RBI Monetary Policy: ಕೈಗೆಟುಕುವ ಗೃಹ ಸಾಲದ ಭರವಸೆಯ ನಿರೀಕ್ಷೆಗೆ ತಣ್ಣೀರೇರೆಚಿದ RBI
RBI Monetary Policy: RBI ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ನೇತೃತ್ವದ ಹಣಕಾಸು ನೀತಿ ಸಮಿತಿ (MPC) ತನ್ನ ನೀತಿಗತ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸತತ ಎಂಟನೇ ಬಾರಿಗೆ, ಸಮಿತಿ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೊ ದರವನ್ನು (Repo Rate) ಶೇ. 4 ಮತ್ತು ರಿವರ್ಸ್ ರೆಪೊ ದರವನ್ನು (Reverse Repo Rate) ಶೇ. 3.35% ಕ್ಕೆ ಕಾಯ್ದಿರಿಸಿದೆ.
RBI Monetary Policy: RBI ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ನೇತೃತ್ವದ ಹಣಕಾಸು ನೀತಿ ಸಮಿತಿ (MPC) ತನ್ನ ನೀತಿಗತ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸತತ ಎಂಟನೇ ಬಾರಿಗೆ, ಸಮಿತಿ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೊ ದರವನ್ನು (Repo Rate) ಶೇ. 4 ಮತ್ತು ರಿವರ್ಸ್ ರೆಪೊ ದರವನ್ನು (Reverse Repo Rate) ಶೇ. 3.35% ಕ್ಕೆ ಕಾಯ್ದಿರಿಸಿದೆ. ಆದರೆ, ಬ್ಯಾಂಕ್ ನ ಈ ನಿರ್ಧಾರದಿಂದ ಕೈಗೆಟುಕುವ ಗೃಹ ಸಾಲದ ಭರವಸೆಯ ನಿರೀಕ್ಷೆ ಮುರಿದುಬಿದ್ದಂತಾಗಿದೆ. ಆಹಾರ ಧಾನ್ಯಗಳ ದಾಖಲೆಯ ಉತ್ಪಾದನೆಯಿಂದಾಗಿ ಮುಂಬರುವ ತಿಂಗಳಲ್ಲಿ ಆಹಾರ ಹಣದುಬ್ಬರ ಕಡಿಮೆ ಇರುವ ನಿರೀಕ್ಷೆಯಿದೆ ಎಂದು RBI ಗವರ್ನರ್ ಶಕ್ತಿಕಾಂತ ದಾಸ್ (RBI Governor Shaktikanta Das) ಹೇಳಿದ್ದಾರೆ. ಕಡಿಮೆ ಸೋಂಕಿನ ದರ ಹಾಗೂ ವ್ಯಾಪಕ ಲಸಿಕಾಕರಣದಿಂದ ಲಸಿಕೆಯ ಖಾಸಗಿ ಬಳಕೆಗೆ ಪ್ರೋತ್ಸಾಹನ ಸಿಗುತ್ತಿದೆ ಎಂದು ಅವರು ಹೇಳಿದ್ದಾರೆ. ಆದರೆ ಪ್ರಮುಖ ಹಣದುಬ್ಬರದ ಸ್ಥಿತಿ ಇನ್ನೂ ಸಂಕೀರ್ಣವಾಗಿಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.
ಬೆಳವಣಿಗೆಗಾಗಿ ಸುಸ್ಥಿರ ಆಧಾರದ ಮೇಲೆ ಪುನರುಜ್ಜೀವನಕ್ಕಾಗಿ ತನ್ನ ಮೃದುವಾದ ನಿಲುವನ್ನು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಮುಂದುವರೆಸಲಿದೆ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಕೋವಿಡ್ -19 ಆರಂಭದಿಂದಲೇ ಕೇಂದ್ರೀಯ ಬ್ಯಾಂಕ್ ಸುಮಾರು 100 ಕ್ಕೂ ಅಧಿಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹಣದುಬ್ಬರವು ನಿರೀಕ್ಷೆಗಿಂತ ಹೆಚ್ಚು ಅನುಕೂಲಕರವಾಗಿದೆ ಮತ್ತು ಆರ್ಥಿಕ ಚಟುವಟಿಕೆಗಳು ಕ್ರಮೇಣ ವೇಗ ಪಡೆದುಕೊಳ್ಳುತ್ತಿವೆ. 2021-22ರ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಶೇ. 9.5ಕ್ಕೆ ಉಳಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಹೀಗೆ ಮಾಡದೆ ಹೋದರೆ Netflix,DTH ಮತ್ತು ಇತರ ಸೇವೆಗಳು ಸ್ಥಗಿತ...!
>> ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ. 7.9, ಮೂರನೇ ತ್ರೈಮಾಸಿಕದಲ್ಲಿ ಶೇ.6.8 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 6.1 ರಷ್ಟು ಇರಲಿದೆ.
>> 2022-23ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ, ದೇಶದ ವಾಸ್ತವಿಕ ಜಿಡಿಪಿ ಶೇ.17.1 ಇರಲಿದೆ ಎಂದು ನಿರೀಕ್ಷಿಸಲಾಗಿದೆ.
>> 2021-2022ರ ಆರ್ಥಿಕ ವರ್ಷದಲ್ಲಿ, ಸಿಪಿಐ ಹಣದುಬ್ಬರವು ಶೇ. 5.3 ರಷ್ಟು ಇರಲಿದೆ. ಕಳೆದ ಸಭೆಯಲ್ಲಿ ಇದನ್ನು ಶೇ.5.7 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು.
ಇದನ್ನೂ ಓದಿ-Auto Debit Payments: ಡೆಬಿಟ್-ಕ್ರೆಡಿಟ್ ಕಾರ್ಡ್ ಪೇಮೆಂಟ್ ನಿಯಮ ಬದಲಿಸಿದ RBI; ಅಕ್ಟೋಬರ್ 1 ರಿಂದ ಅನ್ವಯ
>> ಎರಡನೇ ತ್ರೈಮಾಸಿಕದಲ್ಲಿ ಹಣದುಬ್ಬರವು ಶೇ.5.1ರಷ್ಟು, ಮೂರನೇ ತ್ರೈಮಾಸಿಕದಲ್ಲಿ ಶೇ.4.5ರಷ್ಟು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ.5.8ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ.
>> 2022-2023ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ, ಸಿಪಿಐ ಹಣದುಬ್ಬರವು ಶೇ. 5.2 ರಷ್ಟು ಇರುವ ಸಾಧ್ಯತೆಯಿದೆ.
>> ರೆಪೊ ದರವನ್ನು ಶೇ.4 ಮತ್ತು ರಿವರ್ಸ್ ರೆಪೊ ದರ ಶೇ.3.35ಕ್ಕೆ ಕಾಯ್ದಿರಿಸಲಾಗಿದೆ.
ಇದನ್ನೂ ಓದಿ-ನವೆಂಬರ್ 4 ರವರೆಗೆ ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ ಪಡೆಯಿರಿ 10,000 ರೂ. ವರೆಗೆ ಕ್ಯಾಶ್‌ಬ್ಯಾಕ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ