಿಲ್ 3 ರಿಂದ ಪ್ರಾರಂಭವಾಗಲಿದೆ. ಈ ಮೂರು ದಿನಗಳ ಸಭೆಯು ಏಪ್ರಿಲ್ 6 ರಂದು ನೀತಿ ದರದ ನಿರ್ಧಾರದೊಂದಿಗೆ ಕೊನೆಗೊಳ್ಳಲಿದೆ. ಇದು ಬಹುಶಃ ಮೇ 2022 ರಲ್ಲಿ ಪ್ರಾರಂಭವಾದ ಬಡ್ಡಿದರ ಹೆಚ್ಚಳದ ಚಕ್ರದಲ್ಲಿ ಕೊನೆಯ ಏರಿಕೆಯಾಗಿರಬಹುದು. 


ಇದನ್ನೂ ಓದಿ : Big Update: UPI ಹಣ ಪಾವತಿ ಮೇಲೆ ಶೇ.0.3 ಶುಲ್ಕ ವಿಧಿಸಲಿದೆ ಸರ್ಕಾರ! ಇಲ್ಲಿದೆ ಫುಲ್ ಡಿಟೇಲ್..


6.50 ಪ್ರತಿಶತಕ್ಕೆ ಏರಿದ ಬಡ್ಡಿದರ :


ಹಣದುಬ್ಬರವನ್ನು ನಿಯಂತ್ರಿಸಲು, RBI ಮೇ 2022 ರಿಂದ ನಿರಂತರವಾಗಿ ನೀತಿ ಬಡ್ಡಿದರವನ್ನು ಹೆಚ್ಚಿಸುವ ನಿಲುವನ್ನು ಅಳವಡಿಸಿಕೊಂಡಿದೆ. ಈ ಸಮಯದಲ್ಲಿ, ರೆಪೋ ದರವು ನಾಲ್ಕು ಪ್ರತಿಶತದಿಂದ 6.50 ಪ್ರತಿಶತಕ್ಕೆ ಏರಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲೂ ರೆಪೋ ದರವನ್ನು ಶೇ.0.25ರಷ್ಟು ಹೆಚ್ಚಿಸಲಾಗಿತ್ತು.


ಪರಿಶೀಲಿಸಿದ ನಂತರ ನಿರ್ಧಾರ :


ಎಂಪಿಸಿ ಸಭೆಯಲ್ಲಿ, ವಿತ್ತೀಯ ನೀತಿಗೆ ಸಂಬಂಧಿಸಿದ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಸಮಯದಲ್ಲಿ, ಹೆಚ್ಚಿನ ಚಿಲ್ಲರೆ ಹಣದುಬ್ಬರದ ಪರಿಸ್ಥಿತಿ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಕೇಂದ್ರ ಬ್ಯಾಂಕ್‌ಗಳ ಇತ್ತೀಚಿನ ಹಂತಗಳು - ಯುಎಸ್ ಫೆಡರಲ್ ರಿಸರ್ವ್, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಅನ್ನು ಸಹ ವಿಶ್ಲೇಷಿಸಲಾಗುತ್ತದೆ.


ಇದನ್ನೂ ಓದಿ : Ration Card New Rules: ಪಡಿತರ ಚೀಟಿದಾರರಿಗೆ ಜಾಕ್‌ಪಾಟ್, ದೇಶಾದ್ಯಂತ ಹೊಸ ನಿಯಮ ಅನ್ವಯ


ತಜ್ಞರ ಅಭಿಪ್ರಾಯವೇನು ಗೊತ್ತಾ?


ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಜನವರಿಯಲ್ಲಿ 6.52 ಮತ್ತು ಫೆಬ್ರವರಿಯಲ್ಲಿ 6.44 ರಷ್ಟಿತ್ತು. ಚಿಲ್ಲರೆ ಹಣದುಬ್ಬರದ ಈ ಮಟ್ಟವು ಆರ್‌ಬಿಐನ ಆರಾಮದಾಯಕ ಮಟ್ಟವಾದ ಶೇಕಡಾ ಆರಕ್ಕಿಂತ ಹೆಚ್ಚಾಗಿದೆ. ಆಕ್ಸಿಸ್ ಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞ ಸೌಗತ ಭಟ್ಟಾಚಾರ್ಯ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ನಾನು ಇನ್ನೊಂದು ಅಂತಿಮ 0.25 ರಷ್ಟು ದರಗಳಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತೇನೆ" ಎಂದಿದ್ದರು.


6 ಸಭೆಗಳನ್ನು ಆಯೋಜಿಸಲಾಗುವುದು : 


ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಅವರು ಕಳೆದ ಎರಡು ತಿಂಗಳಿನಿಂದ ಹಣದುಬ್ಬರವು ಶೇಕಡಾ 6 ಕ್ಕಿಂತ ಹೆಚ್ಚು ಉಳಿದಿದೆ ಮತ್ತು ದ್ರವ್ಯತೆ ಈಗ ಬಹುತೇಕ ತಟಸ್ಥವಾಗಿದೆ, ಆರ್‌ಬಿಐ ಮತ್ತೊಮ್ಮೆ ರೆಪೋ ದರವನ್ನು ಶೇಕಡಾ 0.25 ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಇದರೊಂದಿಗೆ, ತನ್ನ ನಿಲುವನ್ನು ತಟಸ್ಥವೆಂದು ಘೋಷಿಸುವ ಮೂಲಕ, RBI ದರ ಏರಿಕೆಯ ಹಂತವು ಮುಗಿದಿದೆ ಎಂದು ಸೂಚಿಸಬಹುದು. ಒಟ್ಟಾರೆಯಾಗಿ, 2023-24 ರ ಸಂಪೂರ್ಣ ಹಣಕಾಸು ವರ್ಷದಲ್ಲಿ, ಆರ್‌ಬಿಐ ಒಟ್ಟು ಆರು ಎಂಪಿಸಿ ಸಭೆಗಳನ್ನು ಆಯೋಜಿಸುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.